Tuesday, January 27, 2026
Google search engine

Homeರಾಜ್ಯಸುದ್ದಿಜಾಲ400 ಕೋಟಿ.ದರೋಡೆ ಅಂತೆ ಕಂತೆಗಳ ಸದ್ದು

400 ಕೋಟಿ.ದರೋಡೆ ಅಂತೆ ಕಂತೆಗಳ ಸದ್ದು

ಬಿಜೆಪಿ ನಾಯಕರ ಹಣ ಎಂದ ಕಾಂಗ್ರೆಸ್ ಮುಖಂಡರು.

ವರದಿ :ಸ್ಟೀಫನ್ ಜೇಮ್ಸ್.

400 ಕೋಟಿ ರು. ಹಣ ಇದ್ದ ಕಂಟೇನರ್ ದರೋಡೆ ಪ್ರಕರಣ ಅಂತೆ ಕಂತೆಗಳ ಮೇಲೆ ಸಾಗಿದೆ. ಈ ನಡುವೆ ಅಪಹರಣ ಪ್ರಕರಣ ಬಂಧನಕ್ಕೆ ಒಳಗಾದ ವಿರಾಟ್ ಗಾಂಧಿ ಹಾಗೂ ಜಯೇಶ್ ಮಧ್ಯೆ ನಡೆದ ವಾಟ್ಸಪ್ ಕರೆ ಸಂಭಾಷಣೆ ವೈರಲ್ ಆಗಿದೆ. ಸಂಭಾಷಣೆ ಪ್ರಕಾರ ಹಣ ಗುಜರಾತ್ ಮೂಲದ ರಾಜಕಾರಣಿಗೆ ಸೇರಿದ್ದು ಎಂದು ಹೇಳಲಾಗುತ್ತಿದ್ದು, ಬಾಲಾಜಿ ಟ್ರಸ್ಟ್ ಹೆಸರು ತಳುಕು ಹಾಕಿಕೊಂಡಿದೆ.ವೈರಲ್ ಆಗಿರುವ ಆಡಿಯೊ ಪ್ರಕಾರ 2 ಸಾವಿರ ಮುಖ ಬೆಲೆಯ ಸರಿ ಸುಮಾರು 400 ಕೋಟಿ ಹಣ ಕಂಟೇನರ್ ನಲ್ಲಿ ಗೋವಾದಿಂದ ಕರ್ನಾಟಕ ಮಾರ್ಗ ವಾಗಿ ಸಾಗಿಸಿ ಬಾಲಾಜಿ ಟ್ರಸ್ಟ್‌ಗೆ ತಗೆದುಕೊಂಡು ಹೋಗುವ ಮೂಲಕ ವಿನಿಮಯ ಮಾಡಲು ಸಿದ್ಧತೆ ನಡೆದಿತ್ತು ಎಂದು ಹೇಳಲಾ ಗುತ್ತಿದೆ. ಆದರೆ ಈ ದರೋಡೆ ಪ್ರಕರಣದ ಕುರಿತು ಮಹಾ ರಾಷ್ಟ್ರ ಸರಕಾರ ರಚಿಸಿರುವ ಎಸ್‌ಐಟಿ ತಂಡ ಈವರೆಗೂ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡದಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ

.

ಪ್ರಕರಣಕ್ಕೆ ಸಂಬಂಧಿಸಿ ದಂತೆ ಯಾರಾದರೂ ಬಂದು ದೂರು ಕೊಟ್ಟರೆ ನಮ್ಮ ಅಧಿಕಾರಿಗಳು ತನಿಖೆ ನಡೆಸುತ್ತಾರೆ. ಹಣ ದರೋಡೆ ಆಗಿದ್ದು ಎಲ್ಲಿ ಎಂಬ ಗೊಂದಲ ಇದೆ. ಪ್ರಕರಣದ ಸತ್ಯಾಸತ್ಯತೆ ಏನು ಎಂಬುದು ಗೊತ್ತಿಲ್ಲ. 400 ಕೋಟಿ ಎಂದು ಹೇಳಲು ಹಣ ಯಾರೂ ಎಣಿಸಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿರುವುದು ಮಾತ್ರ ವಿಷಯವಾಗಿದೆ. ಮಹಾರಾಷ್ಟ್ರದ ತನಿಖೆಗೆ ನಾವು ಸಹಕಾರ ನೀಡುತ್ತೇವೆ.- ಸತೀಶ್‌ ಜಾರಕಿಹೊಳಿ, ಲೋಕೋಪಯೋಗಿ ಸಚಿವ

ದರೋಡೆ ಪ್ರಕರಣದಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿ ಯಾರೇ ಇರಲಿ, ಸತ್ಯ ಹೊರಬರಬೇಕು. ಮಾಧ್ಯಮಗಳ ವರದಿ ಪ್ರಕಾರ ಈ ಹಣಕ್ಕೆ ಗುಜರಾತ್, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಲಿಂಕ್ ಇದೆ. ಈ ಮೂರೂ ರಾಜ್ಯಗಳಲ್ಲಿ ಬಿಜೆಪಿ ಆಡಳಿತವಿದ್ದು, ಸರಕಾರಗಳ ಮೂಗಿನಡಿಯೇ ಇಷ್ಟೊಂದು ದೊಡ್ಡ ಮೊತ್ತದ ಹಣದ ಚಲನವಲನ ಹೇಗೆ ಸಾಧ್ಯ?-ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ

ಬಾಲಾಜಿ ಟ್ರಸ್ಟ್‌ ನಂಟು!ಬಂಧನಕ್ಕೆ ಒಳಗಾದ ಇಬ್ಬರು ಆರೋಪಿಗಳ ನಡುವಿನ ಸಂಭಾಷಣೆ ಸಧ್ಯ ಕುತೂಹಲ ಮೂಡಿಸಿದೆ. ಆರೋಪಿತ ರಾದ ಕಿಶೋ‌ರ್ ಹಾಗೂ ಜಯೇಶ್ ನಡುವಿನ ಸಂಭಾಷಣೆ ಯಲ್ಲಿ 400 ಕೋಟಿ ಹಣದ ಮೂಲ ಯಾವುದು ಎಂಬುದು ಸ್ಪಷ್ಟವಾಗಿ ತಿಳಿದಿಲ್ಲ. ಗುಜರಾತ್‌ ನ ರಾಜಕಾರಣಿ 2 ಸಾವಿರ ನೋಟನ್ನು ಬದಲಾಯಿಸುವ ಜವಾಬ್ದಾರಿಯನ್ನು ಮಹಾ ರಾಷ್ಟ್ರದ ರಿಯಲ್ ಎಸ್ಟೇಟ್ ಉದ್ಯಮಿ ಕಿಶೋ‌ರ್ ಶೇಟ್‌ಗೆ ನೀಡಿದ್ದರಂತೆ. ಕಿಶೋರ್ ತನ್ನ ಐದಾರು ಗೆಳೆಯರನ್ನು ಈ ಕೃತ್ಯಕ್ಕೆ ಬಳಸಿದ್ದಾನೆ. ಕಿಶೋರ್‌ನ ಸ್ನೇಹಿತ ವಿರಾಟ್ ಗಾಂಧಿ ಎಂಬಾತ ಬಾಲಾಜಿ ಟ್ರಸ್ಟ್‌ನಲ್ಲಿ ಹಣದ ಎಕ್ಸೆಂಜ್ ಮಾಡುವ ಏಜೆಂಟ್ ಎಂದು ಹೇಳಲಾಗುತ್ತಿದೆ. ವಿರಾಟ್ ಗಾಂಧಿ ಮೂಲಕ 400 ಕೋಟಿ ಹಣವನ್ನು ವಿನಿಮಯ ಮಾಡುವ ಉದ್ದೇಶಕ್ಕೆ ಬೆಳಗಾವಿ ಮಾರ್ಗವಾಗಿ ಆಂಧ್ರಪ್ರದೇಶದ ಬಾಲಾಜಿ ಟ್ರಸ್ಟ್‌ಗೆ ಕಳುಹಿಸುವ ಕೆಲಸ ನಡೆದಿತ್ತು ಎಂಬುದು ಆರೋಪಿಗಳ ಸಂಭಾಷಣೆಯ ಸಾರಾಂಶ.

RELATED ARTICLES
- Advertisment -
Google search engine

Most Popular