Friday, January 2, 2026
Google search engine

Homeಅಪರಾಧಗಂಡು ಮಗು ಬೇಡಿಕೆ: ಪತಿ, ಮಾವ ಬಂಧನ

ಗಂಡು ಮಗು ಬೇಡಿಕೆ: ಪತಿ, ಮಾವ ಬಂಧನ

ಚಿಕ್ಕಮಗಳೂರು : ಜಿಲ್ಲೆಯ ತರೀಕೆರೆ ತಾಲೂಕಿನ ನಂದಿಹೊಸಹಳ್ಳಿಯಲ್ಲಿ ಪತಿ ತನ್ನ ಪತ್ನಿಗೆ ಗಂಡು ಮಗು ಬೇಕೆಂದು ನಿರಂತರವಾಗಿ ಕಿರುಕುಳ ನೀಡುತ್ತಿದ್ದಾನೆ. ಈ ಪ್ರಕರಣದಲ್ಲಿ ಪತಿ ತಿಮ್ಮಪ್ಪ ಮತ್ತು ಮಾವ ಗುಂಡಪ್ಪ ಅವರನ್ನು ಬಂಧಿಸಲಾಗಿದೆ.

ತಾರಾ ಎಂಬ ಮಹಿಳೆ ಡಿ.29ರಂದು ಲಿಂಗದಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಾರಾ ಅವರು ತಮ್ಮ ಮೇಲೆ ನಡೆದ ದೌರ್ಜನ್ಯದ ಬಗ್ಗೆ ದೂರಿನಲ್ಲಿ ಹಂಚಿಕೊಂಡಿದ್ದಾರೆ, ಊಟ ಮಾಡುತ್ತಿದ್ದಾಗ ತನ್ನ ತಟ್ಟೆಯನ್ನು ಕಿತ್ತು ನೆಲಕ್ಕೆಸೆದು, ನಂತರ ಬಟ್ಟೆ ಬಿಚ್ಚಿಸಿ ತೀವ್ರವಾಗಿ ಹಲ್ಲೆ ನಡೆಸಿದ್ದಾಗಿ ವಿವರಿಸಿದ್ದಾರೆ. ತಾರಾ ಅವರ ಹೇಳಿಕೆಯ ಪ್ರಕಾರ, ಈ ಘಟನೆಯು ಸಂಜೆ ನಡೆದಿದೆ.

ಅವರು ತಮ್ಮ ಕೆಲಸ ಮುಗಿಸಿ ಊಟಕ್ಕೆ ಕುಳಿತಿದ್ದಾಗ, ಪತಿ ತಿಮ್ಮಪ್ಪ “ನನಗೆ ಊಟ ಹಾಕಲ್ಲ, ನೀನು ಮಾತ್ರ ಊಟ ಮಾಡುತ್ತೀಯಾ” ಎಂದು ಹೇಳಿದ್ದಾನೆ. ನಂತರ ಆಕೆಯನ್ನು ವಿವಸ್ತ್ರಗೊಳಿಸಿ, ದೊಣ್ಣೆಯಿಂದ ಹೊಡೆದಿದ್ದಾನೆ. ತಾರಾ ಹಿಂಬಾಗಿಲಿನಿಂದ ಓಡಿಹೋಗಿ ಟವಲ್ ಸುತ್ತಿಕೊಂಡು ನೆರೆಮನೆಯವರ ಸಹಾಯದಿಂದ ಆಸ್ಪತ್ರೆಗೆ ಹೋಗಿದ್ದಾರೆ. ಲಿಂಗದಹಳ್ಳಿ ಪೊಲೀಸರ ಸಹಕಾರದಿಂದ ತಾವು ಜೀವಂತ ಉಳಿದಿರುವುದಾಗಿ ತಾರಾ ತಿಳಿಸಿದ್ದು, ತಮಗೆ ನ್ಯಾಯ ಸಿಗಬೇಕು ಎಂದು ಬೇಡಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಪತಿ ಕುಟುಂಬ ಸದಸ್ಯರಿಂದ ಬೆದರಿಕೆ ಕರೆಗಳೂ ಬರುತ್ತಿವೆ ಎಂದು ಅವರು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular