Friday, January 16, 2026
Google search engine

Homeರಾಜಕೀಯಲೀಸ್‌ ಬೇಸ್ಡ್‌ ಸಿಎಂ ಹೇಳಿಕೆ ಹಾಸ್ಯಾಸ್ಪದ: ಮಹದೇವಪ್ಪ ತಿರುಗೇಟು

ಲೀಸ್‌ ಬೇಸ್ಡ್‌ ಸಿಎಂ ಹೇಳಿಕೆ ಹಾಸ್ಯಾಸ್ಪದ: ಮಹದೇವಪ್ಪ ತಿರುಗೇಟು

ಬೆಂಗಳೂರು : ಕೇಂದ್ರ ಸಚಿವ ಕುಮಾರಸ್ವಾಮಿ ಕಾಲದಲ್ಲಿ ಅವರೇ ಮಹಿಳಾ ಅಧಿಕಾರಿಗೆ ಹೆದರಿಸಿದ್ದರು ಅಂತಾ ಸಚಿವ ಹೆಚ್‌.ಸಿ ಮಹದೇವಪ್ಪ ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ದ ಕಿಡಿಕಾರಿದರು. ರಾಜ್ಯ ಸರ್ಕಾರದಲ್ಲಿ ಅಧಿಕಾರಿಗಳಿಗೆ ರಕ್ಷಣೆ ಇಲ್ಲ ಅನ್ನೋ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಬೆಂಗಳೂರಲ್ಲಿ ಪ್ರತಿಕ್ರಿಯಿಸಿದ ಅವರು, ಯಾರ ಅಧಿಕಾರದಲ್ಲಿ ಅಧಿಕಾರಿಗಳಿಗೆ ಏನು ಆಗಿದೆ ಅಂತಾ ದಾಖಲೆ ತೆಗದು ನೋಡಲಿ ಆಗ ಗೊತ್ತಾಗುತ್ತದೆ. ಯಾರೇ ಆದ್ರೂ ಆ ರೀತಿ ಮಾಡಿದ್ರೆ ಕ್ರಮ ತೆಗೆದುಕೊಳ್ತೀವಿ ಎಂದು ಹೇಳಿದರು.

ಸಿದ್ರಾಮಯ್ಯ ಲೀಸ್‌ ಬೇಸ್ಡ್‌ ಸಿಎಂ ಅನ್ನೋ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ 7.6 ವರ್ಷ ಸಿಎಂ ಆಗಿ ಇತಿಹಾಸ ಸೃಷ್ಟಿ ಮಾಡಿದ್ದಾರೆ. ಅದು ಯಾವ ರೀತಿ ಅವರು ಲೀಸ್ ಬೇಸ್ಡ್ ಸಿಎಂ ಆಗ್ತಾರೆ. ಕುಮಾರಸ್ವಾಮಿ ಎಷ್ಟು ವರ್ಷ ಸಿಎಂ ಆಗಿ ಕೆಲಸ ನಿರ್ವಹಿಸಿದ್ದರು? ಎಂದು ಪ್ರಶ್ನಿಸಿದ್ರು. ಸಿದ್ದರಾಮಯ್ಯ 7.6 ವರ್ಷ ಸಿಎಂ ಆಗಿ ದಾಖಲೆ ಮಾಡಿದ್ದರೆ. ಲೀಸ್ ಅಂದರೆ ಮೂರು ನಾಲ್ಕು ತಿಂಗಳು ಅಷ್ಟೆ ಇವೆಲ್ಲವೂ ಹಾಸ್ಯಾಸ್ಪದ ಮಾತುಗಳು ಅಷ್ಟೆ ಎಂದರು.

ಬಿಜೆಪಿಯಿಂದ ಬಳ್ಳಾರಿ ಪ್ರತಿಭಟನೆ ವಿಚಾರವಾಗಿ ಮಾತನಾಡಿ, ʻರಿಪಬ್ಲಿಕ್ ಬಳ್ಳಾರಿʼ ಯಾರು ಮಾಡಿದ್ದು? ಯಾರು ಇವರ ವಿರುದ್ಧ ಧ್ವನಿ ಎತ್ತೋ ಹಾಗಿರಲಿಲ್ಲ. ಗಣಿ ಸಂಪತ್ತು ಯಾರ ಬಳಿ ಇತ್ತು? ಯಾರೂ ಲೂಟಿ ಮಾಡಿದ್ದರು? ಇವರೇ ಲೂಟಿ ಮಾಡಿ ಈಗ ಇವರೇ ಪ್ರತಿಭಟನೆ ಮಾಡೋದು ಹಾಸ್ಯಾಸ್ಪದ ಎಂದು ಕುಟುಕಿದರು.

ರಾಮಮಂದಿರಕ್ಕೆ ರಾಹುಲ್ ಗಾಂಧಿ ಭೇಟಿಗೆ ಧಾರ್ಮಿಕ ನಾಯಕರು ಆಕ್ಷೇಪ ಮಾಡುತ್ತಿರುವ ವಿಚಾರ ಕುರಿತು ಮಾತನಾಡಿ, ಇದೊಂದು ಧಾರ್ಮಿಕ ವಿಚಾರ. ಪೆರಿಯಾರ್, ಬಸವಣ್ಣ, ನಾರಾಯಣಗುರು ಎಲ್ಲ ಧರ್ಮದ ವಿರುದ್ಧ, ಜಾತಿ ವಿರುದ್ಧ ಇದ್ದವರು. ಧರ್ಮ ಮಾನವನ ಅಭಿವೃದ್ಧಿಗೆ ಇರುವಂತದ್ದು ಈ ರೀತಿ ಮಾಡುವುದು ಎಷ್ಟು ಸರಿ? ಅಂತ ಇದನ್ನ ಮಾಧ್ಯಮಗಳೇ ಹೇಳಬೇಕು ಎಂದರು.

RELATED ARTICLES
- Advertisment -
Google search engine

Most Popular