Sunday, January 11, 2026
Google search engine

Homeಅಪರಾಧನಂಜನಗೂಡಿನಲ್ಲಿ ಅಪ್ರಾಪ್ತೆ ದಿವ್ಯಾ ಆತ್ಮಹತ್ಯೆ, ಅನುಮಾನಗಳು ಹಲವಾರು

ನಂಜನಗೂಡಿನಲ್ಲಿ ಅಪ್ರಾಪ್ತೆ ದಿವ್ಯಾ ಆತ್ಮಹತ್ಯೆ, ಅನುಮಾನಗಳು ಹಲವಾರು

ಮೈಸೂರು : ಯುವಕನೊಬ್ಬನನ್ನು ಪ್ರೀತಿಸುತ್ತಿದ್ದ ಅಪ್ರಾಪ್ತೆ ದಿವ್ಯಾ ಎಂಬಾಕೆ ನಂಜನಗೂಡಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದ್ದು, ಬಾಲಕಿಯ ಸಾವು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಈ ಪ್ರಕರಣದಲ್ಲಿ ಆಕೆಯ ಸಾವಿಗೆ ಪ್ರಿಯಕರ ಆದಿತ್ಯನೋ ಅಥವಾ ಪೋಷಕರೋ ಕಾರಣ ಎಂಬ ಗೊಂದಲ ಸೃಷ್ಟಿಯಾಗಿದೆ. ದಿವ್ಯಾ, ಆದಿತ್ಯ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು.

ಇವರಿಬ್ಬರು ಚಾಮುಂಡಿಬೆಟ್ಟ ಸೇರಿದಂತೆ ಹಲವೆಡೆ ಸುತ್ತಾಡಿದ್ದು, ಅವರ ಸೆಲ್ಫಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ದಿವ್ಯಾ ಸರ್ಕಾರಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಳು. ಯುವಕನ ಕಾಟದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಒಂದು ಕಡೆ ಆರೋಪ ಕೇಳಿಬರುತ್ತಿದ್ದರೆ, ಮತ್ತೊಂದು ಕಡೆ ಆಕೆಯ ಪೋಷಕರೇ ಸಾವಿಗೆ ಕಾರಣ ಎಂಬ ಮಾತುಗಳೂ ಕೇಳಿಬರುತ್ತಿವೆ.

ದಿವ್ಯಾ ಮತ್ತು ಆದಿತ್ಯ ನಡುವಿನ ಸಂಭಾಷಣೆಯ ಆಡಿಯೋ ಕ್ಲಿಪ್‌ ಸಹ ಬಹಿರಂಗವಾಗಿದ್ದು, ಅದರಲ್ಲಿ ದಿವ್ಯಾ ತನ್ನ ಭಯವನ್ನು ವ್ಯಕ್ತಪಡಿಸಿದ್ದು, ಆದಿತ್ಯನನ್ನು ಮದುವೆಯಾಗುವಂತೆ ಕೇಳಿದ್ದಾಳೆ. ದಿವ್ಯಾ ತಂದೆ ತನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ ಎಂದು ಆದಿತ್ಯ ಹೇಳಿದ್ದು, ತಾನು ಯಾವುದೇ ಕಿರುಕುಳ ನೀಡಿಲ್ಲ ಎಂಬುದಕ್ಕೆ ಸಾಕ್ಷಿ ಒದಗಿಸಿದ್ದೇನೆ ಎಂದು ತಿಳಿಸಿದ್ದಾನೆ. ಪೊಲೀಸರ ತನಿಖೆಯಿಂದ ಈ ಸಾವಿನ ಅಸಲಿಯತ್ತು ಹೊರಬರಬೇಕಿದೆ.

RELATED ARTICLES
- Advertisment -
Google search engine

Most Popular