ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಜನವರಿ 16ರಂದು ನಡೆಯುವ ಇತಿಹಾಸ ಪ್ರಸಿದ್ಧ ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆ ಕೋದಂಡ ರಾಮನ ಬ್ರಹ್ಮ ರಥೋತ್ಸವದ ಅಂಗವಾಗಿ ಚುಂಚನಕಟ್ಟೆಯಲ್ಲಿ ಮಂಗಳವಾರ ರಾತ್ರಿ ನಡೆದ ಸೀತಾ ಕಲ್ಯಾಣ ವೈಭವಕ್ಕೆ ಸಾಕ್ಷಿಯಾಯಿತು.
ಶ್ರೀರಾಮ ದೇವಾಲಯದ ಹೊರ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುರೋಹಿತರು ಮತ್ತು ಅರ್ಚಕರ ಮಂತ್ರ ಘೋಷಗಳೊಂದಿಗೆ ಸೀತಾ ಕಲ್ಯಾಣ ಮಹೋತ್ಸವ ವನ್ನು ಕಣ್ಣುಂಬಿಕೊಂಡ ನೆರೆದಿದ್ದ ಸಾವಿರಾರು ಭಕ್ತರು ಪುಳಕ ಗೊಂಡರು.
ಸಂಜೆ 7ರಿಂದಲೇ ಆರಂಭಗೊಂಡ ಮದುವೆ ಕಾರ್ಯಕ್ರಮಗಳು ಸಾರ್ವಜನಿಕ ಮದುವೆಗಳು ನಡೆಯು ವಂತೆ ದೇವಾಯಲದಿಂದ ಶ್ರೀ ರಾಮದೇವರನ್ನು ಪಲ್ಲಯಲ್ಲಿ ಕೂರಿಸಿ ಕಾಶಿಯಾತ್ರೆ ಯಿಂದ ಕರೆತಂದು ಮನದುಂಬಿಸಿಕೊಳ್ಳುವ ಕಾರ್ಯವನ್ನು ಶಾಸಕ ಡಿ.ರವಿಶಂಕರ್- ಪತ್ನಿ ಸುನಿತಾ, ಜಿಲ್ಲಾ ಸಹಕಾರ ಬ್ಯಾಂಕಿನ ಅಧ್ಯಕ್ಷ ದೊಡ್ಡಸ್ವಾಮೇಗೌಡ -ಪತ್ನಿ ಈರಮ್ಮ ಕುಟುಂಬಸ್ಥರು ನಡೆಸಿ ಕೊಟ್ಟರು.
ನಂತರ ದೇವಾಲಯದ ಹೊರ ಅವರಣಲ್ಲಿ ಹಾಕಲಾಗಿದ್ದ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದ ಬೃಹತ್ ಮದುವೆ ಮಂಟಪಕ್ಕೆ ಕರೆತಂದು ಪೂಜಾ ವಿಧಿ ವಿಧಿವಿಧಾನಗಳನ್ನು ಮಂತ್ರಾ ಕ್ಷತೆಯ ಮೂಲಕ ಪ್ರಧಾನ ಅರ್ಚಕರು ತಮ್ಮ ತಂಡದೊಂದಿಗೆ ಮಂತ್ರ ಪಠಣಗಳ ಮೂಲಕ ಕಲ್ಯಾಣೋತ್ಸವಕ್ಕೆ ಚಾಲನೆ ನೀಡಿದರು.
ದೇವಾಲಯದ ಆಗಮಿಕರಾದ ವಿಜಯ್ ಕುಮಾರ್ ಅವರ ನೇತೃತದ ತಂಡ ಸುಮಾರು 2ಗಂಟೆ ಕಾಲ ವಿಶೇಷ ಪೂಜೆಗಳನ್ನು ಸಲ್ಲಿಸಿ ವಧುವರರಿಗೆ ಹಾರ ಬದಲಿಸಿ ನಂತರ ಸೀತಾ ಮಾತೆಗೆ ತಾಳಿ ಹಾಕಿ ಸೀತಾ ಕಲ್ಯಾಣವನ್ನ ನೇರವೇರಿಸಿದಾಗ ನೆರೆದಿದ್ದ ಭಕ್ತರು ಚಪ್ಪಾಳೆ ತಟ್ಟಿ ಜಯಘೋಷ ಮೊಳಗಿಸಿದರು.
ಸೀತಾಕಲ್ಯಾಣದಲ್ಲಿ ಕಂಕಣ ಭಾಗ್ಯವಿಲ್ಲದ ನೂರಾರು ಯುವಕ ಯುವತಿಯರು ಕಲ್ಯಾಣೋತ್ಸವದಲ್ಲಿ ಭಾಗವಹಿಸಿ ಮುಂದಿನ ಜಾತ್ರೆಯೊಳಗೆ ಕಂಕಣಭಾಗ್ಯ ಒದಗಲಿ ಎಂದು ಪ್ರಾರ್ಥಿಸಿದರು.
ಕಲ್ಯಾಣೋತ್ಸವಕ್ಕೆ ಆಗಮಿಸಿದ್ದ ಭಕ್ತರಿಗೆ ಜಿ.ಪಂ.ಮಾಜಿ ಅಧ್ಯಕ್ಷ ಸಿ.ಜೆ ದ್ವಾರಕೀಶ್, ತಾ.ಪಂ.ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ ಜಿಲ್ಲಾ ಜೆಡಿಎಸ್ ಸಿ.ಬಿ.ಲೋಕೇಶ್ ಕುಪ್ಪೆ ಗ್ರಾ.ಪಂ.ಸದಸ್ಯ ಸಿ.ಬಿ.ಧರ್ಮ, ಕುಟುಂಬದವರು ಅನ್ನ ಸಂತರ್ಪಣೆ ಏರ್ಪಡಿಸಿದ್ದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೇ ಅಧ್ಯಕ್ಷರಾದ ಉದಯಶಂಕರ್, ಪ್ರಭಾಕರ್, ಮುಖಂಡರಾದ ಡೈರಿ ಮಾದು, ಎಚ್.ಜೆ.ರಮೇಶ್, ಹಳಿಯೂರು ಪ್ರಭಾಕರ್, ಸಚಿನ್, ಎಪಿಎಂಸಿ ಮಾಜಿ ಅಧ್ಯಕ್ಷ ನಟರಾಜ್, ತಾ.ಪಂ.ಮಾಜಿ ಸದಸ್ಯ ಚಂದು, ಹೇಮಂತ್, ಗಂಧನಹಳ್ಳಿ ಹೇಮಂತ್, ತೇಜವ್ ಮೂರ್ತಿ, ರಘು ಸರಿತಾ ಜವರಪ್ಪ, ವಂದನಾ, ಉಷಾ,ಉಪವಿಭಾಗಧಿಕಾರಿ ಕಾವ್ಯಾರಾಣಿ , ಸಾಲಿಗ್ರಾಮ ತಹಸೀಲ್ದಾರ್ ರುಕಿಯಾ ಬೇಗಂ, ಉಪತಹಸೀಲ್ದಾರ್ ಮಹೇಶ್, ರಾಜಸ್ವ ನಿರೀಕ್ಷ ಚಿದನಂದ್ ಬಾಬು, ಗ್ರಾಮ ಅಧಿಕಾರಿಗಳಾದ ಮೇಘನಾ, ಮೌನೇಶ್, ಕಾವೇರಿ , ಪ್ರೀಯಾ,ಸುನೀಲ್, ಸಯ್ಯದ್, ಕೃಷ್ಣಮೂರ್ತಿ,ಪಾರುಪತ್ತೆದಾರ ರಾದ ಯತೀರಾಜ್, ನಾಡಕಚೇರಿಯ ಭಾಗ್ಯ ಕೆಸ್ತೂರು ವಿಜಿ, ಕುಪ್ಪೆ ಗ್ರಾಪಂಅಧ್ಯಕ್ಷೆ ಶಾರದಮ್ಮ, ಮಾಜಿ ಅಧ್ಯಕ್ಷೆ ಗೌರಮ್ಮ ಮಂಜುನಾಥ್ ಪರಿಚಾರಕರಾದ ವಾಸುದೇವನ್, ರಾಯಣಯ್ಯಂಗಾರ್,ಸುಬ್ರಮಣ್ಯ ಮತ್ತಿತರರು ಹಾಜರಿದ್ದರು.
ಮುಂಜಾಗ್ರತಾ ಕ್ರಮವಾಗಿ ಚುಂಚನಕಟ್ಟೆ ಉಪ ಠಾಣಾಯ ಠಾಣಾಧಿಕಾರಿ ದೊರೆಸ್ವಾಮಿ, ಸಾಲಿಗ್ರಾಮ ಠಾಣೆಯ ಎಎಸ್ಐ ಕುಮಾರ್, ಮುಖ್ಯಪೇದೆ ಶಿವಪ್ಪ,ಪ್ರವೀಣ್, ಸಿಬ್ಬಂದಿಗಳಾದ ದಯಾನಂದ,ಗೋವಿಂದರಾಜು, ನಾಗರತ್ನ, ಪೂಜಾ, ಅವರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.
ಕುಪ್ಪೆ ಗ್ರಾ.ಪಂ.ಅಧ್ಯಕ್ಷರಿಗೆ ಶಿಷ್ಠಚಾರ ಉಲ್ಲಂಘನೆ : ತರಾಟೆ
ಚುಂಚನಕಟ್ಟೆಯಲ್ಲಿ ಮಂಗಳವಾರ ರಾತ್ರಿ ನಡೆದ ಸೀತಾ ಕಲ್ಯಾಣ ಕಾರ್ಯಕ್ರಮದಲ್ಲಿ ಕುಪ್ಪೆ ಗ್ರಾ.ಪಂ.ಅಧ್ಯಕ್ಷೆ ಶಾರದಮ್ಮ ಅವರನ್ನ ತಾಲೂಕು ಆಡಳಿತ ಶಿಷ್ಟಚಾರದ ಗೌರವ ನೀಡದೇ ಇರುವುದನ್ನು ಖಂಡಿಸಿ ತಹಸೀಲ್ದಾರ್ ಅವರನ್ನು ಕುಪ್ಪೆ ಗ್ರಾ.ಪಂ.ಮಾಜಿ ಅಧ್ಯಕ್ಷ ಸಿ.ವಿ.ಮಂಜುನಾಥ್ ತರಾಟೆಗೆ ತೆಗೆದು ಕೊಂಡರು.

ಜಾತ್ರೆಯಲ್ಲಿ ಸ್ವಚ್ಚತೆ, ಬೀದಿದೀಪ, ಕುಡಿಯುವ ನೀರಿಯುವ ವ್ಯವಸ್ಥೆ ಮಾಡುವ ಗ್ರಾ.ಪಂ.ನ ಸ್ಥಳಿಯ ಜನಪ್ರತಿನಿಧಿಗೆ ತಾಲೂಕು ಆಡಳಿತ ಗೌರವ ಕೊಡದನ್ನ ಖಂಡಿಸಿದ ಮಂಜುನಾಥ್ ಇದರ ವಿರುದ್ದ ತಾಲೂಕು ಕಚೇರಿ ಮಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಶಾಸಕ ಡಿ.ರವಿಶಂಕರ್ ಅವರು ತಹಸೀಲ್ದಾರ್ ಅವರಿಗೆ ಸೂಚನೆ ನೀಡಿ ಸ್ಥಳಿಯ ಜನಪ್ರತಿ ನಿಧಿಗಳನ್ನು ಎಲ್ಲರನ್ನು ವಿಶ್ವಾಸಕ್ಕೆ ತೆಗದು ರಥೋತ್ಸವ ಯಶಸ್ವಿಯಾಗಿ ನಡೆಸ ಬೇಕೆಂದು ತಾಕೀತು ಮಾಡಿ ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ನೀಡಿದರು.



