ಬೆಂಗಳೂರು: ಕನ್ನಡ ಬಿಗ್ ಬಾಸ್ ಸೀಸನ್ 12 ಮತ್ತು ಅದರ ಟ್ರೋಫಿ ವಿನ್ನರ್ ಗಿಲ್ಲಿ ನಟ ಸಾಕಷ್ಟು ಸುದ್ದಿ ಮಾಡಿದ್ದು ಸುಳ್ಳಲ್ಲ. ಈ ವಿಷಯ ಇದೀಗ ವಿಧಾನಸಭೆಯಲ್ಲಿ ಕೂಡ ಪ್ರಸ್ತಾಪವಾಗಿದ್ದು, ಈ ಕುರಿತು ಸದನದಲ್ಲಿ ಮಾತನಾಡಿದ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ತೆರಿಗೆ ವಿಚಾರದಲ್ಲಿ ಟೀಕಿಸುವಾಗ ಬಿಗ್ ಬಾಸ್ ನಟ ಗಿಲ್ಲಿಯ ಹೆಸರು ಪ್ರಸ್ತಾಪ ಮಾಡಿದ್ದಾರೆ.
ಈ ವೇಳೆ ಈ ಬಾರಿಯ ಬಿಗ್ ಬಾಸ್ ವಿನ್ನರ್ ಗಿಲ್ಲಿ ಅಲ್ಲ ಅಸಲಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಎಂದಿದ್ದಾರೆ. 50 ಲಕ್ಷಕ್ಕೆ 18% ಜಿಎಸ್‌ಟಿ, 13% ಇನ್‌ಕಮ್ ಟ್ಯಾಕ್ಸ್, 4% ಸೆಸ್ ಸೇರಿ ಸುಮಾರು 52% ತೆರಿಗೆ ಹೋಗುತ್ತದೆ. ಗಿಲ್ಲಿಗೆ 35 ಲಕ್ಷ ಮಾತ್ರ ಸಿಗುತ್ತದೆ ಎಂದು ಪ್ರದೀಪ್ ಈಶ್ವರ್ ಹೇಳಿ, ಇದರಿಂದ ಕೇಂದ್ರದ ತೆರಿಗೆ ನೀತಿಯನ್ನು ಟೀಕಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನನ್ನ ಪಾಲಿನ ಶ್ರೀರಾಮಚಂದಿರ ಎಂದು ಅವರು, ಸಿದ್ದರಾಮಯ್ಯ ಅವರು ರಾಜ್ಯದ ಬಡ ಜನರ ಹೊಟ್ಟೆ ತುಂಬಿಸುತ್ತಿದ್ದಾರೆ. ನನ್ನ ಪಾಲಿನ ಶ್ರೀರಾಮಚಂದಿರ ಅವರು. ರಾಮಮಂದಿರ ನಿರ್ಮಾಣ ಮಾಡಿದರೆ ದೇಶಪ್ರೇಮ ಎನಿಸಿಕೊಳ್ಳುವುದಿಲ್ಲ. ಬಡವರ ಹೊಟ್ಟೆ ತುಂಬಿಸುವುದು ಕೂಡ ದೇಶಪ್ರೇಮ. ಆ ಕೆಲಸವನ್ನು ನಮ್ಮ ಮುಖ್ಯಮಂತ್ರಿಗಳು ಮಾಡುತ್ತಿದ್ದಾರೆ ಎಂದರು.



