Thursday, January 8, 2026
Google search engine

Homeದೇಶಶೇಖ್‌ ಹಸೀನಾರಿಗೊಂದು ನ್ಯಾಯ, ಕ್ರಿಕೆಟಿಗನ ಮುಸ್ತಫಿಜುರ್ ರೆಹಮಾನ್‌ಗೆ ಒಂದು ನ್ಯಾಯನಾ? : ಓವೈಸಿ

ಶೇಖ್‌ ಹಸೀನಾರಿಗೊಂದು ನ್ಯಾಯ, ಕ್ರಿಕೆಟಿಗನ ಮುಸ್ತಫಿಜುರ್ ರೆಹಮಾನ್‌ಗೆ ಒಂದು ನ್ಯಾಯನಾ? : ಓವೈಸಿ

ಹೊಸದಿಲ್ಲಿ: ಬಾಂಗ್ಲಾದೇಶದ ವೇಗದ ಬೌಲರ್‌ ಮುಸ್ತಫಿಜುರ್‌ ರೆಹಮಾನ್‌ ಮತ್ತು ಆ ದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾರಿಗೆ ಕೇಂದ್ರ ಸರ್ಕಾರ ಮಾಡುತ್ತಿರುವ ತಾರತಮ್ಯದ ಬಗ್ಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಉಲ್ಲೇಖಿಸಿದ್ದು, ಬಾಂಗ್ಲಾದಲ್ಲಿ ಶೇಖ್‌ ಹಸೀನಾರ ಸರ್ಕಾರ ನಂತರ ಆಗಸ್ಟ್ 5 ರಂದು ನೇರವಾಗಿ ಭಾರತಕ್ಕೆ ಬಂದಿದ್ದ ಅವರು ಅಂದಿನಿಂದ ಅವರು ಭಾರತದಲ್ಲಿ ರಾಜತಾಂತ್ರಿಕ ರಕ್ಷಣೆಯಲ್ಲಿದ್ದಾರೆ. ಬಾಂಗ್ಲಾ ಹಲವಾರು ಬಾರಿ ಶೇಖ್‌ ಹಸೀನಾರನ್ನು ವಾಪಸ್ ಕಳುಹಿಸಬೇಕೆಂದು ಒತ್ತಾಯಿಸಿದ್ದರೂ ಸಹ ಅವರನ್ನು ಕಳಸಿಕೊಡಲಾಗುತ್ತಿಲ್ಲ ಸದ್ಯ ಈ ಬಗ್ಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮಾತನಾಡಿದ್ದಾರೆ.

ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳ ನಾಯಕ ಉಸ್ಮಾನ್‌ ಹಾದಿ ಗುಂಡೇಟಿಗೆ ಬಲಿಯಾದ ನಂತರ ಪರಿಸ್ಥಿತಿ ಹಿಂಸಾಚಾರಕ್ಕೆ ತಿರುಗಿದ್ದು, ಸದ್ಯ ಹಿಂದೂಗಳ ಮೇಲೆ ಹಿಂಸಾಚಾರ ನಡೆಯುತ್ತಿರುವ ಹಿನ್ನೆಲೆ, ಐಪಿಎಲ್ ಫ್ರಾಂಚೈಸಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿದ್ದ ಬಾಂಗ್ಲಾ ವೇಗಿ ಮುಸ್ತಫಿಜುರ್ ರೆಹಮಾನ್ ಅವರನ್ನು ಬಿಡುಗಡೆ ಮಾಡುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಸೂಚನೆ ನೀಡಿತ್ತು.

ಆ ಬೆನ್ನಲ್ಲೇ ಕೆಕೆಆರ್‌ ಮುಸ್ತಫಿಜುರ್ ಅವರನ್ನು ತಂಡದಿಂದ ಬಿಡುಗಡೆ ಮಾಡಿತ್ತು. 2026ರ ಐಪಿಎಲ್ ಸೀಸನ್ ಆರಂಭಕ್ಕೂ ಮುನ್ನವೇ ಈ ನಿರ್ಧಾರ ಕೈಗೊಳ್ಳಲಾಗಿದ್ದು, ತಂಡಕ್ಕೆ ಅಗತ್ಯವಿದ್ದರೆ ಬದಲಿ ಆಟಗಾರನನ್ನು ಹುಡುಕಿಕೊಳ್ಳಲು ಅವಕಾಶ ನೀಡಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕರು, ಪ್ರವಾಸಿಗರ ಮೇಲೆ ದಾಳಿ ನಡೆಸಿ 22 ಜನ ಅಮಾಯಕರನ್ನು ಕೊಂದ ನಂತರವೂ ನಾವು ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಪಂದ್ಯವನ್ನು ಆಡಿದ್ದೇವೆ. ಆದರೆ ಅಂದು ಯಾವುದೇ ರೀತಿಯ ಪ್ರತಿಕ್ರಿಯೆ ನೀಡದ ಬಿಸಿಸಿಐ, ಈಗ ಬಾಂಗ್ಲಾ ಕ್ರಿಕೆಟಿಗನನ್ನು ವಾಪಸ್ ಕಳುಹಿಸುತ್ತಿದೆ. ಒಬ್ಬ ಬಾಂಗ್ಲಾದೇಶಿ ಮಹಿಳೆ ಶೇಖ್ ಹಸೀನಾರು ಭಾರತದಲ್ಲಿ ನೆಲೆಸಿರುವ ಬಗ್ಗೆ ಪ್ರಸ್ತಾಪಿಸಿದರು.

ಮುಂದುವರೆದು, ಭಾರತದಲ್ಲಿ ನೆಲೆಸಿರುವ ಅವರನ್ನು ಕೂಡ ವಾಪಸ್ ಕಳುಹಿಸಿ. ಅವರನ್ನು ಯಾಕೆ ದೇಶದಲ್ಲಿ ಕಾಪಾಡಿಕೊಳ್ಳಲಾಗುತ್ತಿದೆ ಎಂದು ಕೇಂದ್ರ ಸರ್ಕಾರಕ್ಕೆ ಪ್ರಶ್ನೆಗಳ ಸುರಿಮಳೆಯನ್ನು ಅಸಾದುದ್ದೀನ್ ಓವೈಸಿ ಸುರಿಸಿದರು.

ಕ್ರಿಕೆಟಿಗ ಮುಸ್ತಫಿಜುರ್ ಅವರನ್ನು ಬಿಡುಗಡೆ ಮಾಡಿದ ನಿರ್ಧಾರಕ್ಕೆ ಕಾಂಗ್ರೆಸ್ ಸಂಸದ ಶಶಿ ತರೂರ್ ಸೇರಿದಂತೆ ಹಲವು ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದು, ಕ್ರೀಡೆ ಮತ್ತು ರಾಜಕೀಯವನ್ನು ಬೆರೆಸುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇನ್ನೂ ಬಾಂಗ್ಲಾದೇಶದಲ್ಲಿ ಪ್ರತಿಭಟನೆ ತೀವ್ರಗೊಂಡ ನಂತರ ಶೇಖ್ ಹಸೀನಾ ಅಲ್ಲಿಂದ ಪಲಾಯನ ಮಾಡಿ ಭಾರತದಲ್ಲಿ ಆಶ್ರಯ ಪಡೆದಿದ್ದು, ಹಸೀನಾ ಅವರನ್ನು ಹಸ್ತಾಂತರಿಸುವಂತೆ ಬಾಂಗ್ಲಾದೇಶ ಸರ್ಕಾರವು ಭಾರತವನ್ನು ಕೇಳುತ್ತಿದೆ. ಆದರೆ, ಹಸೀನಾ ಕುಟುಂಬದ ಸದಸ್ಯರು ಇದು ರಾಜಕೀಯವಾಗಿ ತುಳಿಯೋದಕ್ಕೆ ನಡೆಸುತ್ತಿರುವ ಹುನ್ನಾರ ಎಂದು ಆರೋಪಿಸಿದ್ದಾರೆ.

RELATED ARTICLES
- Advertisment -
Google search engine

Most Popular