ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮತ್ತು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಸಹಯೋಗದಲ್ಲಿ ಶ್ರೀ ಅಮರ ಶಿಲ್ಪಿ ಜಕ್ಕಣ್ಣಚಾರ್ಯ ಜನ್ಮದಿನೋತ್ಸವ ಗುರುವಾರ ನಗರದ ಉರ್ವಸ್ಟೋರ್ ತುಳು ಭವನದಲ್ಲಿ ನಡೆಯಿತು.
ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಡಳಿತಾಧಿಕಾರಿ ಕೆ ಉಮೇಶ್ ಆಚಾರ್ಯ ಪಾಂಡೇಶ್ವರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 800 ವರ್ಷಗಳ ಹಿಂದೆ ಅಮರ ಶಿಲ್ಪಿ ಜಕ್ಕಣ್ಣಚಾರ್ಯರವರ ಕೈಚಳಕದಲ್ಲಿ ಶಿಲ್ಪಕಾರ್ಯ ಮೂಡಿ ಬಂದಿರುವುದು ವಿಶ್ವಮಾನ್ಯವಾದುದು. ಆಧುನಿಕ ಶಿಲ್ಪ ಜಗತ್ತಿಗೆ ಇದುವೇ ಮೂಲವಾಗಿದೆ ಎಂದು ಹೇಳಿದರು.
ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಮಾಜಿ ಮೊಕ್ತೇಸರ ಸುಂದರ ಆಚಾರ್ಯ ಬೆಳುವಾಯಿ ಅಮರ ಶಿಲ್ಪಿ ಜಕಣಚಾರ್ಯ ಶಿಲ್ಪ ಕೆಲಸ ಅತ್ಯಂತ ಸುತ್ಯಾರ್ಹ ಕರ್ನಾಟಕ ರಾಜ್ಯದಲ್ಲಿ ಹಲವಾರು ದೇವಾಲಯದಲ್ಲಿ ಅವರ ಶಿಲ್ಪಕೊಡುಗೆಯಿದ್ದು, ಇಂದಿಗೂ ವಿಶ್ವವಿಖ್ಯಾತವಾದುದು ಎಂದು ಹೇಳಿದರು.
ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ ಮಾಜಿ 3ನೇ ಮೊಕ್ತೇಸರ ಲೋಕೇಶ್ ಆಚಾರ್ಯ ಚಿಲಿಂಬಿ, ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಡಳಿತ ಮಂಡಳಿಯ ಮಾಜಿ ಸದಸ್ಯ ಹರೀಶ್ ಬೋಳೂರು, ಕ್ಷೇತ್ರದ ಆಡಳಿತ ಮಂಡಳಿಯ ಮಾಜಿ ವಿಶೇಷ ಆಹ್ವಾನಿತರಾದ ಶಾಮ ಡಿ ಆಚಾರ್ಯ, ಪಿ ರವೀಂದ್ರ ಮಂಗಳಾದೇವಿ, ಸುಜೀರ್ ವಿನೋದ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.



