Tuesday, January 20, 2026
Google search engine

Homeರಾಜ್ಯಸುದ್ದಿಜಾಲಹಲಸಿ ಕದಂಬೋತ್ಸವ ಪುನರಾರಂಭ ನಿರೀಕ್ಷೆ.

ಹಲಸಿ ಕದಂಬೋತ್ಸವ ಪುನರಾರಂಭ ನಿರೀಕ್ಷೆ.

ವರದಿ :ಸ್ಟೀಫನ್ ಜೇಮ್ಸ್.

ಜಿಲ್ಲೆಯ ಖಾನಾಪುರ ತಾಲೂಕಿನ ಹಲಸಿ ಕದಂಬರ ಉಪರಾಜಧಾನಿ ಎಂಬುದು ಎಷ್ಟೋ ವರ್ಷಗಳ ಕಾಲ ಹೊರ ಜಗತ್ತಿಗೆ ಕಾಣದೇ ಇತಿಹಾಸದಲ್ಲಿ ಹುದುಗಿಹೋಗಿತ್ತು. ಇದನ್ನು ಹೊರಜಗತ್ತಿಗೆ ಪರಿಚಯಿಸಲು ವೇದಿಕೆಯಾಗಿದ್ದ ಕದಂಬೋತ್ಸವ ಕೇವಲ ಎರಡು ವರ್ಷ ಮಾತ್ರ ನಡೆದು ಸ್ಥಗಿತಗೊಂಡು ದಶಕವೇ ಕಳೆದಿದೆ. ಪ್ರಸ್ತುತ ಉತ್ಸವ ಮತ್ತೊಮ್ಮೆ ಪುನರಾರಂಭಗೊಳ್ಳುವ ಭರವಸೆ ಮತ್ತೆ ಚಿಗುರಿದೆ.

ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಬನವಾಸಿ ಕದಂಬರ ಮೂಲ ರಾಜಧಾನಿಯಾಗಿತ್ತು. ತಮ್ಮ ವ್ಯಾಪಾರ-ವಹಿವಾಟು ವಿಸ್ತರಿಸಲು ಅವರು ಹಲಸಿಯನ್ನು ತಮ್ಮ ಎರಡನೇ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು. ಕದಂಬರ ಆಳ್ವಿಕೆಯಲ್ಲಿ ಹಲಸಿ (ಪಲಾಸಿಕಾ) ಪ್ರಮುಖ ವಾಣಿಜ್ಯ ಹಾಗೂ ವಿದ್ಯಾಕೇಂದ್ರವಾಗಿತ್ತು. ಹಲಸಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಇದಕ್ಕೆ ಸಂಬಂಧಿಸಿದಂತೆ ಅನೇಕ ಶಿಲ್ಪ ಮತ್ತು ಶಾಸನದ ಕುರುಹು ಲಭಿಸಿವೆ. ಇಷ್ಟೆಲ್ಲ ಇದ್ದರೂ ಹಲಸಿ ಕೇಂದ್ರಿತ ಐತಿಹಾಸಿಕ ಹಾಗೂ ಪ್ರಾಕ್ತನಶಾಸ ಅಧ್ಯಯನ ನಿರೀಕ್ಷಿತ ಮಟ್ಟದಲ್ಲಿ ನಡೆದಿಲ್ಲ.

2014ರಲ್ಲಿ ಕಾಂಗ್ರೆಸ್ ಸಕಾರದ ಅವಧಿಯಲ್ಲಿ ಹಲಸಿಯಲ್ಲಿ ಎರಡು ದಿನಗಳ ಕದಂಬೋತ್ಸವ ಆರಂಭಿಸಿದಾಗ, ಈ ಕುರಿತು ಹೊಸ ನಿರೀಕ್ಷೆ ಮೂಡಿದ್ದವು. ಆಗ ಸಚಿವರಾಗಿದ್ದ ಆರ್.ವಿ.ದೇಶಪಾಂಡೆ ಖುದ್ದು ಆಸಕ್ತಿವಹಿಸಿದ ಪರಿಣಾಮ 2014ರಲ್ಲಿ ಫೆ.12 ಮತ್ತು 13ರಂದು, 2015ರಲ್ಲಿ ಅ.28 ಮತ್ತು 29ರಂದು ಹಲಸಿ ಕದಂಬೋತ್ಸವ ಅದ್ದೂರಿಯಾಗಿ ನಡೆದಿತ್ತು. ಮೊದಲ ವರ್ಷ 5 ಲಕ್ಷ ರೂ. ಹಾಗೂ ಎರಡನೇ ವರ್ಷ 10 ಲಕ್ಷ ರೂ. ಅನುದಾನವೂ ಬಿಡುಗಡೆಯಾಗಿತ್ತು. ನಂತರ ದಶಕದವರೆಗೆ ಹಲಸಿ ಕದಂಬೋತ್ಸವ ಆಯೋಜನೆಗೊಂಡಿಲ್ಲ. ನಿಂತು ಹೋದ ಉತ್ಸವ ಆರಂಭಿಸಬೇಕೆಂಬುದು ಸ್ಥಳೀಯರ ಆಶಯವಾಗಿದ್ದರೂ ಈಡೇರಿರಲಿಲ್ಲ. ಪ್ರಸ್ತುತ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ನಂದಗಡದಲ್ಲಿ ರಾಯಣ್ಣ ಮತ್ತು ಸಂಗಡಿಗರನ್ನು ನೇಣಿಗೇರಿಸಿದ ಸ್ಥಳವನ್ನು ವೀರಭೂಮಿ ಮ್ಯೂಸಿಯಂ ಆಗಿ ಅಭಿವೃದಿಟಛಿಪಡಿಸಿದೆ.

ನಂದಗಡದಿಂದ ಕೇವಲ 6 ಕಿ.ಮೀ. ದೂರದಲ್ಲಿರುವ ಹಲಸಿಯತ್ತಲೂ ಸರ್ಕಾರ ಗಮನಹರಿಸಿ, ಕದಂಬೋತ್ಸವವನ್ನು ಪುನಃ ಆರಂಭಿಸಲಿದೆ ಎಂಬ ನಿರೀಕ್ಷೆ ಮತ್ತೆ ಈ ಭಾಗದ ಜನರಲ್ಲಿ ಮೂಡಿದೆ.ಹಲಸಿ ವಿಶೇಷ: ಮಧ್ಯಕಾಲೀನ ದೇವಾಲಯಗಳಿಂದ ಸುಪ್ರಸಿದಟಛಿವಾಗಿರುವ ಹಲಸಿಯ ಪ್ರಾಚೀನ ಹೆಸರು ಪಲಾಸಿಕಾ. ಇಲ್ಲಿನ ದೇವಾಲಯಗಳು ಪುರಾತತ್ವ ಇಲಾಖೆ ಉಸ್ತುವಾರಿಯಲ್ಲಿವೆ. ಕಲ್ಮೇಶ್ವರ, ಸುವರ್ಣೇಶ್ವರ, ರಾಮಲಿಂಗೇಶ್ವರ, ಭೂವರಾಹ ಲಕ್ಷ್ಮೀನರಸಿಂಹ ಹಾಗೂ ದಿಗಂಬರ ಜೈನ ಬಸದಿ ಇಲ್ಲಿನ ಪ್ರಮುಖ ದೇವಸ್ಥಾನಗಳು. ಇಲ್ಲಿ ಅತ್ಯಮೂಲ್ಯ ಶಿಲ್ಪಕಲಾಕೃತಿಗಳಿವೆ. ಈ ಕುರಿತು ಸಂಶೋಧಕರು ಸಾಕಷ್ಟು ಅಧ್ಯಯನ ಮಾಡಿದ್ದಾರೆ. ಇದಲ್ಲದೆ, ಹಲಸಿಯಲ್ಲಿ ಕದಂಬರು ಸೇರಿದಂತೆ ವಿವಿಧ ಆಳ್ವಿಕೆಗಾರರ ವಿವರಗಳನ್ನೊಳಗೊಂಡ ಹಲವು ಶಾಸನಗಳು ಲಭಿಸಿವೆ.

ವಿವಿಧ ಸಂಘಟನೆಗಳ ಹೋರಾಟದ ಲವಾಗಿ ದಶಕದ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕದಂಬೋತ್ಸವ ಆರಂಭಗೊಂಡಿತ್ತು.ಮುಖ್ಯಮಂತ್ರಿ ಯವರಿಗೆ ಭೇಟಿ ನೀಡಿ ಹಲಸಿ ಕದಂಬೋತ್ಸವ ಪುನರಾರಂಭಿಸುವಂತೆ ಮನವಿ ಸಲ್ಲಿಸಿದ್ದೇವೆ.— ದಶರಥ ಬನೋಶಿ ಹೋರಾಟಗಾರ

RELATED ARTICLES
- Advertisment -
Google search engine

Most Popular