Thursday, January 29, 2026
Google search engine

Homeರಾಜ್ಯಸುದ್ದಿಜಾಲಸರ್ವ ಭಕ್ತರ ಶ್ರೇಯೊಭಿವೃದ್ಧಿಗಾಗಿ ಮಠಾಧೀಶರ ಕಾರ್ಯ : ಬಿ.ಆರ್. ಪಾಟೀಲ್

ಸರ್ವ ಭಕ್ತರ ಶ್ರೇಯೊಭಿವೃದ್ಧಿಗಾಗಿ ಮಠಾಧೀಶರ ಕಾರ್ಯ : ಬಿ.ಆರ್. ಪಾಟೀಲ್

ಆಳಂದ : ಮಠಾಧೀಶರು ಸರ್ವ ಭಕ್ತರ ಕಲ್ಯಾಣಕ್ಕಾಗಿ ಹಗಲಿರಳು ನಿದ್ದೆ, ನೀರು ಆಹಾರ ಬಿಟ್ಟು ತಿಂಗಳು ಪರ್ಯಾಂತ ಜಪ ತಪ ದ್ಯಾನ ಮಾಡಿ ಅವರ ಶ್ರೇಯೊಭಿವೃದ್ಧಿಗಾಗಿ ಇಡಿ ಜೀವನವೇ ಮುಡಪಾಗಿಡುವುದು ಸಾಮಾನ್ಯ ಮಾತಲ್ಲ ಎಂದು ನೀತಿ ಮತ್ತು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ್ ಹೇಳಿದರು.

ಮಾಡಿಯಾಳ ಗ್ರಾಮದ ಶ್ರೀ ಚನ್ನಮಲ್ಲೇಶ್ವರ ಮಠದ ಜಾತ್ರಾ ನಿಮಿತ್ತ ಹಮ್ಮಿಕೊಂಡ ಪುರಾಣಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜಿಕವಾಗಿ ಬೇರೂರಿದ ಮೂಢ ನಂಬಿಕೆ, ಅನಿಷ್ಠ ಪದ್ದತಿಗಳನ್ನು ಹೋಗಲಾಡಿಸಿ ಸುಜ್ಞಾನವನ್ನು ಬಿತ್ತಿ ಭಕ್ತರನ್ನು ಮುಖ್ಯವಾಹಿನಿಗೆ ತರುವಲ್ಲಿ ಮಠಾಧೀಶರ ಪಾತ್ರ ಬಹು ಮುಖ್ಯವಾದದ್ದು, ಅಲ್ಲದೆ ಬಡ ಮಕ್ಕಳಿಗೆ ವಸತಿ ಸಹಿತ ಉನ್ನತ ಶಿಕ್ಷಣ ನೀಡಿ ಮಠಗಳು ಇಂದು ಧಾರ್ಮಿಕ ಮತ್ತು ಶೈಕ್ಷಣಿಕ ಕಲಿಕಾ ಕೇಂದ್ರಗಳಾಗಿವೆ ಮಾರ್ಪಟ್ಟಿವೆ ಎಂದು ಹೇಳಿದರು.

ಮುಂದುವರೆದು ಪ್ರಸ್ತುತ ವರ್ಷ ಅತಿ ಶೀಘ್ರದಲ್ಲಿ ಈ ಭಾಗದ ಕೆರೆಗಳನ್ನು ಭೀಮಾ ನದಿಯಿಂದ ತುಂಬುವ ಕಾರ್ಯಕ್ಕೆ ಚಾಲನೆ ದೊರಕಲಿದೆ. ಇದರಿಂದ ಸಾವಿರಾರು ರೈತರಿಗೆ ವರದಾನವಾಗಲಿದೆ ಎಂದ ಅವರು ಮಠಗಳ ಅಭಿವೃದ್ಧಿಗಾಗಿ ಸರ್ಕಾರಿ ಮಟ್ಟದಲ್ಲಿ ಅನುದಾನ ದೊರಕಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.

ನಂತರ ಡಾ.ಚನ್ನಮಲ್ಲ ಶಿವಯೊಗಿ ಶಿವಾಚಾರ್ಯರು ಆಶೀರ್ವಚನ ನೀಡಿ, ಇಲ್ಲಿ ನನ್ನದು ಎನ್ನುವ ಯಾವುದೇ ವಸ್ತುಗಳಲ್ಲಿ ಎಲ್ಲವೂ ಭಕ್ತರ ಆಸ್ತಿಯಾಗಿದೆ. ಹೀಗಾಗಿ ಮಠದ ಕೆಲಸದಲ್ಲಿ ಎಲ್ಲಾ ಭಕ್ತರು ಕೈ ಜೊಡಿಸಬೇಕು. ಇದರಿಂದ ಜಾತ್ರೆಗೆ ಮೆರಗು ಬರುತ್ತದೆ ಎಂದರು.

ಈ ವೇಳೆ ಯಳಸಂಗಿ ಬಬಲಾದ ಮಠದ ಶ್ರೀ ಗುರುಪಾದಲಿಂಗ ಸ್ವಾಮಿಜಿ, ರಾಜ್ಯ ಗುತ್ತಿಗೇದಾರರ ಸಂಘದ ಮಾಜಿ ಅಧ್ಯಕ್ಷ ಜಗನಾಥ ಶೆಗಜಿ, ತಾಲೂಕು ಪಂಚ ಗ್ಯಾರಂಟಿ ಸಮೀತಿ ಅಧ್ಯಕ್ಷ ಶಿವಪುತ್ರಪ್ಪ ಪಾಟೀಲ್, ಕೃಷಿಕ ಸಮಾಜ ಅಧ್ಯಕ್ಷ ಗುರುಶರಣ ಪಾಟೀಲ್ ಕೊರಳಿ, ಗ್ರಾಪಂ ಅಧ್ಯಕ್ಷ ಸುಭಾಷ ಪಾಟೀಲ್, ಚಾಂದ ಪಟೇಲ್, ಗುರು ಉಪ್ಪಿನ, ಪ್ರವಚನಕಾರ ಉಪಮನ್ಯು ಸೇರಿದಂತೆ ಅನೇಕರು ಭಾವಹಿಸಿದ್ದರು. ಚನ್ನಮಲ್ಲೇಶ್ವರ ಬಿರಾದಾರ, ಸ್ವಾಗತಿಸಿ ನಿರೂಪಿಸಿದರು.

RELATED ARTICLES
- Advertisment -
Google search engine

Most Popular