ಬೆಂಗಳೂರು: ನೂರಕ್ಕೆ ನೂರು ಸಿಎಂ ಸಿದ್ದರಾಮಯ್ಯ ಈ ಬಾರಿ ಬಜೆಟ್ ಮಂಡನೆ ಮಾಡ್ತಾರೆ. ನಾಯಕತ್ವ ಬದಲಾವಣೆಗೆ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಸಚಿವ ಬೋಸರಾಜು ತಿಳಿಸಿದ್ದಾರೆ.
ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಗೊಂದಲ ವಿಚಾರಕ್ಕೆ ವಿಕಾಸಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾಯಕತ್ವ ಬದಲಾವಣೆ ಅನ್ನೋದು ಮುಗಿದ ಅಧ್ಯಾಯ ಅಂತಲ್ಲ. ಸಿಎಂ, ಡಿಸಿಎಂ ಕೂಡ ಕ್ಲಿಯರ್ ಹೇಳಿದ್ದಾರೆ. ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಅಂದಿದ್ದಾರೆ. ಈಗ ಬದಲಾವಣೆ ಪರಿಸ್ಥಿತಿ ಇಲ್ಲ, ಅಂತಹ ಪರಿಸ್ಥಿತಿ ಬಂದರೆ ಹೈಕಮಾಂಡ್ ತೀರ್ಮಾನ ಮಾಡಲಿದೆ. ಬೆಳಿಗ್ಗೆಯಿಂದ ಸಂಜೆ ತನಕ ಬಿಜೆಪಿಯವ್ರು ಬೊಗಳುತ್ತಿರುತ್ತಾರೆ. ಲೋಪದೋಷಗಳಿದ್ರೆ ಹೇಳಲಿ, ಸುಮ್ಮನೆ ಸುಳ್ಳು ಹೇಳುವುದಲ್ಲ. ಹೊಸದಾಗಿ ಬಂದಿರುವ ಶಾಸಕರು ಉತ್ಸಾಹದಲ್ಲಿ ಹೇಳ್ತಾರೆ. ನೂರಕ್ಕೆ ನೂರು ಪರ್ಸೆಂಟ್ ಸಿಎಂ ಬಜೆಟ್ ಮಂಡಿಸುತ್ತಾರೆ ಎಂದು ಹೇಳಿದ್ದಾರೆ.
ಎಲ್ಲಾ ಕೆಲಸಗಳು ಸರಿಯಾಗಿ ನಡೆಯುತ್ತಿವೆ. ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ. ಎರಡು ಘಟನೆಯಲ್ಲಿ ನೋಡಿದ್ರೆ ಗೊತ್ತಾಗುತ್ತೆ ಹೈಕಮಾಂಡ್ ವೀಕ್? ಸ್ಟ್ರಾಂಗಾ? ಅಂತ. ನಮ್ಮ ಪಕ್ಷದಲ್ಲಿ ಅಧಿಕಾರಕ್ಕಾಗಿ ಯಾವುದೇ ಗೊಂದಲ ಇಲ್ಲ. ಹೈಕಮಾಂಡ್ ನಿರ್ಧಾರವೇ ಅಂತಿಮ. ನಮ್ಮ ಮಂತ್ರಿಸ್ಥಾನ ಸೇಫ್ ಅಂತಾ ಕೂಡ ನಾನು ಹೇಳಲ್ಲ. ಎಲ್ಲವನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದಿದ್ದಾರೆ
ಇದೇ ವೇಳೆ ಶ್ರೀರಾಮುಲು ವಿರುದ್ಧ ಕೇಸ್ ದಾಖಲು ಮಾಡಿರೋ ವಿಚಾರವಾಗಿ ಮಾತನಾಡಿ, ಸರ್ಕಾರ ಮಾಡುವ ಕೆಲಸಗಳನ್ನ ವಿಮರ್ಶೆ ಮಾಡುವುದು ಅವರ ಕೆಲಸ. ರಾಮುಲು ಮಂತ್ರಿಯಾಗಿ ಕೆಲಸ ಮಾಡಿದವರು. ಏನ್ ವಿಷಯದ ಬಗ್ಗೆ ಮಾತನಾಡಬೇಕು ಎಂಬುದು ತಿಳಿದು ಮಾತನಾಡಬೇಕು. ಹೀಗೆ ಮಾತಾಡಿದ್ರೆ ಆ ಹುಡುಗಿಯ ಕುಟುಂಬದ ಪರಿಸ್ಥಿತಿ ಏನಾಬೇಕು. ಕಾನೂನು ಪ್ರಕಾರ ಪೊಲೀಸರು ಎಫ್‌ಐಆರ್ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.



