ವಿನಯ್ ದೊಡ್ಡ ಕೊಪ್ಪಲು
ಕೆ.ಆರ್.ನಗರ : ಸುಗ್ಗಿಯ ನಂತರ ನಡೆಯುವ ಮೊದಲ ಜಾತ್ರೆ, ರೈತರ ಅಭಿಮಾನ ಮತ್ತು ಪ್ರೀತಿಗೆ ಸಾಕ್ಷಿಯಾದ ಜೋಡೆತ್ತುಗಳು.
ಎಲ್ಲಿ ನೋಡಿದರೂ ದೇಶಿ ತಳಿಯ ಗೋ ಸಂಪತ್ತಿನ ದರ್ಬಾರ್, ಶ್ರೀಮಂತ ರೈತರ ವೈಭೋಗದ ರಾಸುಗಳಿಗೆ ಶೃಂಗಾರಗೊಂಡ ಚಪ್ಪರ, ಜಾನುವಾರು ಕೊಳ್ಳುವ ಮಾರಾಟ ಮಾಡುವ ಭರ್ಜರಿ ಭರಾಟೆ,ಜಾತ್ರೆ ನೋಡಲು ಹರಿದು ಬರುತ್ತಿರುವ ಜನಸಾಗರ
ಇದು ದಕ್ಷಿಣ ಭಾರತದಲ್ಲಿ ಹೆಸರು ವಾಸಿಯಾಗಿರುವ ಸಾಲಿಗ್ರಾಮ ತಾಲೂಕು ಚುಂಚನಕಟ್ಟೆಯಲ್ಲಿ ಜನವರಿ 1 ರಿಂದ ಆರಂಭವಾಗಿರುವ ಗ್ರಾಮೀಣ ಸೊಗಡಿನ
ಇತಿಹಾಸ ಪ್ರಸಿದ್ದ ಚುಂಚನಕಟ್ಟೆ ಜಾನುವಾರು ಜಾತ್ರೆಯ ದೃಶ್ಯ ವೈಭವಗಳು.

30 ಸಾವಿರ ರೂ.ಗಳಿಂದ ಪ್ರಾರಂಭವಾಗಿ 8ಲಕ್ಷಕ್ಕೂ ಅಧಿಕ ಬೆಲೆಬಾಳುವ ದುಬಾರಿ ಎತ್ತುಗಳ ಜಾತ್ರೆಯಲ್ಲಿ ಜನಾಕರ್ಷಣೆಯ ಕೇಂದ್ರ ಬಿಂದುವಾಗಿದ್ದು ಪಶುಸಂಗೋಪನೆ ಇಲಾಖೆ ಮಾಹಿತಿ ಪ್ರಕಾರ ಸುಮಾರು 15 ರಿಂದ 20 ಸಾವಿರಕ್ಕೂ ಅಧಿಕ ಜಾನುವಾರುಗಳು ಅಗಮಿಸಲಿದ್ದು ರೈತರು ತಮ್ಮ ರಾಸುಗಳ ಮೇಲಿರುವ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳಲು ರಾಸುಗಳಿಗೆ ಬೃಹತ್ ಶಾಮಿಯಾನ, ವಿದ್ಯುತ್ ಅಲಂಕಾರಿಕ ಚಪ್ಪರ ಹಾಕಿಸಿದ್ದಾರೆ.

ಕೃಷಿಗೆ ಯಂತ್ರೋಪಕರಣಗಳ ಬಳಕೆ ಇದ್ದರೂ, ರೈತರಿಗೆ ಜೋಡೆತ್ತುಗಳ ಮೇಲೆ ಪ್ರೀತಿ ಕಡಿಮೆಯಾಗಿಲ್ಲ. ‘ಗಂಡು ರಾಸುಗಳ ಜತ್ರೆ’ ಎಂದೇ ಹೆಸರು ಪಡೆದಿರುವ ಈ ಜಾತ್ರೆಯಲ್ಲಿ ಎತ್ತುಗಳು ಭಗವಹಿಸುವಿಕೆ ಮಾತ್ರವಲ್ಲದೆ ಹೋರಿಗಳು, ಹೆಚ್ಚು ದುಡಿಮೆಗೆ ಒಗ್ಗುವ ಹಳ್ಳಿಕಾರ್ ತಳಿಯ ಎತ್ತುಗಳು ಪ್ರಮುಖ ಆಕರ್ಷಣೆಯಾಗಿವೆ.
ಚುಂಚನಕಟ್ಟೆಗೆ ತೆರಳುತ್ತಿರುವ ಕುಪ್ಪೆ ಗ್ರಾಮದ ಉಮೇಶ್ -ಕುಮಾರ್- ಸ್ವಾಮೇಗೌಡ ಅವರ
4 ಲಕ್ಷದ ಮೌಲ್ಯದ ರಾಸುಗಳು

ಜಾತ್ರೆಗೆ ರಾಸುಗಳನ್ನು ಕೊಳ್ಳಲು ಗದಗ, ಹುಬ್ಬಳ್ಳಿ, ಧಾರವಾಡ, ಕಲಬುರುಗಿ, ವಿಜಯಪುರ, ದಾವಣಗೆರೆ, ಶಿವಮೊಗ್ಗ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಿಂದ ಹಾಗೂ ಆಂಧ್ರ, ಮಹಾರಾಷ್ಟ್ರ, ತಮಿಳುನಾಡು ಕಡೆಯಿಂದಲೂ ರೈತರು ಬರುತ್ತಿದ್ದು, ಕೋಟ್ಯಾಂತರ ರೂ.ಗಳ ವ್ಯವಹಾರ ನಡೆಯಲಿದ್ದು ನಾಳೆಯಿಂದ ಇದು ಇನ್ನಷ್ಟು ಹೆಚ್ಚಲಿದೆ
ಜಾತ್ರೆಯಲ್ಲಿ ತಮ್ಮ ಪ್ರತಿಷ್ಟೆ ತೋರಿಸಿಕೊಳ್ಳಲು ಜಾನುಪ್ರಿಯ ರೈತರು ನೂರಾರು ಮಂದಿಯ ಜತೆಗೂಡಿ ಅದ್ದೂರಿ ವಾದ್ಯಗೋಷ್ಠಿಯ ಜತೆ ಅದ್ದೂರಿ ಮೆರವಣಿಗೆ ಮೂಲಕ ರೈತರು ತಮ್ಮ ಎತ್ತುಗಳನ್ನು ಜಾತ್ರಾ ಆವರಣಕ್ಕೆ ಕರೆತಂದಿದ್ದು ರಾಸುಗಳಿಗೆ ಪೌಷ್ಠಿಕಾಂಶ ಭರಿತ ಭೋಜನ ನೀಡಿ ಅವುಗಳ ಮೇಲಿರುವ ಕಾಳಜಿಯನ್ನು ತೋರುತ್ತಿದ್ದಾರೆ
ರಾಸುಗಳ ಕ್ಯಾಟ್‌ವಾಕ್
ಅಲಂಕಾರಗೊಂಡಿರುವ ರಾಸುಗಳನ್ನು ಕ್ಯಾಟ್ ವಾಕ್ ಮಾದರಿಯಲ್ಲಿ ರಸ್ತೆಗಳಲ್ಲಿ ನಡೆಸಿ ಖರೀದಿದಾರರನ್ನು ಕರ್ಷಣೆ ಮಾಡುತ್ತಿರುವುದು ಗಮನ ಸೆಳೆಯುತ್ತಿದೆ.
ಬೀಡು ಬಿಟ್ಟಿರುವ ಕುಪ್ಪೆ ಗ್ರಾ.ಪಂ.ಮತ್ತು ಪಶು ಇಲಾಖೆ- ಚೆಸ್ಕಾಂ ಇಲಾಖೆ
ಶಾಸಕ ಡಿ.ರವಿಶಂಕರ್ ಅವರ ಸೂಚನೆಯ ಮೇರೆಗೆ ಕುಪ್ಪೆ ಗ್ರಾ.ಪಂ.ನವರು ಕುಡಿಯುವ ನೀರು, ಸ್ವಚ್ಚತೆ ನಿರ್ವಹಣೆಯ ಜವಬ್ದಾರಿ ಹೊತ್ತು ಜಾತ್ರೆಯಲ್ಲಿ ಇವುಗಳ ನಿರ್ವಹಣೆಗಾಗಿ ಶ್ರಮಿಸುತ್ತಿದ್ದು ಇವರ ಜತೆ ರಾಸುಗಳಿಗೆ ಯಾವುದೇ ರೋಗ ರುಜಿನಗಳು ಬಾರದಂತೆ ಕೆ.ಆರ್.ನಗರ ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ.ಕೆ.ಸಿ.ರಾಮು ನೇತೃತ್ವದಲ್ಲಿ ತಾತ್ಕಾಲಿಕ ಪಶು ಕೇಂದ್ರವನ್ನು ಆರಂಭಿಸಲಾಗಿದೆ ಇನ್ನು ಕೆ.ಆರ್.ನಗರ ಚೆಸ್ಕಾಂ ಎಇಇ ಅರ್ಕೇಶ್ ಮೂರ್ತಿ ಅವರ ನೇತೃತ್ವದಲ್ಲಿ ಹೊಸೂರು ಚೆಸ್ಕಾಂ ಇಂಜಿನಿಯರ್ ಮಹದೇವ್ ಮತ್ತು ಸಿಬ್ಬಂದಿಗಳನ್ನು ಜಗಮಘಿಸುವ ವಿದ್ಯುತ್ ಅಲಂಕಾರದ ಮೇರಗು ತಂದು ಜಾತ್ರೆಗೆ ಕಳೆ ತಂದಿದ್ದಾರೆ
ತಿಂಡಿ ತಿನಿಸುಗಳ ಭರ್ಜರಿ ವ್ಯಾಪಾರ

ಜಾತ್ರೆಯಲ್ಲಿ ಸಿಹಿತಿಂಡಿ, ಜ್ಯೂಸ್, ಪಾನಿಪುರಿ, ಗೋಬಿಯ ಜತೆಗೆ ರೈತರಿಗೆ ಅತ್ಯವಶ್ಯಕವಾಗಿರುವ ನೊಗ, ಒನಕೆ ಸೇರಿದಂತೆ ವಿವಿಧ ಬಗೆಯ ಆಟಿಕೆಗಳ ಅಂಗಡಿ ಮುಂಗಟ್ಟು ಮತ್ತು ವಿವಿಧ ಬಗೆಯ ಸಸ್ಯಹಾರಿ ಮತ್ತು ಮಾಂಸಹಾರ ಹೋಟೆಲ್‌ಗಳಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತಿದೆ. ಗ್ರಾಮೀಣ ಪರಂಪರೆಯ ನಡುವೆಯೂ ಇಲ್ಲಿನ ಜಾನು ವಾರು ಜಾತ್ರೆಯ ಸೊಬಗನ್ನು ಕಣ್ಣುಂಬಿಕೊಳ್ಳಲು ಮತ್ತು ಶ್ರೀರಾಮದೇವರ ದೇವಾಲಯ, ಕಾವೇರಿ ನದಿಯ ಜಲಪಾತ, ಜಾತ್ರೆಯ ತಿಂಡಿ ತಿನಿಸುಗಳನ್ನು ಸವಿಯಲು ಇಲ್ಲಿಗೆ ನೀವೂ ಒಮ್ಮೆ ಬರಬೇಕು. ಅದಕ್ಕಾಗಿ ಕೈಬೀಸಿ ಕರೆಯುತ್ತಿದೆ. ಚುಂಚನ ಕಟ್ಟಿ ಜಾನುವಾರು ಜಾತ್ರೆ,
ಜಾತ್ರೆಗೆ ಚಾಲನೆ
ಕೆ.ಆರ್.ನಗರ : ಚುಂಚನಕಟ್ಟೆಯಲ್ಲಿ ಆರಂಭವಾದ ಜಾನುವಾರು ಜಾತ್ರೆಗೆ ಗುರುವಾರ ಮೈಸೂರು ಜಿಲ್ಲಾ ಸಹಕಾರ ಬ್ಯಾಂಕಿನ ಅಧ್ಯಕ್ಷ ದೊಡ್ಡಸ್ವಾಮೇಗೌಡ ಚಾಲನೇ ನೀಡಿದರು
ಇಲ್ಲಿನ ಬಸವನ ವೃತ್ತದಲ್ಲಿ ರಾಸುಗಳಿಗೆ ತಾಲೂಕು ಆಡಳಿತದ ಸಮ್ಮುಖದಲ್ಲಿ
ಪೂಜೆ ಸಲ್ಲಿಸಿ ರೈತರಿಗೆ ನೀರು ಕುಡಿಸುವ ಬಕೆಟ್ ಗಳನ್ನ ವಿತರಿಸಿ ಜಾತ್ರೆಗೆ ಶುಭಕೋರಿದರು
ನಂತರ ಮಾತನಾಡಿದ ಅವರು ಈ ಜಾತ್ರೆಗೆ ಶಾಸಕ ಡಿ.ರವಿಶಂಕರ್ ಅವರ ನೇತೃತ್ವದಲ್ಲಿ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಿ ಸಲಾಗಿದ್ದು ಅಧಿಕಾರಿಗಳು ಜಾತ್ರೆಯ ಯಶಸ್ವಿಗೆ ಶ್ರಮಿಸುವಂತೆ ಹೇಳಿದರು.
” ರಾಜ್ಯ ಮಟ್ಟದಲ್ಲಿ ಪ್ರಚಾರ ಕೊಡಲಿ”
ಚುಂಚನಕಟ್ಟೆ ಜಾನುವಾರು ಜಾತ್ರೆಗೆ ರಾಜ್ಯ ಮತ್ತು ಹೊರ ರಾಜ್ಯದಲ್ಲಿ ಸಾಕಷ್ಟು ಪ್ರಸಿದ್ದಿ ಪಡೆದಿದ್ದು ಜಾತ್ರೆ ಅರಂಭದ ಕುರಿತು ಜಿಲ್ಲಾಡಳಿತ ರಾಜ್ಯಮಟ್ಟದಲ್ಲಿ ಪ್ರಚಾರ ಮಾಡುವ ಮೂಲಕ ಈ ಜಾನುವಾರು ಜಾತ್ರೆ ಮೆರೆಗು ತರುವ ಕೆಲಸ ಮಾಡಲಿ

HDK ಭಾಸ್ಕರ್
ಅಧ್ಯಕ್ಷ
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕೆ.ಆರ್.ನಗರ ಕ್ಷೇತ್ರ



