ವರದಿ ಸ್ಟೀಫನ್ ಜೇಮ್ಸ್.
ಬೆಳಗಾವಿಮೊಮ್ಮಕ್ಕಳಿಗೆ ಬುದ್ದಿವಾದ ಹೇಳಿದ್ದಕ್ಕೆ ಮಗನಿಂದಲೇ ವೃದ್ಧ ತಂದೆಗೆ ಚಾಕು ಇರಿತ ನಡೆದಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗ ತಾಲೂಕಿನಲ್ಲಿ ಮಂಗಳವಾರ ನಡೆದಿದೆ.
ಮಕ್ಕಳನ್ನು ಆಟವಾಡಿಸುವ ವಿಚಾರಕ್ಕೆ ತಂದೆ–ಮಗನ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಪುತ್ರನೇ ತಂದೆಗೆ ಚಾಕು ಇರಿದಿದ್ದಾನೆ . ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಬಸಯ್ಯ ಏಣಗಿಮಠ (62) ಅವರನ್ನು ತಕ್ಷಣವೇ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕೃತ್ಯವನ್ನು ಪುತ್ರ ವಿಜಯ ಏಣಗಿಮಠ ನಡೆಸಿದ್ದಾನೆ ಎನ್ನಲಾಗಿದೆ.
ಬಸಯ್ಯ ಏಣಗಿಮಠ ಅವರ ಇಬ್ಬರು ಮಕ್ಕಳು ಅಕ್ಕಪಕ್ಕದಲ್ಲೇ ವಾಸವಾಗಿದ್ದು, ಮೊಕ್ಕಳನ್ನು ಆಟವಾಡಿಸುವ ವಿಚಾರದಲ್ಲಿ ಮೊದಲಿಗೆ ಮಾತಿನ ಚಕಮಕಿ ನಡೆದಿದೆ.ಈ ವೇಳೆ, “ನನ್ನ ಮಕ್ಕಳನ್ನು ಅಣ್ಣನ ಮನೆಗೆ ಕರೆದುಕೊಂಡು ಹೋಗಬೇಡ” ಎಂದು ವಿಜಯ ಆಕ್ಷೇಪ ವ್ಯಕ್ತಪಡಿಸಿದ್ದಾನೆ. ಮಗನ ವರ್ತನೆಗೆ ತಂದೆ ಬಸಯ್ಯ ಅವರು ಬುದ್ದಿವಾದ ಹೇಳಿದಾಗ, ಆಕ್ರೋಶಗೊಂಡ ವಿಜಯ ಚಾಕುವಿನಿಂದ ಇರಿದು ತಂದೆಯನ್ನು ಗಾಯಗೊಳಿಸಿದ್ದಾನೆ ಎಂದು ತಿಳಿದುಬಂದಿದೆ.ಘಟನೆಯ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಬೈಲಹೊಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.



