Monday, January 12, 2026
Google search engine

Homeರಾಜ್ಯಪಟ್ಟಣಪಂಚಾಯತ್ ಚುನಾವಣೆಯಲ್ಲಿ ವಿಜಯ ಹಿನ್ನೆಲೆ: ತಾರಿಕಂಬ್ಲ ವಾರ್ಡ್ ಕೌನ್ಸಿಲರ್ ಸಿಹಿತಿಂಡಿ ಹಂಚಿ ಸಂಭ್ರಮಾಚರಣೆ

ಪಟ್ಟಣಪಂಚಾಯತ್ ಚುನಾವಣೆಯಲ್ಲಿ ವಿಜಯ ಹಿನ್ನೆಲೆ: ತಾರಿಕಂಬ್ಲ ವಾರ್ಡ್ ಕೌನ್ಸಿಲರ್ ಸಿಹಿತಿಂಡಿ ಹಂಚಿ ಸಂಭ್ರಮಾಚರಣೆ

ಇತ್ತೀಚೆಗೆ ಬಜಪೆ ಪಟ್ಟಣಪಂಚಾಯತ್ ಚುನಾವಣೆಯಲ್ಲಿ ಅತ್ಯಧಿಕ ಮತ ಪಡೆದ ತಾರಿಕಂಬ್ಲ ವಾರ್ಡ್ ಕೌನ್ಸಿಲರ್ ಆಯಿಷಾ ಇಂದು ತನ್ನ ವಾರ್ಡ್ ನ ಮನೆಮನೆ ಭೇಟಿ ಈಗಾಗಲೇ ಪ್ರಾರಂಭಿಸಿದ್ದಾರೆ. ಜಯ ಗಳಿಸಲು ಮತ ನೀಡಿದ ವಾರ್ಡ್ ನ ಎಲ್ಲಾ ಮತದಾರರ ಮನೆಗೆ ಭೇಟಿ ನೀಡಿ ಸಿಹಿತಿಂಡಿಯನ್ನು ಹಂಚುವುದರೊಂದಿಗೆ ತನ್ನ ವಾರ್ಡ್ ನ ಇಪ್ಪತ್ತಕ್ಕೂ ಅಧಿಕ ದಾರಿದೀಪಗಳನ್ನು ಬದಲಿಸಿರುವುದು ಮತ್ತು ಸರಿಪಡಿಸುವ ಮೂಲಕ ವಾರ್ಡ್ ಅಭಿವೃದ್ಧಿಗೆ ಚಾಲನೆ ನೀಡಿದ್ದಾರೆ.ಇದರೊಂದಿಗೆ ಹಲವಾರು ಸಮಯಗಳಿಂದ ನೆನೆಗುದಿಗೆ ಬಿದ್ದು ಸಾರ್ವಜನಿಕರಿಗೆ ತೊಂದರೆಯಾಗಿದ್ದ ಬಜಪೆ ಮುಖ್ಯ ಮಸೀದಿ ಸಮೀಪದ ಹೊಂಡವನ್ನು ಮುಚ್ಚಿಸಿರುವ ಕಾರ್ಯ ನಡೆಸಿದರು. ಇವರು ಈ ಹಿಂದೆ ಪಂಚಾಯತ್ ಸದಸ್ಯರಾಗಿದ್ದಾಗ ಇಪ್ಪತ್ತೊಂದು ಇಂಗುಗುಂಡಿಗಳ ಕಾರ್ಯ ನಡೆಸಿ ರಾಜ್ಯದಲ್ಲೇ ಇದೊಂದು ಪ್ರಥಮ ಸಾಧನೆಯ ಗೌರವ ಪಡೆದುಕೊಂಡಿದ್ದರು.

ವರದಿ: ಶಂಶೀರ್ ಬುಡೋಳಿ

RELATED ARTICLES
- Advertisment -
Google search engine

Most Popular