Friday, January 16, 2026
Google search engine

Homeಸ್ಥಳೀಯನಾಟಿಕೋಳಿ ಬಾಡೂಟಕ್ಕೆ ಸಿಎಂ ಸಿದ್ದರಾಮಯ್ಯ ಮೆಚ್ಚುಗೆ

ನಾಟಿಕೋಳಿ ಬಾಡೂಟಕ್ಕೆ ಸಿಎಂ ಸಿದ್ದರಾಮಯ್ಯ ಮೆಚ್ಚುಗೆ

ತುಮಕೂರು : ಸಿಎಂ ಸಿದ್ದರಾಮಯ್ಯನವರು ಇಂದು (ಜನವರಿ 16) ತುಮಕೂರಿನಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಉದ್ಘಾಟಿಸಿದರು. ಬಳಿಕ
ಸಿದ್ದರಾಮಯ್ಯನವರು ನೇರವಾಗಿ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ಶಾಸಕ ಕೆಎನ್ ರಾಜಣ್ಣ ನಿವಾಸಕ್ಕೆ ಭೇಟಿ ನೀಡಿ ಭರ್ಜರಿ ಊಟ ಸವಿದರು. ಸಿದ್ದರಾಮಯ್ಯನವರಿಗಂತಲೇ ಅವರಿಗೆ ಇಷ್ಟವಾದ ನಾಟಿ ಕೋಳಿ ಬಾಡೂಟ ತಯಾರಿಸಲಾಗಿತ್ತು. ರಾಗಿ ಮುದ್ದೆ, ನಾಟಿಕೋಳಿ ಸಾರು, ಕಾಲ್ ಸೂಪ್ ಸೇರಿದಂತೆ ವಿವಿಧ ಖಾದ್ಯ ಸಿದ್ಧಪಡಿಸಲಾಗಿದ್ದು, ಸಿದ್ದರಾಮಯ್ಯನವರು ಸಹ ರಾಜಣ್ಣನವರ ನಿವಾಸಕ್ಕೆ ತೆರಳಿ ಬಾಡೂಟ ಸವಿದಿದ್ದಾರೆ.

ಊಟದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿಎಂ, ಕೆ.ಎನ್.ರಾಜಣ್ಣ ನಿವಾಸದಲ್ಲಿ ಸಿದ್ಧಪಡಿಸಿದ್ದ ಊಟ ಚೆನ್ನಾಗಿತ್ತು. ಕಾಲ್ ಸೂಪ್, ನಾಟಿ ಕೋಳಿ ತಂದು ಅಡುಗೆ ಮಾಡಿಸಿದ್ದರು. ನನಗೆ ಹುಷಾರಿರಲಿಲ್ಲ. ಜ್ವರ ಇದ್ದುದರಿಂದ ಬಾಯಿ ಕೆಟ್ಟೋಗಿತ್ತು. ನಾನ್ ವೆಜ್ ಇತ್ತಲ್ಲ ಚೆನ್ನಾಗಿತ್ತು ಊಟ ಮಾಡಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

RELATED ARTICLES
- Advertisment -
Google search engine

Most Popular