Saturday, January 10, 2026
Google search engine

Homeವಿದೇಶಇರಾನ್‌ ನಲ್ಲಿ ನಿಲ್ಲದ ಪ್ರತಿಭಟನೆ; ಟ್ರಂಪ್‌ ಭೇಟಿ ಮಾಡುವ ನಿರೀಕ್ಷೆಯಲ್ಲಿ ಪ್ರಿನ್ಸ್

ಇರಾನ್‌ ನಲ್ಲಿ ನಿಲ್ಲದ ಪ್ರತಿಭಟನೆ; ಟ್ರಂಪ್‌ ಭೇಟಿ ಮಾಡುವ ನಿರೀಕ್ಷೆಯಲ್ಲಿ ಪ್ರಿನ್ಸ್

ಸದ್ಯ ಇರಾನ್‌ ನಲ್ಲಿ ಭಾರಿ ಪ್ರತಿಭಟನೆಗಳೂ ನಡೆಯುತ್ತಿದ್ದು, ಪ್ರತಿಭಟನೆಗಳು ನಿಲ್ಲುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಅಲ್ಲದೆ ಪ್ರತಿಭಟನಾಕಾರರು ನಿನ್ನೆಯಿಂದ ಮತ್ತಷ್ಟು ಘೋಷಣೆಗಳನ್ನು ಕೂಗಿ ದೇಶಾದ್ಯಂತ ರ್ಯಾಲಿ ನಡೆಸಿದ್ದಾರೆ. ಇದರ ನಡುವೆ ದೇಶಭ್ರಷ್ಟ ಇರಾನ್ ರಾಜಕುಮಾರ ರೆಜಾ ಪಹ್ಲವಿ ಮುಂದಿನ ವಾರ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾರ್-ಎ-ಲಾಗೊ ನಿವಾಸಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ ಎನ್ನಲಾಗಿದೆ.

ಹೆಚ್ಚುತ್ತಿರುವ ಸಾವಿನ ಸಂಖ್ಯೆಯು ಅಮೆರಿಕದ ಮಧ್ಯಪ್ರವೇಶಿಸುವಿಕೆಯ ಅವಕಾಶವನ್ನು ಹೊಂದಿದ್ದು, ಇರಾನ್ ಶಾಂತಿಯುತ ಪ್ರತಿಭಟನಾಕಾರರನ್ನು ಹಿಂಸಾತ್ಮಕವಾಗಿ ಕೊಂದರೆ, ಅಮೆರಿಕ ಅವರ ರಕ್ಷಣೆಗೆ ಬರುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ.

ಈ ನಡುವೆ ಇರಾನ್‌ನಲ್ಲಿ ಆಹಾರ, ಔಷಧ ಮತ್ತು ಇಂಧನದಂತಹ ಮೂಲಭೂತ ವಸ್ತುಗಳ ಬೆಲೆಗಳು ಅಭೂತಪೂರ್ವವಾಗಿ ಏರಿಕೆಯಾಗಿದ್ದು, ನಿರುದ್ಯೋಗ ಸಮಸ್ಯೆ ಒಂದೆಡೆಯಾದರೆ, ವ್ಯಾಪಾರ ನಷ್ಟ, ನೂರಾರು ಮಾರುಕಟ್ಟೆಗಳು ಬಂದ್, ವ್ಯವಹಾರಗಳನ್ನು ಕೂಡ ತಾತ್ಕಾಲಿಕವಾಗಿ ನಿಲ್ಲಿಸುವ ಪರಿಸ್ಥಿತಿ ಎದುರಾಗಿದೆ. ಆರ್ಥಿಕ ನೋವು ಇನ್ನು ಮುಂದೆ ಉದ್ಯಮಿಗಳು ಅಥವಾ ವಿದ್ಯಾರ್ಥಿಗಳಿಗೆ ಸೀಮಿತವಾಗಿಲ್ಲ. ಇದು ಸಮಾಜದ ಪ್ರತಿಯೊಂದು ವರ್ಗದ ಮೇಲೆ ಪರಿಣಾಮ ಬೀರಿದೆ.

ಇನ್ನೂ ಡಿಸೆಂಬರ್ ಅಂತ್ಯದಲ್ಲಿ ಪ್ರತಿಭಟನೆಗಳು ಪ್ರಾರಂಭವಾದಾಗಿನಿಂದ ಇರಾನ್ ಭದ್ರತಾ ಪಡೆಗಳು ಎಂಟು ಅಪ್ರಾಪ್ತ ವಯಸ್ಕರು ಸೇರಿದಂತೆ ಕನಿಷ್ಠ 45 ಪ್ರತಿಭಟನಾಕಾರರನ್ನು ಕೊಂದಿದೆ ಎಂದು ನಾರ್ವೆ ಮೂಲದ ಎನ್‌ಜಿಒ ಇರಾನ್ ಮಾನವ ಹಕ್ಕುಗಳು ತಿಳಿಸಿದ್ದು, ಬುಧವಾರ ಪ್ರತಿಭಟನೆಗಳಲ್ಲಿ ಅತ್ಯಂತ ಮಾರಕ ದಿನವಾಗಿದ್ದು, 13 ಸಾವುಗಳು ದೃಢಪಟ್ಟಿವೆ ಎಂದು ಗುಂಪು ಹೇಳಿದೆ. ಸಂಘಟನೆಯ ಪ್ರಕಾರ, ನೂರಾರು ಜನರು ಗಾಯಗೊಂಡಿದ್ದಾರೆ ಮತ್ತು 2,000 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.

ಈ ಪ್ರತಿಭಟನೆಗಳನ್ನು ಕೇವಲ ವಿದ್ಯಾರ್ಥಿಗಳಿಗೆ ಸೀಮಿತವಾಗಿಲ್ಲ. ಇದು ಸಮಾಜದ ಪ್ರತಿಯೊಂದು ವರ್ಗದ ಮೇಲೆ ಪರಿಣಾಮ ಬೀರಿದೆ. ಅಧಿಕಾರಿಗಳು ಭಾರೀ ಭದ್ರತಾ ಪಡೆಗಳನ್ನು ನಿಯೋಜಿಸಿ ಕಠಿಣ ಕ್ರಮ ಕೈಗೊಂಡಿದ್ದಾರೆ. ಪ್ರತಿಭಟನೆಗಳನ್ನು ನಿಯಂತ್ರಿಸಲು ಇಂಟರ್​ನೆಟ್​ಗೆ ನಿರ್ಬಂಧ ಹೇರಲಾಗಿದ್ದು, ಕೆಲವು ಗುಂಪುಗಳನ್ನು ವಿದೇಶಿ ಏಜೆಂಟ್‌ಗಳು ಎಂದು ಹಣೆಪಟ್ಟಿ ಕಟ್ಟುವ ಮೂಲಕ ಸರ್ಕಾರವು ಪ್ರತಿಭಟನೆಗಳನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿವೆ.

RELATED ARTICLES
- Advertisment -
Google search engine

Most Popular