ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ಭೇರ್ಯ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಶ್ರೀ ವೀರ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು.
ಶ್ರೀ ವೀರ ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಭೇರ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಖಾಮಹದೇವ, ಸದಸ್ಯರುಗಳಾದ ಬಿ.ಪಿ.ಪ್ರಕಾಶ್, ಕೃಷ್ಣೇಗೌಡ, ಬಿ.ಕೆ.ಮಂಜಪ್ಪ, ತಾಯಮ್ಮ ಪುಟ್ಟಮಾದಯ್ಯ, ಜಯಲಕ್ಷ್ಮಮ್ಮ ಕೃಷ್ಣೇಗೌಡ, ರೂಪಾ ಹರೀಶ್, ಮುಖಂಡರಾದ ರಾಜಯ್ಯ, ಹರೀಶ್, ಸುಕುಮಾರ್, ಬಿ.ಎಸ್.ಮಂಜುನಾಥಶೆಟ್ಟಿ, ಪಿಡಿಓ ಮಮತಾ, ದ್ವಿತೀಯ ದರ್ಜೆ ಸಹಾಯಕಿ ಅಶ್ವಿನಿ, ಸಿಬ್ಬಂದಿಗಳಾದ ಜಯಂತ್, ಕುಮಾರ್, ಯೋಗೇಶ್ ಸೇರಿದಂತೆ ಹಲವರು ಇದ್ದರು.



