ಜಗದ್ಗುರು ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮಶತಾಬ್ದಿಯ ಮಂಗಳೋತ್ಸವದ ಪ್ರಯುಕ್ತ ವ್ಯಾಸ ಧ್ವಜ ಸಂಕೀರ್ತನಾ ಪಾದುಕಾ ದಿಗ್ವಿಜಯ ಪಾದಯಾತ್ರೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರ ಪಾಲ್ಗೊಳ್ಳುವಿಕೆಯೊಂದಿಗೆ ಸಂಪನ್ನವಾಯಿತು. ಭಾನುವಾರ ಸಂಜೆ ಕೊಂಚಾಡಿ ಶ್ರೀ ಕಾಶೀಮಠದಿಂದ ಹೊರಟು ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಪಾದಯಾತ್ರೆ ಆಗಮಿಸಿತು.
ದಾರಿಯುದ್ದಕ್ಕೂ ಭಜನೆ, ಜಯಕಾರ, ವ್ಯಾಸಧ್ವಜಗಳೊಂದಿಗೆ ಭಕ್ತರು ಸಂಭ್ರಮಿಸಿದರು.
ಕಾಶೀಮಠಾಧೀಶರಾದ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ, ಮಹಾರಾಷ್ಟ್ರ, ಕೇರಳ ಸೇರಿದಂತೆ ವಿವಿಧ ರಾಜ್ಯಗಳ ಭಕ್ತರು ಕಾರ್ಯಕ್ರಮದಲ್ಲಿ ಭಾಗಿಯಾದರು. ವಿವಿಧ ಟ್ಯಾಬ್ಲೋಗಳು, ಚೆಂಡೆ, ವಾದ್ಯಗಳೊಂದಿಗೆ ಸಹಸ್ರಾರು ಭಜಕರು ಹೆಜ್ಜೆ ಹಾಕಿ ಧನ್ಯತಾಭಾವ ಅನುಭವಿಸಿದರು.
ವರದಿ: ಶಂಶೀರ್ ಬುಡೋಳಿ



