Monday, January 19, 2026
Google search engine

Homeರಾಜ್ಯಸಂಪನ್ನಗೊಂಡ ಕೊಪ್ಪಳ ಗವಿಸಿದ್ಧೇಶ್ವರ ಜಾತ್ರೆ

ಸಂಪನ್ನಗೊಂಡ ಕೊಪ್ಪಳ ಗವಿಸಿದ್ಧೇಶ್ವರ ಜಾತ್ರೆ

ಕೊಪ್ಪಳ : ಗವಿಮಠದ ಮಠದ ಆವರಣದಲ್ಲಿ ಶ್ರೀ ಗವಿಸಿದ್ಧೇಶ್ವರ ಜಾತ್ರೆಯ ಕೊನೆಯ ದಿನ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಗವಿಸಿದ್ಧೇಶ್ವರನ ದರ್ಶನ ಪಡೆದಿದ್ದು, ಜ.1ರಿಂದ 18ರ ವರೆಗೆ ನಡೆದ ಜಾತ್ರೆಗೆ ಭಾನುವಾರ ತೆರೆ ಬಿದ್ದಿದೆ. ಕಳೆದ 15 ದಿನಗಳಿಂದ ಜಾತ್ರೆಗೆ ಜನಸಾಗರವೇ ಹರಿದು ಬಂದಿದೆ. ಅದರ ಜತೆಗೆ ಭಕ್ತರು ದಾಸೋಹಕ್ಕಾಗಿ ಅರ್ಪಿಸಿದ ಆಹಾರ ಧಾನ್ಯಗಳು ಇನ್ನೂ ಹರಿದು ಬರುತ್ತಿರುವುದು ವಿಶೇಷ.

ಅಜ್ಜನ ಜಾತ್ರೆಗೆ ಈ ಬಾರಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ಹಾಗೂ ಹೊರ ರಾಜ್ಯಗಳಿಂದ ಭಕ್ತರು ಆಗಮಿಸಿ ಈ ಜಾತ್ರೆಯ ವೈಭವವನ್ನು ಕಣ್ತುಂಬಿಕೊಂಡರು. ಮಹಾದಾಸೋಹದಲ್ಲಿ ಮೈಸೂರು ಪಾಕ್‌, ಮಿರ್ಚಿ ಬಜಿ, ರವೆ ಉಂಡೆ, ಎಳ್ಳು ಹೋಳಿಗೆ, ಮಾದಲಿ ಹುಗ್ಗಿ, ಹಪ್ಪಳ, ಸಂಡಿಗೆ ಸೇರಿ ನಾನಾ ಖಾದ್ಯಗಳನ್ನು ಸವಿದಿದ್ದು ವಿಶೇಷವಾಗಿತ್ತು.

ಈ ವರ್ಷ 18 ದಿನದಲ್ಲಿ ಅಂದಾಜು 30 ಲಕ್ಷ ಭಕ್ತರು ಪ್ರಸಾದ ಸೇವಿಸಿದ್ದು, 18 ರಿಂದ 20 ಲಕ್ಷದವರೆ ರೊಟ್ಟಿ, 300 ಕ್ವಿಂಟಲ್‌ ತೊಗರಿಬೇಳೆ, 150 ಕ್ವಿಂ. ಹೆಸರುಬೇಳೆ, 1500 ಕ್ವಿಂ.ಅಕ್ಕಿ, ಹಾಲು, ತುಪ್ಪ, ಉಪ್ಪಿನಕಾಯಿ, ಚಟ್ನಿಪುಡಿ, ತರಕಾರಿ, ಆಹಾರ ಸಿದ್ದಪಡಿಸಲು 500 ಟನ್‌ ಕಟ್ಟಿಗೆ ಬಳಕೆ ಮಾಡಲಾಗಿದೆ. ಒಟ್ಟು 80 ಗ್ರಾಮಗಳ ಜನರು ಸರದಿಯಲ್ಲಿ ಪ್ರಸಾದ ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗಿದ್ದರು.

ಜಾತ್ರೆ ಆವರಣದಲ್ಲಿ ಕೊನೆಯ ದಿನ ಬೆಳಗ್ಗೆಯಿಂದಲೇ ಗವಿಮಠಕ್ಕೆ ಧಾವಿಸಿದ ಭಕ್ತರು ದರ್ಶನ ಪಡೆದು ಪ್ರಸಾದ ಸೇವಿಸಿದರು. ಕೊನೆ ದಿನ ಮನೆಗೆ ಬೇಕಾಗುವ ಹಾಗೂ ನಾನಾ ವಸ್ತುಗಳನ್ನು ಖರೀದಿಸುವಲ್ಲಿ ಮಹಿಳೆಯರು ಮುಂದಾಗಿದ್ದರು. ಈ ವರ್ಷ ಜಾತ್ರೆಗೆ ಆಗಮಿಸಿದ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ಉತ್ತಮವಾಗಿ ವ್ಯಾಪಾರಾಗಿದೆ. ಕಳೆದ 15 ದಿನಗಳಿಂದ ಅಂಗಡಿಗಳಲ್ಲಿ ಜನರು ತುಂಬಿದ್ದರು. ಬಳೆ ಅಂಗಡಿ, ಪಳಾರ ಅಂಗಡಿ, ಆಟಿಕೆ ಸಾಮಗ್ರಿ ಹಾಗೂ ತಿಂಡಿ ತಿನಿಸುಗಳ ವ್ಯಾಪಾರಸ್ಥರು ಸೇರಿ ಇತರರು ಭರ್ಜರಿಯಾಗಿ ವ್ಯಾಪಾರ ಮಾಡಿದ್ದಾರೆ.

50 ಕೆಜಿ ಅಕ್ಕಿ ಹೊತ್ತು ಪಾದಯಾತ್ರೆ : ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ತಾಳಕನಕಾಪುರದ ಯುವಕ ದುರ್ಗಪ್ಪ ಪರಿಯವರ ತಾಲೂಕಿನ ತಾಳಕನಕಾಪುರದಿಂದ ಕೊಪ್ಪಳ ಗವಿಮಠಕ್ಕೆ 50 ಕೆಜಿ ಅಕ್ಕಿ ಪ್ಯಾಕೇಟ್‌ ಹೊತ್ತು 15 ಕಿ.ಮೀ. ಪಾದಯಾತ್ರೆ ಮೂಲಕ ಗವಿಸಿದ್ಧೇಶ್ವರ ದೇವರ ಆಶೀರ್ವಾದ ಪಡೆದಿದ್ದು ವಿಶೇಷವಾಗಿತ್ತು. ಬೆಳಗ್ಗೆ 6-40ಕ್ಕೆ ಗ್ರಾಮದಿಂದ ಹೊರಟ ಈ ಭಕ್ತ 11-40ಕ್ಕೆ ಗವಿಮಠ 50 ಕೆ.ಜಿ ಅಕ್ಕಿಯನ್ನು ಗವಿಮಠಕ್ಕೆ ಅರ್ಪಿಸಿದ್ದಾರೆ.

RELATED ARTICLES
- Advertisment -
Google search engine

Most Popular