Monday, January 5, 2026
Google search engine

Homeರಾಜ್ಯಕೋಗಿಲು ಪ್ರಕರಣ : ಮೋದಿ- ಅಮಿತ್ ಶಾ ಏನು ಮಾಡುತ್ತಿದ್ದಾರೆ? ರಾಮಲಿಂಗಾ ರೆಡ್ಡಿ ಪ್ರಶ್ನೆ

ಕೋಗಿಲು ಪ್ರಕರಣ : ಮೋದಿ- ಅಮಿತ್ ಶಾ ಏನು ಮಾಡುತ್ತಿದ್ದಾರೆ? ರಾಮಲಿಂಗಾ ರೆಡ್ಡಿ ಪ್ರಶ್ನೆ

ಕೋಲಾರ: ಬೆಂಗಳೂರು ಉತ್ತರ ಸಮೀಪದ ಕೋಗಿಲು ಬಡಾವಣೆಯಲ್ಲಿ ನೆಲೆಸಿರುವವರು ಬಾಂಗ್ಲಾ ದೇಶದವರು ಎಂದು ಬಿಜೆಪಿಯವರು ಹೇಳುತ್ತಿದ್ದು, ಹಾಗಾದರೆ ಕೇಂದ್ರ ಸರ್ಕಾರ ಏನು ಮಾಡುತ್ತಿದೆ? ಎಂದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರಶ್ನಿಸಿದ್ದಾರೆ.

ಈ ಕುರಿತು ಮಾಲೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಗಿಲುವಿನಲ್ಲಿ ಹೊರಹಾಕಲ್ಪಟ್ಟವರು ಅಕ್ರಮ ಬಾಂಗ್ಲಾದೇಶಿ ವಲಸಿಗರು ಎಂದು ಬಿಜೆಪಿ ಹೇಳಿಕೊಳ್ಳುತ್ತಿದೆ, ಹಾಗಾದರೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್‌ ಶಾ ಏನು ಮಾಡುತ್ತಿದ್ದಾರೆ. ಏಕೆ ಅವರನ್ನು ಇಲ್ಲಿಯವರೆಗೆ ಬರಲು ಬಿಟ್ಟಿದ್ದಾರೆ? ಬಾಂಗ್ಲಾದಿಂದ ಅಕ್ರಮವಾಗಿ ಬಂದಿದ್ದರೆ ಬಂಧಿಸಿ ಜೈಲಿಗೆ ಹಾಕಲಿ ಎಂದು ಸವಾಲು ಹಾಕಿದ್ದಾರೆ.

ಇನ್ನೂ ರಾಜ್ಯದವರು ಅಥವಾ ಅಕ್ಕಪಕ್ಕದ ರಾಜ್ಯದವರು ಆಗಿದ್ದರೆ ಅರ್ಹರಿಗೆ ಮನೆ ನೀಡಬೇಕಾಗುತ್ತದೆ ಎಂದರು ಅಲ್ಲದೆ ಬೆಂಗಳೂರು ಸುತ್ತಮುತ್ತ ಬಿಜೆಪಿ ಶಾಸಕರು ಭೂ ಮಂಜೂರಾತಿ ಸಮಿತಿ ಮೂಲಕ ಸಾವಿರಾರು ಎಕರೆಯನ್ನು ಕಾರ್ಯಕರ್ತರಿಗೆ ನೀಡಿದ್ದಾರೆ. ಸಿಬಿಐ ತನಿಖೆ ನಡೆಸಿದರೆ ಎಲ್ಲವೂ ಹೊರಗೆ ಬರುತ್ತದೆ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular