Saturday, January 17, 2026
Google search engine

Homeರಾಜ್ಯಬಾಂಗ್ಲಾ ವಲಸಿಗರ ಆಧಾರ್–ಪ್ಯಾನ್ ವಿಚಾರಣೆ ಪ್ರಕರಣದಲ್ಲಿ ಪುನೀತ್‌ ಕೆರೆಹಳ್ಳಿ ಬಂಧನ

ಬಾಂಗ್ಲಾ ವಲಸಿಗರ ಆಧಾರ್–ಪ್ಯಾನ್ ವಿಚಾರಣೆ ಪ್ರಕರಣದಲ್ಲಿ ಪುನೀತ್‌ ಕೆರೆಹಳ್ಳಿ ಬಂಧನ

ಬೆಂಗಳೂರು : ಹಿಂದೂ ರಾಷ್ಟ್ರ ರಕ್ಷಣಾ ಪಡೆ ಮುಖಂಡ ಪುನೀತ್ ಕೆರೆಹಳ್ಳಿ ಸ್ಥಳೀಯ ವೈದ್ಯ ನಾಗೇಂದ್ರ ಅವರನ್ನು ಬನ್ನೇರುಘಟ್ಟ ಪೊಲೀಸರು ಬಂಧಿಸಿದ್ದಾರೆ.

ಬನ್ನೇರುಘಟ್ಟ ಪೊಲೀಸ್ ಠಾಣೆ ಮತ್ತು ಬೇಗೂರು ಠಾಣೆ ವ್ಯಾಪ್ತಿಯಲ್ಲಿ ಪುನೀತ್‌ ಕೆರೆಹಳ್ಳಿ ಮತ್ತು ಕಾರ್ಯಕರ್ತರು ಬಾಂಗ್ಲಾ ವಲಸಿಗರ ಮನೆಗೆ ನುಗ್ಗಿ ಅವರ ಪೌರತ್ವ ಹಾಗೂ ಗುರುತಿನ ದಾಖಲೆಗಳನ್ನು ಕೇಳಿದ್ದರು. ಈ ವೇಳೆ ಹಲವು ಮಂದಿ ನಾವು ಬಾಂಗ್ಲಾದವರು ಎಂದು ತಿಳಿಸಿದ್ದರು.

ಬಾಂಗ್ಲಾದೇಶದವರಿಗೆ ಆಧಾರ್, ಪ್ಯಾನ್ ಕಾರ್ಡ್‌ಗಳು ಸಿಕ್ಕಿವೆ. ಕೆಲವರಿಗೆ ಬ್ಯಾಂಕ್‌ನಿಂದ ಸಾಲ ಸಹ ನೀಡಲಾಗಿದೆ. ದಾಖಲೆಗಳು ಇಲ್ಲದೇ ಇದ್ದರೂ ಇವರಿಗೆ ಈ ದಾಖಲೆಗಳು ಸಿಕ್ಕಿದ್ದು ಹೇಗೆ ಎಂದು ಪ್ರಶ್ನೆ ಮಾಡಿದ್ದರು. ಇವರು ಪ್ರಶ್ನೆ ಮಾಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

ಈಗ ವಲಸಿಗರಿಗೆ ಬೆದರಿಕೆ ಹಾಗೂ ಭೀತಿ ಉಂಟು ಮಾಡಿದ ಆರೋಪದ ಪುನೀತ್ ಕೆರೆಹಳ್ಳಿಯನ್ನು ಬನ್ನೇರುಘಟ್ಟ ಪೊಲೀಸ್ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಪುನೀತ್ ಕೆರೆಹಳ್ಳಿಯ ಬಂಧನ ಸುದ್ದಿ ತಿಳಿದ ಬಳಿಕ ಬೆಂಬಲಿಗರು ಠಾಣೆಯ ಬಳಿ ಜಮಾಯಿಸಿ ಸರ್ಕಾರಿ ವಿರೋಧಿ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

RELATED ARTICLES
- Advertisment -
Google search engine

Most Popular