Friday, January 23, 2026
Google search engine

Homeದೇಶವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರ ನಡೆದ ಅಮೆರಿಕಾ

ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರ ನಡೆದ ಅಮೆರಿಕಾ

ವಾಷಿಂಗ್ಟನ್ : ವಿಶ್ವ ಆರೋಗ್ಯ ಸಂಸ್ಥೆಯಿಂದ ಅಮೆರಿಕ ಹೊರಬಂದಿದ್ದು, ಡಬ್ಲ್ಯೂಹೆಚ್‌ಒನಲ್ಲಿ ತನ್ನ ಸದಸ್ಯತ್ವವನ್ನು ಅಮೆರಿಕ ಅಧಿಕೃತವಾಗಿ ರದ್ದುಗೊಳಿಸಿದೆ.

ಅಮೆರಿಕ ನಿರ್ಧಾರದ ಬಳಿಕ ಜಿನಿವಾದಲ್ಲಿರುವ WHO ಕಚೇರಿಯಲ್ಲಿ ಅಮೆರಿಕದ ಧ್ವಜ ತೆರವು ಮಾಡಲಾಗಿದೆ. ಈ ವೇಳೆ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ತಪ್ಪಾಗಿ ನಿರ್ವಹಿಸಿದೆ ಮತ್ತು ಅಗತ್ಯ ಸುಧಾರಣೆಗಳನ್ನು ಕೈಗೊಳ್ಳಲು ವಿಫಲವಾಗಿದೆ ಯುಎಸ್‌ ಆರೋಪಿಸಿದೆ.

ಇನ್ನೂ ರೋಗಗಳ ಕಣ್ಗಾವಲು ಮತ್ತು ನಿರ್ಣಾಯಕ ಆರೋಗ್ಯ ಸವಾಲುಗಳಂತಹ ವಿಷಯಗಳ ಕುರಿತು ಇತರ ರಾಷ್ಟ್ರಗಳೊಂದಿಗೆ ದ್ವಿಪಕ್ಷೀಯ ಸಹಕಾರಕ್ಕೆ ಅಮೆರಿಕ ಆದ್ಯತೆ ನೀಡುತ್ತದೆ. ಆದರೆ, WHO ವೀಕ್ಷಕನಾಗಿಯೂ ಮುಂದುವರಿಯಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

2024 ಮತ್ತು 2025 ರ ಸದಸ್ಯತ್ವ ಶುಲ್ಕದಲ್ಲಿ ಅಮೆರಿಕ ಇನ್ನೂ ಸುಮಾರು 260 ಮಿಲಿಯನ್ ಡಾಲರ್‌ಗಳನ್ನು ಬಾಕಿ ಉಳಿಸಿಕೊಂಡಿದ್ದು, ಬಾಕಿಗಳನ್ನು ಪಾವತಿಸದೆ, ಸಂಪೂರ್ಣ ಬೇರ್ಪಡಿಕೆ ಸಾಧ್ಯವಿಲ್ಲ ಎಂದು ಅಮೆರಿಕಾದ ನಿರ್ಧಾರದ ಬಳಿಕ WHO ವಕ್ತಾರರು ತಿಳಿಸಿದ್ದಾರೆ.

ಅಮೆರಿಕದ ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆ ಮತ್ತು ಅಮೆರಿಕದ ವಿದೇಶಾಂಗ ಇಲಾಖೆಯು ಚೀನಾದ ವುಹಾನ್‌ನಲ್ಲಿ ಉದ್ಭವಿಸಿದ COVID-19 ಸಾಂಕ್ರಾಮಿಕ ರೋಗವನ್ನು ವಿಶ್ವ ಆರೋಗ್ಯ ಸಂಸ್ಥೆ ತಪ್ಪಾಗಿ ನಿರ್ವಹಿಸಿದೆ. ತುರ್ತಾಗಿ ಅಗತ್ಯವಿರುವ ಸುಧಾರಣೆಗಳನ್ನು ಅಳವಡಿಸಿಕೊಳ್ಳುವಲ್ಲಿ ವಿಫಲವಾಗಿದೆ. WHO ಸದಸ್ಯ ರಾಷ್ಟ್ರಗಳ ಅನುಚಿತ ರಾಜಕೀಯ ಪ್ರಭಾವದಿಂದ ಸ್ವಾತಂತ್ರ್ಯವನ್ನು ಪ್ರದರ್ಶಿಸುವಲ್ಲಿ ಅಸಮರ್ಥತೆಯಿಂದಾಗಿ, ಅಮೆರಿಕವು ವಿಶ್ವ ಆರೋಗ್ಯ ಸಂಸ್ಥೆಯಿಂದ (WHO) ಹೊರಬಂದಿದೆ ಎಂದು ಘೋಷಿಸಿವೆ.

ಕಳೆದ ವರ್ಷ ಜನವರಿ 20ರಲ್ಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್, WHO ತೊರೆಯುವ ಅಮೆರಿಕದ ಯೋಜನೆಯನ್ನು ಘೋಷಿಸಿದ್ದರು. ವರ್ಷಪೂರ್ತಿ ನಡೆದ ಈ ಪ್ರಕ್ರಿಯೆಯಲ್ಲಿ ಅಮೆರಿಕವು WHO ಗೆ ಹಣಕಾಸು ಒದಗಿಸುವುದನ್ನು ನಿಲ್ಲಿಸಿತು. WHO ನಿಂದ ಎಲ್ಲಾ ಸಿಬ್ಬಂದಿಯನ್ನು ಹಿಂತೆಗೆದುಕೊಂಡಿತು ಎನ್ನಲಾಗಿದೆ.

RELATED ARTICLES
- Advertisment -
Google search engine

Most Popular