Wednesday, January 21, 2026
Google search engine

Homeಸ್ಥಳೀಯಉಪ್ಪಾರ ಸಮುದಾಯ ಏಕತೆ ಕೊರತೆಯಿಂದ ಸವಲತ್ತು ಕೈ ತಪ್ಪಿದೆ : ಹೆಚ್ಎನ್ ವಿಜಯ್

ಉಪ್ಪಾರ ಸಮುದಾಯ ಏಕತೆ ಕೊರತೆಯಿಂದ ಸವಲತ್ತು ಕೈ ತಪ್ಪಿದೆ : ಹೆಚ್ಎನ್ ವಿಜಯ್

ಕೆ.ಆರ್. ನಗರ : ಸೂಕ್ಷ್ಮ ಮತ್ತು ಸಣ್ಣ ಸಮಾಜದವರು ಒಗ್ಗಟ್ಟಾಗಿ ಹೋರಾಟ ಮಾಡಿದಾಗ ಮಾತ್ರ ರಾಜಕೀಯ ಸ್ಥಾನಮಾನ ಸೇರಿದಂತೆ ಇತರ ಸವಲತ್ತುಗಳನ್ನು ಪಡೆಯಲು ಸಾಧ್ಯ ಎಂದು ಮುಡಾ ಮಾಜಿ ಅಧ್ಯಕ್ಷ ಹೆಚ್ಎನ್ ವಿಜಯ್ ಹೇಳಿದರು.
ಪಟ್ಟಣದ ಆಂಜನೇಯ ಬಡಾವಣೆಯ ಶ್ರೀರಾಮ ಮಂದಿರದಲ್ಲಿ ತಾಲ್ಲೂಕು ಉಪ್ಪಾರರ ಸಮುದಾಯದ ವತಿಯಿಂದ ಹೊರ ತಂದಿರುವ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಅವರು ಉಪ್ಪಾರ ಸಮುದಾಯದ ಬಂಧುಗಳು ನಿಮಗಿಷ್ಠ ಬಂದಂತೆ ರಾಜಕೀಯ ಮಾಡಿ ಆದರೆ ಸಮುದಾಯದ ವಿಚಾರ ಬಂದಾಗ ಎಲ್ಲರೂ ಒಂದಾಗಿ ಎಂದರು.

ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ನಮ್ಮ ಸಮುದಾಯದ ಮತ ಪಡೆಯಲು ಸುಳ್ಳು ಭರವಸೆ ನೀಡುತ್ತಿದ್ದು ಇದರಿಂದ ಕೆ. ಆರ್. ನಗರ ಮತ್ತು ಸಾಲಿಗ್ರಾಮ ತಾಲೂಕುಗಳಲ್ಲಿ ಸಮುದಾಯಕ್ಕಾಗಿ ಒಂದು ನಿವೇಶನವನ್ನು ಪಡೆಯಲು ಸಾಧ್ಯವಾಗದಿರುವುದು ಒಗ್ಗಟ್ಟಿನ ಕೊರತೆ ಕಾರಣ ಎಂದು ವಿಷಾದ ವ್ಯಕ್ತಪಡಿಸಿದರು.
ನಾನು ಅಧಿಕಾರ ಮತ್ತು ಹಣಕ್ಕಾಗಿ ಯಾವುದೇ ವ್ಯಕ್ತಿ ಮತ್ತು ಪಕ್ಷವನ್ನು ಬೆಂಬಲಿಸಿಲ್ಲ ನನ್ನ ಸ್ವಂತ ಪರಿಶ್ರಮ ಮತ್ತು ಉಧ್ಯಮದಿಂದ ಈ ಹಂತಕ್ಕೆ ಬಂದಿದ್ದು ನನಗೆ ನನ್ನ ಸಮಾಜದ ಬಂದುಗಳು ಯಾವುದೆ ಜವಾಬ್ದಾರಿ ನೀಡಿದರು ಅದನ್ನು ನಿಭಾಯಿಸಲು ಸಿದ್ದನಿದ್ದೇನೆಂದು ಘೋಷಿಸಿದರು.

ಉಪ್ಪಾರ ಸಮಾಜದವರು ವೃತ್ತಿ ಪರವಾಗಿ ಅವಲಂಬಿಸಿರುವ ಕೆಲಸಗಳಿಗೆ ಹೆಚ್ಚಾಗಿ ತಮ್ಮ ಮಕ್ಕಳನ್ನು ಕಳಿಸದೆ ಉತ್ತಮ ಹಾಗೂ ಉನ್ನತ ಶಿಕ್ಷಣ ಕೊಡಿಸುವ ಮೂಲಕ ಸಮಾಜದಲ್ಲಿ ಅವರು ಜವಬ್ದಾರಿಯುತ ಸ್ಥಾನ ಪಡೆಯುವಂತೆ ಮಾಡಬೇಕೆಂದು ಸಲಹೆ ನೀಡಿದರು.
ನಮ್ಮ ಸಮುದಾಯದ ವಿದ್ಯಾರ್ಥಿಗಳು ಉನ್ನತ ಮತ್ತು ವೃತ್ತಿಪರ ಸೇರಿದಂತೆ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ದರಾಗಬೇಕಿದ್ದರೆ ಅವರಿಗೆ ಆರ್ಥಿಕ ಸಹಾಯವನ್ನು ನೀಡುತ್ತೇನೆ ಎಂದು ಪ್ರಕಟಿಸಿದರು.
ತಾಲ್ಲೂಕು ಉಪ್ಪಾರರ ಸಂಘದ ಅಧ್ಯಕ್ಷ ಕಾಟ್ನಾಳ್ ಮಹದೇವ್ ಮಾತನಾಡಿ ದಶಕಗಳೆ ಕಳೆದರು ನಮ್ಮ ಸಮುದಾಯವನ್ನು ಗುರುತಿಸುವ ಕೆಲಸವನ್ನು ಯಾವುದೇ ಮುಖಂಡರು ಯಾವುದೇ ಪಕ್ಷ ಮಾಡಿಲ್ಲ ಆದರೆ ನಮ್ಮ ಸಮುದಾಯದ ಕಲಿಯುಗದ ಭಗಿರಥನೆಂಬ ಹೆಸರಿಂದ ಕರೆಯಲ್ಪಡುವ ಹೆಚ್. ಎನ್. ವಿಜಯ್ ಅವರ ನೇತೃತ್ವದಲ್ಲಿ ಎರಡು ತಾಲೂಕಿನಲ್ಲಿ ಸಮುದಾಯವನ್ನು ಸಂಘಟಿಸುವ ಕೆಲಸವನ್ನು ಮಾಡುತ್ತೇವೆ ಎಂದು ತಿಳಿಸಿದರು.

ಮುಂದೆ ನಡೆಯುವ ಎಲ್ಲಾ ಸಮಾರಂಭ ಮತ್ತು ಕಾರ್ಯಗಳು ಹೆಚ್.ಎನ್. ವಿಜಯ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು ಅವರ ಮಾರ್ಗದರ್ಶನದಲ್ಲಿ ನಡೆದು ನಾವೆಲ್ಲ ನಮ್ಮ ನಾಯಕನ ಬೆನ್ನೆಲುವಾಗಿ ನಿಂತು ಶಕ್ತಿ ನೀಡುವ ಕೆಲಸವನ್ನು ಮಾಡುತ್ತೇವೆ ಎಂದು ತಿಳಿಸಿದರು.
ಜಿಲ್ಲಾ ಪತ್ರ ಬರಹಗಾರ ಮಿರ್ಲೆರಾಜೀವ್, ತಾಲೂಕು ಉಪ್ಪಾರರ ಸಂಘದ ಉಪಾಧ್ಯಕ್ಷ ರಾಮಕೃಷ್ಣ, ಪ್ರಧಾನ ಕಾರ್ಯದರ್ಶಿ ಹರದನಹಳ್ಳಿ ಸಂದೀಪ್, ಸಂಘಟನಾ ಕಾರ್ಯದರ್ಶಿ ಮುದುಗುಪ್ಪೆ ಎಂ.ಕುಮಾರ್, ಖಜಾಂಚಿ ರವಿಕುಮಾರ್, ಪತ್ರಿಕಾ ಕಾರ್ಯದರ್ಶಿ ಯೋಗಾನಂದ, ಕೆ. ಆರ್. ನಗರ ಟೌನ್ ಉಪ್ಪಾರ ಸಮಾಜದ ಅಧ್ಯಕ್ಷ ಕೆ ಟಿ ಕೃಷ್ಣ, ಯಜಮಾಾನರಾದ ಕೇಶವ್, ಮೂರ್ತಿ, ರಂಗರಾಜ್, ಹರದನಹಳ್ಳಿ ರಘು, ವೈ ಕೆ ದಯಾನಂದ್, ಮಂಜುನಾಥ್ ಇದ್ದರು.

RELATED ARTICLES
- Advertisment -
Google search engine

Most Popular