Friday, January 23, 2026
Google search engine

Homeಸ್ಥಳೀಯಶಾಪ್ ಓಪನಿಂಗ್‌ನಲ್ಲಿ ಗಿಲ್ಲಿಗೆ ಶರವಣ ಚಿನ್ನದ ಸರ!

ಶಾಪ್ ಓಪನಿಂಗ್‌ನಲ್ಲಿ ಗಿಲ್ಲಿಗೆ ಶರವಣ ಚಿನ್ನದ ಸರ!

ಬೆಂಗಳೂರು : ಬಿಗ್ ಬಾಸ್ ಕನ್ನಡ ಸೀಸನ್ 12’ ವಿನ್ ಆದ ಬಳಿಕ ಗಿಲ್ಲಿ ನಟನ ಲಕ್ ಸಂಪೂರ್ಣವಾಗಿ ಬದಲಾಗಿದೆ. ಬಿಗ್ ಬಾಸ್​ನಿಂದ ಗೆಲುವು ಒಂದು ಕಡೆಯಾದರೆ, ಅವರಿಗೆ ಸಿಕ್ಕ ಜನಪ್ರಿಯತೆ ಮತ್ತೊಂದು ಕಡೆ. ಇದರ ಜೊತೆಗೆ ಧನಲಕ್ಷ್ಮೀ ಕೂಡ ಗಿಲ್ಲಿಯನ್ನು ಹುಡುಕಿ ಬರುತ್ತಿದೆ. ಹೀಗಿರುವಾಗಲೇ ಗಿಲ್ಲಿ ನಟನಿಗೆ ಶರವಣ ಅವರು ಗೋಲ್ಡ್ ಚೈನ್ ಗಿಫ್ಟ್ ಕೊಟ್ಟಿದ್ದಾರಾ ಎಂಬ ಪ್ರಶ್ನೆ ಮೂಡಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ ರನ್ನರ್ ಅಪ್​​ ರಕ್ಷಿತಾ ಶೆಟ್ಟಿಗೆ ಸಾಯಿ ಗೋಲ್ಡ್ ಪ್ಯಾಲೆಸ್​​​ ಮುಖ್ಯಸ್ಥ ಶರವಣ ಕಡೆಯಿಂದ 20 ಲಕ್ಷ ರೂಪಾಯಿ ವೋಚರ್ ನೀಡಲಾಗಿದೆ. ಸಾಯಿ ಗೋಲ್ಡ್ ಪ್ಯಾಲೆಸ್​​​ನಲ್ಲಿ 20 ಲಕ್ಷ ರೂಪಾಯಿವರೆಗೆ ಚಿನ್ನ ಖರೀದಿಸೋ ಅವಕಾಶ ಇದೆ. ವೇದಿಕೆಗೆ ಬಂದು ಅವರು ವೋಚರ್​​ನ ರಕ್ಷಿತಾಗೆ ನೀಡಿದ್ದರು.

ಶರವಣ ಅವರಿಗೆ ಗಿಲ್ಲಿ ಬಗ್ಗೆ ವಿಶೇಷ ಒಲವು ಇದೆ. ಫಿನಾಲೆಗೆ ತೆರಳುವುದಕ್ಕೂ ಮೊದಲು ಮಾತನಾಡಿದ್ದ ಶರವಣ ಅವರು, ‘ಗಿಲ್ಲಿನೇ ಗೆಲ್ತಾನೆ’ ಎಂದು ಭವಿಷ್ಯ ನುಡಿದಿದ್ದರು. ‘ಗಿಲ್ಲಿ ಗೆದ್ರೆ ನನ್ನ ಕಡೆಯಿಂ 20 ಲಕ್ಷ ರೂಪಾಯಿ ಕೊಡ್ತೀನಿ’ ಎಂದಿದ್ದರು. ಆದರೆ, ಬಿಗ್ ಬಾಸ್ ವೇದಿಕೆ ಮೇಲೆ ಅವರು ಈ ಹಣವನ್ನು ನೀಡಿರಲಿಲ್ಲ. ಈಗ ಶಾಪ್ ಓಪನಿಂಗ್​​ಗೆ ಬಂದ ಗಿಲ್ಲಿಗೆ ಅವರು ಚಿನ್ನದ ಚೈನ್ ಹಾಕಿದ್ದಾರೆ.

 ಈ ವಿಡಿಯೋ ನೋಡಿದ ಅನೇಕರು, 20 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಕೊಟ್ಟಿರಬಹುದು ಎಂದು ಊಹಿಸಿದ್ದಾರೆ. ಆದರೆ, ಹಾಗಿಲ್ಲ ಎನ್ನಲಾಗುತ್ತಿದೆ. ಏಕೆಂದರೆ ಶಾಪ್​​ ಓಪನಿಂಗ್​​​ಗೆ ಬರೋ ಸೆಲೆಬ್ರಿಟಿಗಳಿಗೆ ಚಿನ್ನದ ಸರವನ್ನು ಹಾಕೋದು ಶರವಣ ಅವರ ಸ್ಟೈಲ್. ಈ ಮೊದಲು ಕಿಚ್ಚ ಸುದೀಪ್ ಅವರು ಶರಣವಣ ಅವರ ಶಾಪ್​​ಗೆ ಬಂದಾಗ ಇದೇ ರೀತಿಯ ಚೈನ್ ಹಾಕಿದ್ದರು. ಈ ಬಗ್ಗೆ ಅವರ ಕಡೆಯಿಂದಲೇ ಸ್ಪಷ್ಟನೆ ಸಿಗಬೇಕಿದೆ.

RELATED ARTICLES
- Advertisment -
Google search engine

Most Popular