Saturday, January 24, 2026
Google search engine

Homeಅಪರಾಧ29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ದಂಡುಪಾಳ್ಯ ಗ್ಯಾಂಗ್ ಸದಸ್ಯನ ಬಂಧನ

29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ದಂಡುಪಾಳ್ಯ ಗ್ಯಾಂಗ್ ಸದಸ್ಯನ ಬಂಧನ

1997 ರ ಸಾಲಿನ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ದಂಡುಪಾಳ್ಯ ಗ್ಯಾಂಗ್ ಸದಸ್ಯನನ್ನು ಮಂಗಳೂರು ಪೊಲೀಸ್ರು ಬಂಧಿಸಿದ್ದಾರೆ.
ಉರ್ವಾ ಪೊಲೀಸ್ ಠಾಣಾ ಅ.ಕ್ರ ನಂಬ್ರ 113/1997, ಕಲಂ 460, 396, 400 ಐಪಿಸಿ ಪ್ರಕರಣದಲ್ಲಿ 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ “ದಂಡುಪಾಳ್ಯ ಗ್ಯಾಂಗ್” ಎಂದೇ ಕುಖ್ಯಾತಿ ಪಡೆದಿರುವ ಗ್ಯಾಂಗ್ ನ ಸಹಚರ (ಎ-6) ಚಿಕ್ಕ ಹನುಮ @ ಚಿಕ್ಕ ಹನುಮಂತಪ್ಪ @ ಕೆ. ಕೃಷ್ಣಪ್ಪ @ ಕೃಷ್ಣ ನನ್ನು ಆಂಧ್ರಪ್ರದೇಶ ರಾಜ್ಯದ ಅನ್ನಮಯ್ಯ ಜಿಲ್ಲೆಯ, ಮದನಪಳ್ಳೆ ಎಂಬಲ್ಲಿ ಉರ್ವ ಠಾಣಾ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯವು ಆರೋಪಿತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಪ್ರಕರಣದ ವಿವರ:
ದಿನಾಂಕ: 11-10-1997 ರಂದು ಮಧ್ಯರಾತ್ರಿ ಮಂಗಳೂರು ತಾಲೂಕು ಉರ್ವ ಮಾರಿಗುಡಿ ಕ್ರಾಸ್ ಬಳಿರುವ ಅನ್ವರ್ ಮಹಲ್ ಎಂಬ ಮನೆಗೆ ನುಗ್ಗಿದ ದಂಡುಪಾಳ್ಯ ಗ್ಯಾಂಗ್” ಎಂದೇ ಕುಖ್ಯಾತಿ ಪಡೆದಿರುವ ಗ್ಯಾಂಗ್ ನ ಸಹಚರಗಳಾದ 1) ದೊಡ್ಡ ಹನುಮ @ ಹನುಮ 2)ವೆಂಕಟೇಶ @ ಚಂದ್ರ 3) ಮುನಿಕೃಷ್ಣ @ ಕೃಷ್ಣ ಮತ್ತು 4) ನಲ್ಲತಿಮ್ಮ @ ತಿಮ್ಮ5). ಕೃಷ್ಣ @ ದಂಡುಪಾಳ್ಯ ಕೃಷ್ಣ @ ನಾಗರಾಜ 6) ಚಿಕ್ಕ ಹನುಮ 7) ಕೃಷ್ಣಾಡು @ ಕೃಷ್ಣ 8) ವೆಂಕಟೇಶ್ @ ರಮೇಶ್ ಇವರುಗಳು ಮನೆಯಲ್ಲಿದ್ದ ಶ್ರೀಮತಿ ಲೂವಿಸ್ ಡಿಮೆಲ್ಲೋ, ಪ್ರಾಯ 80 ವರ್ಷ ಹಾಗೂ ರಂಜಿತ್ ವೇಗಸ್, ಪ್ರಾಯ 19 ವರ್ಷ ರವರನ್ನು ಕೊಲೆ ಮಾಡಿ ಚಿನ್ನಾಭರಣಗಳ್ನು ದೊಚಿಕೊಂಡು ಹೋಗಿದ್ದರು. ಸದ್ರಿ ಆಪಾದಿತರುಗಳ ಮೇಲೆ ತನಿಖೆ ನಡೆಸಿ ದೋಷರೋಪಣಾ ಪಟ್ಟಿಯನ್ನು ಮಾನ್ಯ ನಾಯಾಲಯಕ್ಕೆ ಸಲ್ಲಿಸಿದಂತೆ ಘನ 34 ನೇ ಅಪರ ನಗರ ಸಿವಿಲ್ ಮತ್ತು ಸೆಷನ್ ನ್ಯಾಯಾಧೀಶರು (ವಿಶೇಷ ನ್ಯಾಯಾಲಯ), ಕೇಂದ್ರ ಕಾರಾಗೃಹ ಆವರಣ ಪರಪ್ಪನ ಅಗ್ರಹಾರ ಬೆಂಗಳೂರು ರವರ ಎಸ್.ಸಿ ನಂ. 728/2010 ರಂತೆ ಸದ್ರಿ ನ್ಯಾಯಾಲಯದಲ್ಲಿ ವಿಚಾರಣೆ ಮುಕ್ತಾಯಗೊಂಡು ಇತರೆ 5 ಆಪಾದಿತರು ದೊಡ್ಡ ಹನುಮ @ ಹನುಮ ಸೇರಿ ಘನ ನ್ಯಾಯಾಲಯವು ದೋಷಿ ಎಂದು ತೀರ್ಪು ನೀಡಿದೆ.
ಈ ಪ್ರಕರಣದಲ್ಲಿ ಆಪಾಧಿತನಾದ ಚಿಕ್ಕ ಹನುಮ @ ಚಿಕ್ಕ ಹನುಮಂತಪ್ಪ @ ಕೆ. ಕೃಷ್ಣಪ್ಪ @ ಕೃಷ್ಣ ತನ್ನ ಬುಧ್ಧಿವಂತಿಕೆಯನ್ನು ಬಳಸಿ ಚಿಕ್ಕ ಹನುಮಂತಪ್ಪ @ ಕೆ. ಕೃಷ್ಣಪ್ಪ @ ಕೃಷ್ಣ ಎಂದು ಹೆಸರು ಬದಲಾಯಿಸಿಕೊಂಡು ದಸ್ತಗಿರಿಗೆ ಸಿಗದೇ ಮಾನ್ಯ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ಆಂದ್ರಪ್ರದೇಶ ರಾಜ್ಯದಲ್ಲಿ ತಲೆಮರೆಸಿಕೊಂಡಿರುತ್ತಾನೆ. ಈತನ ಮೇಲೆ ಮಂಗಳೂರು ಮಾನ್ಯ JMFC 2ನೇ ನ್ಯಾಯಾಲಯವು 2010 ರಲ್ಲಿ LPC ವಾರೆಂಟ್ ಹೊರಡಿಸಿತ್ತು. ಈತನ ಮೇಲೆ ಕರ್ನಾಟಕ ರಾಜ್ಯದಲ್ಲಿ ಸುಮಾರು 13 ಕೊಲೆ ,ದರೋಡೆ ಪ್ರಕರಣಗಳು ದಾಖಲಾಗಿರುವುದು ತಿಳಿದು ಬಂದಿದ್ದು ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ.
ಈ ಪತ್ತೆ ಕಾರ್ಯದಲ್ಲಿ ಉರ್ವಾ ಪೊಲೀಸ್ ಠಾಣೆಯ ನಿರೀಕ್ಷಕರಾದ ಶ್ಯಾಮ್ ಸುಂದರ್ ಹೆಚ್.ಎಮ್ , ಪಿಎಸ್ಐ ಗುರಪ್ಪ ಕಾಂತಿ, ಪಿಎಸ್ಐ ಎಲ್.ಮಂಜುಳಾ ಎಎಸ್ಐ ವಿನಯ ಕುಮಾರ್ ಮತ್ತು ಸಿಬ್ಬಂದಿಗಳಾದ ಲಲಿತಲಕ್ಷ್ಮಿ, ಅನಿಲ್, ಪ್ರಮೋದ್, ಆತ್ನಾನಂದ , ಹರೀಶ್ ರವರು ಶ್ರಮಿಸಿರುತ್ತಾರೆ. ಸದ್ರಿ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಪ್ರಶಾಂಸೆಯನ್ನು ವ್ಯಕ್ತ ಪಡಿಸಿ, ಹೆಚ್ಚು ಬಹುಮಾನಕ್ಕಾಗಿ ಕರ್ನಾಟಕ ರಾಜ್ಯದ ಡಿಜಿ&ಐಜಿಪಿ ರವರಿಗೆ ಶಿಫಾರಸ್ಸು ಮಾಡಲಾಗಿದೆ.

RELATED ARTICLES
- Advertisment -
Google search engine

Most Popular