ಮೈಸೂರು : ಟಿ.ನರಸೀಪುರ ತಾಲೂಕಿನ ಬನ್ನೂರು ಪುರಸಭೆ ಮುಖ್ಯಾಧಿಕಾರಿಯನ್ನು ಸಂಸದ ಸುನೀಲ್ ಬೋಸ್ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಶಾಸಕರ ಗಮನಕ್ಕೆ ತರದೆ ಲ್ಯಾಪ್ಟಾಪ್, ತಳ್ಳೋಗಾಡಿಯನ್ನು ಅಧಿಕಾರಿ ವಿತರಿಸಿರುವ ಕಾರಣ ಪುರಸಭೆ ಮುಖ್ಯಾಧಿಕಾರಿ ಹೇಮಂತ್ ವಿರುದ್ಧ ಸಂಸದ ಸುನೀಲ್ ಬೋಸ್ ಗರಂ ಆಗಿದ್ದಾರೆ.
ನೀನು ಪುರಸಭೆ ಮುಖ್ಯಾಧಿಕಾರಿನಾ? ಗುಮಾಸ್ತನ ರೀತಿ ಮಾತಾಡ್ತೀಯಾ,ನೀನೇನು ದನ ಮೇಯಿಸ್ತೀಯಾ, ಎಷ್ಟು ಸಲ ಹೇಳೋದು ನಿನಗೆ, ನಮ್ಮ ಅನುಮತಿ ಇಲ್ಲದೆ ಲ್ಯಾಪ್ಟಾಪ್, ತಳ್ಳೋಗಾಡಿ ಹೇಗೆ ಕೊಟ್ಟೆ? ಶಾಸಕರ ಗಮನಕ್ಕೆ ತರಬೇಕು ತಾನೇ? ಯಾಕೆ ವಿತರಣೆ ಮಾಡಿದ್ದೀಯಾ ಎಂದು ಏರು ಧ್ವನಿಯಲ್ಲೇ ಅಧಿಕಾರಿಯನ್ನು ಸಂಸದರು ತರಾಟೆಗೆ ತೆಗೆದುಕೊಂಡಿದ್ದಾರೆ.



