Saturday, January 31, 2026
Google search engine

Homeಅಪರಾಧಹಿಂದೂ ಯುವತಿ ಮತಾಂತರ ಆರೋಪ : ಪತಿಯಿಂದ ತಲಾಖ್ ಬೆದರಿಕೆ

ಹಿಂದೂ ಯುವತಿ ಮತಾಂತರ ಆರೋಪ : ಪತಿಯಿಂದ ತಲಾಖ್ ಬೆದರಿಕೆ

ಬೆಂಗಳೂರು : ಬೆಂಗಳೂರಿನಲ್ಲೊಂದು ಬಲವಂತದ ಮತಾಂತರ ಆರೋಪ ಕೇಳಿಬಂದಿದೆ. ಮುಸ್ಲಿಂ ಯುವಕನೋರ್ವ ಪ್ರೀತಿ ಹೆಸರಿನಲ್ಲಿ ಹಿಂದೂ ಯುವತಿಯನ್ನು ಮದುವೆಯಾಗಿ ಬಳಿಕ ಕೈಕೊಟ್ಟಿರುವ ಘಟನೆ ನಡೆದಿದೆ. ಹೌದು..ಮುಸ್ಲಿಂ ಯುವಕನೋರ್ವ ಪ್ರೀತಿಯ ಹೆಸರಲ್ಲಿ ಹಿಂದೂ ಯುವತಿಯನ್ನ ನಂಬಿಸಿ ಮದುವೆಯಾಗಿದ್ದ. ಇದೀಗ ಆಕೆಯನ್ನು ಮತಾಂತರ ಮಾಡಿ ಕೈಗೆ ಎರಡು ಮಕ್ಕಳು ಕೊಟ್ಟು ಮತ್ತೊಬ್ಬಳನ್ನು ಮದುವೆಯಾಗಿದ್ದು, ಈ ಬಗ್ಗೆ ಪ್ರಶ್ನೆ ಮಾಡಿದರೆ ತಲಾಕ್ ನೀಡುವುದಾಗಿ ಬೆದರಿಕೆ ಹಾಕಿದ್ದು, ಇದರಿಂದ ಕಂಗಾಲಾದ ಮಹಿಳೆ ಬೆಂಗಳೂರು ಪೊಲೀಸ್ ಕಮಿಷನರ್ ಗೆ ದೂರು ನೀಡಿದ್ದಾಳೆ. ಪ್ರೀತಿಯ ಬಲೆಯಲ್ಲಿ ಬೀಳಿಸಿಕೊಂಡು ಮದ್ವೆಯಾಗಿ ಮತಾಂತರಗೊಂಡ ನಂತರ ಕೈಕೊಟ್ಟಿರುವ ಆರೋಪ ಮಾಡಿದ್ದಾಳೆ.

ದೇವರ ಜೀವನಹಳ್ಳಿಯ ನಿವಾಸಿ ರೀಟಾ, 2015ರಲ್ಲಿ ಖಾಸಗಿ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದಾಗ ಅದೇ ಡಿಜೆ ಹಳ್ಳಿಯ ಫರ್ವೇಜ್ ಎಂಬಾತನ ಪರಿಚಯವಾಯಿತು. ಫರ್ವೇಜ್ ರೀಟಾಳನ್ನು ಹಿಂದೆ ಬಿದ್ದು ಪ್ರೀತಿಸುವಂತೆ ಒತ್ತಾಯಿಸಿದ್ದ. ಪ್ರೀತಿಸುವಾಗ, ಫರ್ವೇಜ್ ರೀಟಾಳಿಗೆ ತನ್ನ ಧರ್ಮಕ್ಕೆ ಮತಾಂತರಗೊಳಿಸುವುದಿಲ್ಲ ಎಂದು ಭರವಸೆ ನೀಡಿದ್ದ. ಹೀಗೆ ಇಬ್ಬರೂ ಪರಸ್ಪರ ಪ್ರೀತಿ ಮದುವೆ ಮಾಡಿಕೊಳ್ಳಲು ಮುಂದಾಗಿದ್ದರು. ಆದ್ರೆ, ಆರಂಭದಲ್ಲಿ ಫರ್ವೇಜ್ ಮುಸ್ಲಿಂ ಸಮುದಾಯಕ್ಕೆ ಸೇರಿದವನು ಎಂಬ ಕಾರಣಕ್ಕೆ ರೀಟಾ ಮತ್ತು ಆಕೆಯ ಕುಟುಂಬಸ್ಥರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಹಿಂದೂ-ಮುಸ್ಲಿಂ ವಿವಾಹಗಳು ಹೆಚ್ಚು ಕಾಲ ಉಳಿಯುವುದಿಲ್ಲ ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದ್ದರು. ಆದರೆ, ರೀಟಾ ಹಿಂದೂವಾಗಿಯೇ ಇರಬಹುದೆಂದು ಮತ್ತು ಆಕೆಯ ಧರ್ಮವನ್ನು ಬದಲಾಯಿಸುವುದಿಲ್ಲ ಎಂದು ಫರ್ವೇಜ್ ಕುಟುಂಬಸ್ಥರನ್ನು ಒಪ್ಪಿಸಿದ್ದ. ಅದರಂತೆ, 2019ರ ಡಿಸೆಂಬರ್ 15ರಂದು ರೀಟಾ ಮದುವೆಯಾಗಿದ್ದಳು.

ಮದುವೆಯಾದ ನಂತರ ಫರ್ವೇಜ್ ತನ್ನ ಅಸಲಿ ಬಣ್ಣವನ್ನು ಬಯಲು ಮಾಡಿದ್ದಾನೆ. ರೀಟಾಳನ್ನು ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಬಲವಂತಪಡಿಸಿದ್ದು, ಇಲ್ಲದಿದ್ದರೆ ತಲಾಖ್ ನೀಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಬೆದರಿಕೆಗಳಿಗೆ ಮಣಿದ ರೀಟಾ ಬಲವಂತವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದಾಳೆ. ಆಕೆಯ ಹೆಸರನ್ನು ಕೂಡ ಸಾದಿಯಾ ತಬಸುಮ್ ಎಂದು ಬದಲಾಯಿಸಿದ್ದಾನೆ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ, ರೀಟಾ ಸಾದಿಯಾ ತಬಸುಮ್ ಆಗಿ ಮತಾಂತರಗೊಂಡ ತಕ್ಷಣವೇ ಫರ್ವೇಜ್ ಆಕೆಯನ್ನು ಕೈಬಿಟ್ಟಿದ್ದಾನೆ.

ವಿಚ್ಛೇದನ ನೀಡದೆ ಮತ್ತೊಬ್ಬ ಯುವತಿಯನ್ನು ಮದುವೆಯಾಗಿದ್ದಾನೆ ಎಂದು ಆರೋಪಿಸಿ ಪತಿ ವಿರುದ್ಧ ಡಿಜೆ ಹಳ್ಳಿ ಠಾಣೆಗೆ ದೂರು ನೀಡಿದರೂ, ಆತ ಅದನ್ನು ಕ್ಯಾರೆ ಎಂದಿಲ್ಲ. ಹಾಗಾಗಿ, ನ್ಯಾಯಕ್ಕಾಗಿ ಕಣ್ಣೀರು ಹಾಕುತ್ತಿರುವ ಸಾದಿಯಾ ತಬಸುಮ್, ಡಿಜಿಪಿ ಮತ್ತು ಐಜಿಪಿ ಹಾಗೂ ಬೆಂಗಳೂರು ಪೊಲೀಸ್ ಕಮಿಷನರ್‌ಗೆ ದೂರು ನೀಡಿದ್ದು, ತನಗೆ ನ್ಯಾಯ ಒದಗಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

RELATED ARTICLES
- Advertisment -
Google search engine

Most Popular