ಮಂಗಳೂರು ನಗರದ ಬಹುನಿರೀಕ್ಷಿತ ಜೆಪ್ಪು ಮಹಾಕಾಳಿಪಡ್ಪು ರೈಲ್ವೇ ಅಂಡರ್ ಪಾಸ್ ಕೆಲ ಸೇತುವೆ ಭಾನುವಾರ ಉದ್ಘಾಟನೆಯಾಗಲಿದೆ.
ಸ್ಮಾರ್ಟ್ ಸಿಟಿ ಯೋಜನೆಯಡಿ ಸುಮಾರು 50 ಕೋಟಿ ರೂ. ವೆಚ್ಚದಲ್ಲಿ ಈ ಅಂಡರ್ ಪಾಸ್ ಕೆಲ ಸೇತುವೆ ಮತ್ತು ಸಂಪರ್ಕ ರಸ್ತೆಯು ರಾಷ್ಟ್ರೀಯ ಹೆದ್ದಾರಿಯಿಂದ ಮೋರ್ಗನ್ಸ್ ಗೇಟ್ ವರೆಗೆ ನಿರ್ಮಾಣಗೊಂಡಿದೆ.
ನಗರದ ಹೃದಯ ಭಾಗದಿಂದ ಉಳ್ಳಾಲ ಮತ್ತು ಕೇರಳ ಕಡೆಗೆ ಸಮೀಪದ ಸಂಪರ್ಕ ರಸ್ತೆಯಾಗಿದೆ. ಹಿಂದೆ ಕಿರಿದಾಗಿದ್ದ ಈ ಅಂಡರ್ ಪಾಸ್ ರೈಲ್ವೇ ಗೇಟ್ ನಿಂದಾಗಿ ಸದಾ ಸಂಚಾರ ದಟ್ಟನೆಯಿಂದ ಕೂಡಿತ್ತು. ಕೆಲ ಸೇತುವೆಯು ಪ್ರಸಕ್ತ ಚತುಷ್ಪಥಗೊಂಡು ಸಂಚಾರ ಸರಾಗಗೊಂಡು ಸುಗಮಗೊಳ್ಳಲಿದೆ.
ಭಾನುವಾರ ಸಂಜೆ 4.30 ಗಂಟೆಗೆ ನಡೆಯಲಿರುವ ಅಂಡರ್ ಪಾಸ್ ಕೆಲ ಸೇತುವೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಸ್ಪೀಕರ್ ಯು ಟಿ ಖಾದರ್, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ಐವನ್ ಡಿಸೋಜಾ ಮತ್ತಿತರರು ಭಾಗವಹಿಸಲಿದ್ದಾರೆ.
ವರದಿ: ಶಂಶೀರ್ ಬುಡೋಳಿ



