Monday, January 26, 2026
Google search engine

Homeದೇಶಮಂಗಳೂರಿನ ಲಿಶಾ ಡಿ.ಎಸ್‌ಗೆ 'ರಕ್ಷಾಮಂತ್ರಿ ಕಂಮಂಡೇಶ್ ರಾಷ್ಟ್ರೀಯ ಗೌರವ'

ಮಂಗಳೂರಿನ ಲಿಶಾ ಡಿ.ಎಸ್‌ಗೆ ‘ರಕ್ಷಾಮಂತ್ರಿ ಕಂಮಂಡೇಶ್ ರಾಷ್ಟ್ರೀಯ ಗೌರವ’

ಭಾರತೀಯ ನೇವಿ ಅಧೀನದ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್‌ನ ಕೆಡೆಟ್ ಮಂಗಳೂರಿನ ಲಿಶಾ ಡಿ.ಎಸ್ ಅವರಿಗೆ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ ನೀಡುವ ಪರಮೋಚ್ಚ ಪ್ರಶಸ್ತಿಯಾದ ‘ರಕ್ಷಾಮಂತ್ರಿ ಕಂಮಂಡೇಶ್ ಗೌರವ’ ಲಭಿಸಿದೆ.
ಜ.24ರಂದು ಹೊಸದಿಲ್ಲಿಯ ಡಿಸಿಎಂಸಿಸಿ ಕ್ಯಾಂಪಸ್‌ನಲ್ಲಿ ನಡೆದ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್‌ನ ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಈ ಗೌರವ ಪ್ರದಾನ ಮಾಡಿದರು. ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್‌ನಲ್ಲಿ ಹಲವು ಕಾರ್ಯಕ್ರಮದಲ್ಲಿ ಸೇವೆ ಸಲ್ಲಿಸಿದ ಸಾಧನೆಗಳನ್ನು ಗುರುತಿಸಿ ಭಾರತೀಯ ನೇವಿ ಮೂಲಕ ಈ ಗೌರವವನ್ನು ನೀಡಲಾಗಿದೆ. ಈ ವರೆಗೆ ರಕ್ಷಾಮಂತ್ರಿ ಕಂಮಂಡೇಶ್ ಗೌರವವು ಉತ್ತರ ಭಾರತದ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್‌ನ ಕೆಡೆಟ್‌ಗಳೇ ಆಯ್ಕೆಯಾಗುತ್ತಿದ್ದರು. ಆದರೆ ಇದೇ ಮೊದಲ ಬಾರಿಗೆ ದಕ್ಷಿಣ ಭಾರತದ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್‌ನ ಕೆಡೆಟ್‌ಗೆ ಈ ಗೌರವ ಲಭಿಸಿರುವುದು ವಿಶೇಷ.
ಮಂಗಳೂರು ಕೂಳೂರು ನಿವಾಸಿ ದೇಜಪ್ಪ ಬಂಗೇರ ಹಾಗೂ ಮಲ್ಲಿಕಾ ದಂಪತಿಗಳ ಪುತ್ರಿಯಾಗಿರುವ ಇವರು ವಾಮಂಜೂರಿನ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಾರೆ.

ವರದಿ: ಶಂಶೀರ್ ಬುಡೋಳಿ

RELATED ARTICLES
- Advertisment -
Google search engine

Most Popular