Wednesday, January 7, 2026
Google search engine

Homeವಿದೇಶರಷ್ಯಾದೊಂದಿಗೆ ತೈಲ ಒಪ್ಪಂದವನ್ನು ಕೊನೆಗೊಳಿಸದಿದ್ದರೆ, ಸುಂಕ ಏರಿಕೆ : ಭಾರತಕ್ಕೆ ಬೆದರಿಕೆ ಹಾಕಿದ ಟ್ರಂಪ್

ರಷ್ಯಾದೊಂದಿಗೆ ತೈಲ ಒಪ್ಪಂದವನ್ನು ಕೊನೆಗೊಳಿಸದಿದ್ದರೆ, ಸುಂಕ ಏರಿಕೆ : ಭಾರತಕ್ಕೆ ಬೆದರಿಕೆ ಹಾಕಿದ ಟ್ರಂಪ್

ವಾಷಿಂಗ್ಟನ್‌: ರಷ್ಯಾದೊಂದಿಗೆ ತೈಲ ಒಪ್ಪಂದವನ್ನು ಕೊನೆಗೊಳಿಸದಿದ್ದರೆ, ಭಾರತ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲಿನ ತನ್ನ ಅಸ್ತಿತ್ವದಲ್ಲಿರುವ ಸುಂಕವನ್ನು ಹೆಚ್ಚಿಸಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಹೇಳಿದ್ದು, ಪ್ರಧಾನಿ ಮೋದಿ ತುಂಬಾ ಒಳ್ಳೆಯ ವ್ಯಕ್ತಿ. ನಾನು ಸಂತೋಷವಾಗಿಲ್ಲ ಎನ್ನುವುದು ಅವರಿಗೆ ತಿಳಿದಿದೆ. ನನ್ನನ್ನು ಸಂತೋಷಪಡಿಸುವುದು ಮುಖ್ಯವಾಗಿತ್ತು. ಆದರೆ ಅವರು ರಷ್ಯಾದ ಜೊತೆ ವ್ಯಾಪಾರ ಮಾಡುತ್ತಾರೆ ಮತ್ತು ನಾವು ಅವರ ಮೇಲೆ ಬಹಳ ಬೇಗ ಮತ್ತಷ್ಟು ಸುಂಕವನ್ನು ಹೆಚ್ಚಿಸಬಹುದು ಎಂದು ಹೇಳಿದ್ದಾರೆ.

ಈ ಹಿಂದೆ ಟ್ರಂಪ್‌ ಭಾರತ ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸುತ್ತದೆ. ಮೋದಿ ನನಗೆ ಭರವಸೆ ನೀಡಿದ್ದಾರೆ ಎಂದಿದ್ದರು. ಆದರೆ ಈ ಹೇಳಿಕೆಯ ನಂತರವೂ ರಷ್ಯಾದಿಂದ ತೈಲ ಖರೀದಿಯನ್ನು ಭಾರತ ಮುಂದುವರಿಸಿದ್ದು, ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಲು ಭಾರತ ಮತ್ತು ಅಮೆರಿಕದ ಪ್ರತಿನಿಧಿಗಳ ನಡುವೆ ಇಲ್ಲಿಯವರೆಗೆ ಆರು ಸುತ್ತಿನ ಮಾತುಕತೆಗಳು ನಡೆದಿದ್ದರೂ ಇಲ್ಲಿಯವರೆಗೆ ಅಂತಿಮ ತಿರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ.

ಇನ್ನೂ ಡೊನಾಲ್ಡ್‌ ಟ್ರಂಪ್‌ ತೆರಿಗೆ ಸಮರ ಆರಂಭಿಸಿದ ಬಳಿಕ ಯುರೋಪ್‌ ಸೇರಿದಂತೆ ಹಲವು ದೇಶಗಳ ಮುಖ್ಯಸ್ಥರು ಅಮೆರಿಕಕ್ಕೆ ತೆರಳಿ ಮಾತುಕತೆ ನಡೆಸಿದ್ದರು. ಬೇರೆ ದೇಶಗಳಂತೆ ಭಾರತವು ಅಮೆರಿಕದ ಜೊತೆ ಮಾತುಕತೆ ನಡೆಸುತ್ತಿತ್ತು. ಮಾತುಕತೆಯ ವೇಳೆ ಹೈನುಗಾರಿಕೆ ಮತ್ತು ಕೃಷಿ ಕ್ಷೇತ್ರವನ್ನು ಬಿಟ್ಟುಕೊಡುವುದಿಲ್ಲ ಎಂದು ಹೇಳಿತ್ತು.

ಇನ್ನೂ ಈ ಬಗ್ಗೆ ಹಲವು ಸುತ್ತಿನ ಮಾತುಕತೆ ನಡೆದರೂ ಭಾರತ ತನ್ನ ಹಠವನ್ನು ಬಿಟ್ಟಿರಲಿಲ್ಲ. ಇದಕ್ಕೆ ಸಿಟ್ಟಾದ ಟ್ರಂಪ್‌ ಭಾರತದ ಕೆಲ ವಸ್ತುಗಳ ಮೇಲೆ 25% ಸುಂಕ ವಿಧಿಸಿದ್ದಾರೆ. ಅಮೆರಿಕ ಅಡಿಯಲ್ಲೇ ವೆನೆಜುವೆಲಾ ಇರಲಿದ್ದು, ಅದನ್ನು ಯಾರ ಸುಪರ್ದಿಗೂ ನೀಡಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಹೇಳಿದ್ದಾರೆ.

ವೆನುಜುವೆಲಾದಲ್ಲಿ ಅಮೆರಿಕ ಸೇನೆ ದಾಳಿ ಮತ್ತು ಕಾರ್ಯಾಚರಣೆ ಬಳಿಕ ಅದರ ಅಧ್ಯಕ್ಷ ನಿಕೋಲಸ್ ಮಡುರೊ ಕುಟುಂಬದ ಬಂಧನದ ಬಳಿಕ ಮಾರ್-ಎ-ಲಾಗೊ ಕ್ಲಬ್‌ನಲ್ಲಿ ಮೊದಲ ಬಾರಿಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೆನುಜುವೆಲಾ ಕುರಿತಂತೆ ಅಮೆರಿಕ ಸರ್ಕಾರದ ನಿಲುವು ಸ್ಪಷ್ಟಪಡಿಸಿದ್ದಾರೆ.

RELATED ARTICLES
- Advertisment -
Google search engine

Most Popular