Tuesday, January 27, 2026
Google search engine

Homeಸ್ಥಳೀಯನಂಜೇದೇವನಪುರದಲ್ಲಿ ಮತ್ತೊಂದು ಹುಲಿ ಮರಿ ಸೆರೆ

ನಂಜೇದೇವನಪುರದಲ್ಲಿ ಮತ್ತೊಂದು ಹುಲಿ ಮರಿ ಸೆರೆ

ಚಾಮರಾಜನಗರ : ನಂಜೇದೇವನಪುರ ಗ್ರಾಮದಲ್ಲಿ ತಾಯಿ ಹುಲಿ ಜೊತೆ ನಾಲ್ಕು ಮರಿ ಹುಲಿ ಪತ್ತೆಯಾಗಿದ್ದ ಪ್ರಕರಣದಲ್ಲಿ ಇದೀಗ ಮತ್ತೊಂದು ಹುಲಿ ಮರಿಯನ್ನು ಸೆರೆ ಹಿಡಿಯಲಾಗಿದೆ.

ಸೋಮವಾರ (ಜ.26) ರಾತ್ರಿ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಹುಲಿ ಮರಿ ಸೆರೆಯಾಗಿದೆ. ಈಗಾಗಲೇ ಗಂಡು ಹುಲಿ, ತಾಯಿ ಹುಲಿ ಹಾಗೂ ಮೂರು ಮರಿಗಳನ್ನು ಅರಣ್ಯ ಸಿಬ್ಬಂದಿ ಸೆರೆ ಹಿಡಿದಿದ್ದರು. ಇನ್ನೂ ಮತ್ತೊಂದು ಹುಲಿ ಮರಿಯನ್ನು ಸೆರೆ ಹಿಡಿಯುವುದು ಮಾತ್ರ ಬಾಕಿ ಇದೆ.

ಮತ್ತೊಂದು ಹುಲಿ ಮರಿ ಸೆರೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಮುಂದಾಗಿದ್ದಾರೆ. ನಾಲ್ಕು ಸಾಕಾನೆ ಬಳಸಿಕೊಂಡು ಅಧಿಕಾರಿಗಳು ಕಾರ್ಯಾಚರಣೆಗೆ ಮುಂದಾಗಿದ್ದಾರೆ. 

RELATED ARTICLES
- Advertisment -
Google search engine

Most Popular