Wednesday, January 14, 2026
Google search engine

Homeಸಿನಿಮಾಎರಡೇ ದಿನಕ್ಕೆ ಚಿರಂಜೀವಿ ಸಿನಿಮಾ ‘ಮನ ಶಂಕರ ವರಪ್ರಸಾದ್ ಗಾರು’ ಗಳಿಸಿದ ಹಣ ಎಷ್ಟು ಗೊತ್ತಾ...!

ಎರಡೇ ದಿನಕ್ಕೆ ಚಿರಂಜೀವಿ ಸಿನಿಮಾ ‘ಮನ ಶಂಕರ ವರಪ್ರಸಾದ್ ಗಾರು’ ಗಳಿಸಿದ ಹಣ ಎಷ್ಟು ಗೊತ್ತಾ…!

ಮೆಗಾಸ್ಟಾರ್ ಚಿರಂಜೀವಿ ಅವರ ‘ಮನ ಶಂಕರ ವರಪ್ರಸಾದ್ ಗಾರು’ ಚಿತ್ರವು ಅಭೂತಪೂರ್ವ ಯಶಸ್ಸು ಕಂಡಿದೆ. ಈ ಚಿತ್ರವನ್ನು ಅನಿಲ್ ರವಿಪುಡಿ ನಿರ್ದೇಶಿಸಿದ್ದಾರೆ. ‘ಮನ ಶಂಕರ ವರಪ್ರಸಾದ್ ಗಾರು’ ಚಿತ್ರವು ಜನವರಿ 12 ರಂದು ಅದ್ದೂರಿಯಾಗಿ ಬಿಡುಗಡೆಯಾಯಿತು. ಮೆಗಾಸ್ಟಾರ್ ಚಿರಂಜೀವಿ ಮತ್ತೊಮ್ಮೆ ಈ ಚಿತ್ರದ ಮೂಲಕ ಬ್ಲಾಕ್ಬಸ್ಟರ್ ಸಾಧನೆ ಮಾಡಿದ್ದಾರೆ. ಈ ಚಿತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ ತಮ್ಮ ನಟನೆಯಿಂದ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಈ ಚಿತ್ರ ಮೊದಲ ಎರಡು ದಿನದಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ.

‘ಮನ ಶಂಕರ ವರಪ್ರಸಾದ್ ಗಾರು’ ಚಿತ್ರಕ್ಕೆ ನಯನತಾರಾ ನಾಯಕಿಯಾಗಿ ನಟಿಸಿದ್ದಾರೆ. ಚಿಕ್ಕವರು ಮತ್ತು ಹಿರಿಯರು ಎಲ್ಲರೂ ಈ ಚಿತ್ರವನ್ನು ಅಪಾರವಾಗಿ ಆನಂದಿಸುತ್ತಿದ್ದಾರೆ. ಮೊದಲ ದಿನವೇ ಈ ಚಿತ್ರ ಅದ್ಭುತ ಕಲೆಕ್ಷನ್ ಮಾಡಿದೆ. ವಿಶ್ವಾದ್ಯಂತ ಬಿಡುಗಡೆಯಾದ ‘ಮನ ಶಂಕರ ವರಪ್ರಸಾದ್ ಗಾರು’ ಚಿತ್ರ ಒಟ್ಟು 84 ಕೋಟಿ ರೂ. ಕಲೆಕ್ಷನ್ ಮಾಡಿದೆ. ಪ್ರೀಮಿಯರ್ ಮತ್ತು ಮೊದಲ ದಿನದ ಕಲೆಕ್ಷನ್ ಸೇರಿದಂತೆ ‘ಮನ ಶಂಕರ ವರಪ್ರಸಾದ್ ಗಾರು’ ಚಿತ್ರ ಒಟ್ಟು 84 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ನಿರ್ಮಾಪಕರು ಘೋಷಿಸಿದ್ದಾರೆ.

ಇನ್ನು, ಎರಡನೇ ದಿನ ಸಿನಿಮಾ 19.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಚಿತ್ರದ ಕಲೆಕ್ಷನ್ 100 ಕೊಟಿ ರೂಪಾಯಿ ದಾಟಿದೆ. ಇದು ಸಿನಿಮಾದ ಸಾಧನೆ ಎಂದೇ ಹೇಳಬಹುದು. ಮೆಗಾಸ್ಟಾರ್ ಚಿರಂಜೀವಿ ಅವರು ಹಲವು ವರ್ಷಗಳ ಬಳಿಕ ದೊಡ್ಡ ಕಂಬ್ಯಾಕ್ ಮಾಡಿದ್ದಾರೆ. ‘ಮನ ಶಂಕರ ವರಪ್ರಸಾದ್ ಗಾರು’ ಚಿತ್ರ ನೋಡೊದ ಅಭಿಮಾನಿಗಳು ಫುಲ್‌ ಖುಷ್‌ ಆಗಿದ್ದಾರೆ.

RELATED ARTICLES
- Advertisment -
Google search engine

Most Popular