Monday, January 19, 2026
Google search engine

Homeರಾಜ್ಯಸುದ್ದಿಜಾಲಸಿಇಟಿ ಅರ್ಜಿ ಸಲ್ಲಿಕೆಗೆ ಅವಕಾಶ.

ಸಿಇಟಿ ಅರ್ಜಿ ಸಲ್ಲಿಕೆಗೆ ಅವಕಾಶ.

ವರದಿ ಸ್ಟೀಫನ್ ಜೇಮ್ಸ್

ಎಂಜಿನಿಯರಿಂಗ್, ಪಶು ಸಂಗೋಪನೆ, ಕೃಷಿ ವಿಜ್ಞಾನ, ಫಾರ್ಮಸಿ, ಬಿಎಸ್ಸಿ (ನರ್ಸಿಂಗ್) ಮತ್ತಿತ ರ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಜ.17ರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಫೆ.16ರ ತನಕ ಅವಕಾಶ ನೀಡಲಾಗಿದೆ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.ಅರ್ಜಿ ಸಲ್ಲಿಸಲು ಸಾಕಷ್ಟು ಸಮಯ ನೀಡಿರುವ ಕಾರಣ ಅಭ್ಯರ್ಥಿಗಳು ಸಾವಧಾನ ದಿಂದ ಸಿಇಟಿ ಮಾಹಿತಿ ಓದಿ, ಮನನ ಮಾಡಿಕೊಂಡ ನಂತರ ಅರ್ಜಿ ಭರ್ತಿ ಮಾಡಬೇಕು. ಅಭ್ಯರ್ಥಿಗಳು ತಮಗೆ ಅನ್ವಯವಾಗುವ ಮೀಸಲಿಗೆ ಪೂರಕವಾಗಿ ದಾಖಲೆಗಳನ್ನು ಸಿದ್ದ ಮಾಡಿಟ್ಟುಕೊಂಡು ಅರ್ಜಿ ಭರ್ತಿ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.ಅರ್ಜಿ ಭರ್ತಿ ಸಂಬಂಧ ಎಲ್ಲ ಕಾಲೇಜು ಸಿಬ್ಬಂದಿಗೆ ಹತ್ತು ದಿನಗಳ ಕಾಲ ಆನ್‌ಲೈನ್ ತರಬೇತಿ ನೀಡಲಾಗಿದೆ. ಅಭ್ಯರ್ಥಿಗಳು ತಮ್ಮ ಕಾಲೇಜುಗಳಲ್ಲೇ ಅರ್ಜಿ ಭರ್ತಿ ಮಾಡಿ, ಸಲ್ಲಿಸಬಹುದು. ಅಗತ್ಯಬಿದ್ದಾಗ ಉಪನ್ಯಾಸಕರ ನೆರವು ಪಡೆಯಬಹುದು ಎಂದು ಅವರು ತಿಳಿಸಿದ್ದಾರೆ.ಆನ್‌ಲೈನ್‌ನಲ್ಲಿ ವೆರಿಫಿಕೇಷನ್ ಆಗುವಅಭ್ಯರ್ಥಿಗಳು ಕಾಲೇಜಿಗೆ ಪರಿಶೀಲನೆ ಸಲುವಾಗಿ ಹೋಗುವ ಅಗತ್ಯ ಇಲ್ಲ, ನೇರವಾಗಿ ಅರ್ಜಿ ಮುದ್ರಿಸಿಕೊಳ್ಳಬಹುದು. ಆದರೆ, ಆನ್‌ಲೈನ್‌ನಲ್ಲಿ ಪರಿಶೀಲನೆ ಆಗದವರು ಕಾಲೇಜು ಹಂತದಲ್ಲೇ ಪರಿಶೀಲನೆ ಮಾಡಿಸಿಕೊಳ್ಳಬೇಕು. ಅದರ ನಂತರ ಅರ್ಜಿ ಮುದ್ರಣ ಮಾಡಿಕೊಳ್ಳಲು ಅವಕಾಶವಾಗುತ್ತದೆ ಎಂದು ಅವರು ವಿವರಿಸಿದ್ದಾರೆ. cetonline.karnataka.gov.in ವೆಬ್ ಸೈಟ್ ಮೂಲಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಇರಲಿದ್ದು, ಎಸ್ಸೆಸ್ಸೆಲ್ಸಿ ಅಂಕಪಟ್ಟಿ, ಆಧಾರ್ ಕಾರ್ಡ್, ಆರ್.ಡಿ. ಸಂಖ್ಯೆ ಜತೆಗೆ ನೋಂದಣಿಯಾಗಿರುವ ಮೊಬೈಲ್ ಸಂಖ್ಯೆ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಪ. ಜಾತಿ-ಪ.ಪಂಗಡದ ವಿದ್ಯಾರ್ಥಿಗಳಿಗೆ 200 ರೂ., ಸಾಮಾನ್ಯ ವಿದ್ಯಾರ್ಥಿಗಳಿಗೆ 500 ರೂ., ಕರ್ನಾಟಕ ಹೊರತುಪಡಿಸಿ ಇತರೆ ರಾಜ್ಯದ ವಿದ್ಯಾರ್ಥಿಗಳಿಗೆ 750 ರೂ. ಶುಲ್ಕ ಇರಲಿದೆ.ಆಧಾರ್ ಕಾರ್ಡ್, ಎಸ್ಸೆಸ್ಸೆಲ್ಸಿ ಅಂಕಪಟ್ಟಿಯಲ್ಲಿ ವಿದ್ಯಾರ್ಥಿಯ ಹೆಸರು ಒಂದೇ ರೀತಿ ಇರಬೇಕೆಂದು ಕೆಇಎ ಸೂಚಿಸಿದೆ. ಏ. 22ರಂದು ಹೊರನಾಡು ಹಾಗೂ ಗಡಿನಾಡು ಕನ್ನಡಿಗರಿಗೆ ಭಾಷಾ ಪರೀಕ್ಷೆ ನಡೆಯಲಿದ್ದು, ಏ.23 ಹಾಗೂ ಏ.24 ರಂದು ಸಿಇಟಿ ನಡೆಯಲಿದೆ. ಕೆಇಎ ಈಗಾಗಲೇ ಬಿಡುಗಡೆಗೊಳಿಸಿದ್ದು, ಅಭ್ಯರ್ಥಿಗಳು ಕೆಇಎ ವೆಬ್ ಸೈಟ್‌ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.

RELATED ARTICLES
- Advertisment -
Google search engine

Most Popular