Monday, January 19, 2026
Google search engine

Homeಸ್ಥಳೀಯಧಮ್ಕಿ ಪ್ರಕರಣದ ಸ್ಥಳಕ್ಕೆ ತಹಸಿಲ್ದಾರ್ ಭೇಟಿ, 20 ಎಕರೆ ವಶ

ಧಮ್ಕಿ ಪ್ರಕರಣದ ಸ್ಥಳಕ್ಕೆ ತಹಸಿಲ್ದಾರ್ ಭೇಟಿ, 20 ಎಕರೆ ವಶ

ಮೈಸೂರು: ಸಿಎಂ ಸ್ವಕ್ಷೇತ್ರದಲ್ಲಿ ಮಹಿಳಾ ಅಧಿಕಾರಿಗೆ ವ್ಯಕ್ತಿಯೊಬ್ಬ ಧಮ್ಕಿ ಹಾಕಿದ್ದ ಪ್ರಕರಣದಲ್ಲಿ ಸ್ಥಳಕ್ಕೆ ಮೈಸೂರು ತಾಲೂಕು ತಹಸಿಲ್ದಾರ್ ಮಹೇಶ್ ಭೇಟಿ ನೀಡಿ ಪರಿಶೀಲಿಸಲಿದ್ದು ಒತ್ತುವರಿಯಾಗಿದ್ದ 20 ಎಕರೆ ಸರ್ಕಾರ ಜಾಗವನ್ನ ವಶಕ್ಕೆ ಪಡೆದಿದ್ದಾರೆ.

2025ರ ಡಿ.31 ರಂದು ಗುಡಮಾದನಹಳ್ಳಿಯಲ್ಲಿರುವ ಒತ್ತುವರಿ ಜಾಗ ವೀಕ್ಷಣೆಗೆ ಗ್ರಾಮ ಆಡಳಿತ ಮಹಿಳಾ ಅಧಿಕಾರಿ ಜಿ ಭವ್ಯ ಹಾಗೂ ಗ್ರಾಮ ಸಹಾಯಕ ನವೀನ್ ತೆರಳಿದ್ದರು. ಈ ವೇಳೆ ಜಿ.ಎಂ ಪುಟ್ಟಸ್ವಾಮಿ ಎಂಬ ವ್ಯಕ್ತಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಧಮ್ಕಿ ಹಾಕಿದ್ದ.

ಕಳೆದ ಹಲವು ದಿನಗಳಿಂದ ಇದೇ ಸ್ಥಳದಲ್ಲಿ ರೈತರು ಭೂಮಿ ವಶಪಡೆಯದಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದರು. ಒತ್ತುವರಿಯಾಗಿರುವ ಜಾಗ ಸರ್ಕಾರಕ್ಕೆ ಸೇರಿದ್ದ ಜಾಗ ಎಂದು ರೈತರಿಗೆ ತಿಳಿ ಹೇಳಿದ ತಹಸಿಲ್ದಾರ್ ಮಹೇಶ್. ನಂತರ ರೈತರು ಪ್ರತಿಭಟನೆ ವಾಪಸ್ ಪಡೆದರು.

RELATED ARTICLES
- Advertisment -
Google search engine

Most Popular