Monday, February 2, 2026
Google search engine

Homeಆರೋಗ್ಯಮತ್ತೆ ನಿಫಾ ವೈರಸ್ ಆತಂಕ: ರಾಜ್ಯದಾದ್ಯಂತ ಆರೋಗ್ಯ ಇಲಾಖೆ ಹೈ ಅಲರ್ಟ್

ಮತ್ತೆ ನಿಫಾ ವೈರಸ್ ಆತಂಕ: ರಾಜ್ಯದಾದ್ಯಂತ ಆರೋಗ್ಯ ಇಲಾಖೆ ಹೈ ಅಲರ್ಟ್

ಬೆಂಗಳೂರು : ದೇಶದ ವಿವಿಧ ರಾಜ್ಯಗಳಲ್ಲಿ  ನಿಫಾ ವೈರಸ್​​ ಮತ್ತೆ ಸದ್ದು ಮಾಡುತ್ತಿರುವ ಹಿನ್ನೆಲೆ ರಾಜ್ಯದಲ್ಲಿ ಆರೋಗ್ಯ ಇಲಾಖೆ ಫುಲ್​​ ಅಲರ್ಟ್​​ ಆಗಿದೆ. ಈ ವೈರಸ್​ ಸೋಂಕಿತ ಬಾವಲಿಗಳು ತಿಂದಿರೋ ಹಣ್ಣುಗಳನ್ನು ತಿಂದರೆ ಅಥವಾ ಹಂದಿಗಳ ಮಾಂಸವನ್ನು ಸೇವನೆ ಮಾಡುವುದರಿಂದ ಹೆಚ್ಚಾಗಿ ಹರಡಲಿದೆ. ಮನುಷ್ಯರಿಂದ ಮನುಷ್ಯರಿಗೂ ಕೆಲವವೊಮ್ಮೆ ಇದು ವರ್ಗಾವಣೆ ಆಗಬಹುದು ಎನ್ನಲಾಗಿದೆ. ಅತ್ಯಂತ ಭಯಾನಕ ಅಂಶವೆಂದರೆ ನಿಫಾ ವೈರಸ್ ಸೋಂಕಿತರ ಮರಣ ಪ್ರಮಾಣ ಶೇ. 60-75 ರಷ್ಟಿರುವ ಕಾರಣ, ಈ ವೈರಸ್​​ ರಾಜ್ಯದಲ್ಲಿ ಕಾಲಿಡದಂತೆ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ. ಶಂಕಿತ ಪ್ರಕರಣಗಳ ಬಗ್ಗೆ ನಿಗಾ ವಹಿಸಲು ಆರೋಗ್ಯಾಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ.

ನಿಫಾ ಸೋಂಕಿನ ಲಕ್ಷಣಗಳೇನು?

  • ಜ್ವರ
  • ಮೈ ಕೈ ನೋವು
  • ಸುಸ್ತು
  • ತಲೆನೋವು
  • ಶೀತ
  • ಗಂಟಲು ಕೆರೆತ ಅಥವಾ ಗಂಟಲಿನಲ್ಲಿ ನೋವು
  • ತಲೆನೋವು
  • ಕುತ್ತಿಗೆಯ ಹಿಂದಿನ ಭಾಗದಲ್ಲಿ ಸೆಳೆತ

ಆಗ್ನೇಯ ಏಷ್ಯಾದ ಹಲವು ದೇಶಗಳಲ್ಲಿ ನಿಫಾ ವೈರಸ್​​ ಆತಂಕ ಮನೆ ಮಾಡಿರುವ ಹಿನ್ನೆಲೆ ಸೋಂಕಿನ ಗುಣ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ವೈದರನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ. ಬಾವಲಿಗಳು ಹೆಚ್ಚಿರುವ ಪ್ರದೇಶಗಳಲ್ಲಿ ಓಡಾಟ ಬೇಡ, ಮರಗಳಿಂದ ತಯಾರಿಸುವ ನೀರಾಗಳ ಸೇವನೆಯಿಂದ ಸದ್ಯಕ್ಕೆ ದೂರವಿರಿ. ಜೊತೆಗೆ ಬಾವಲಿಗಳು ತಿಂದ ಹಣ್ಣುಗಳನ್ನ ಸೇವಿಸದಂತೆ ಸಾರ್ವಜನಿಕರಿಗೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಏನು ಮಾಡಬೇಕು?

  • ಹಣ್ಣುಗಳನ್ನ ತಿನ್ನುವ ಮೊದಲು ಚೆನ್ನಾಗಿ ತೊಳೆಯಬೇಕು
  • ಕುದಿಸಿ ಆರಿಸಿದ ನೀರನ್ನ ಕುಡಿಯಬೇಕು
  • ಸಾಕು ಪ್ರಾಣಿಗಳ ಆಹಾರವು ಬಾವಲಿಗಳ ಸಂಪರ್ಕಕ್ಕೆ ಬಾರದಂತೆ ನೋಡಿಕೊಳ್ಳಬೇಕು
  • ಪ್ರಾಣಿಗಳನ್ನ ಸಂಪರ್ಕಿಸುವಾಗ ರಕ್ಷಣಾತ್ಮಕ ಉಡುಪುಗಳನ್ನ ಧರಿಸಬೇಕು
  • ಮರಗಳಿಂದ ತೆಗೆಯುವ ಹಣ್ಣಿನ ರಸದ ಸಂಪರ್ಕಕ್ಕೆ ಬಾವಲಿಗಳು ಬಾರದಂತೆ ನೋಡಿಕೊಳ್ಳಬೇಕು
  • ಸೊಂಕಿತ ವ್ಯಕ್ತಿಗಳನ್ನ ಸಂಪರ್ಕಿಸುವಾಗ ರಕ್ಷಣಾತ್ಮಕ ಕ್ರಮ ವಹಿಸಬೇಕು

ಏನು ಮಾಡಬಾರದು?

  • ಮರದಿಂದ ಬಿದ್ದ ಹಾಗೂ ಪ್ರಾಣಿಗಳು ಕಚ್ಚಿದ ಹಣ್ಣುಗಳನ್ನ ತಿನ್ನಬಾರದು
  • ತೆರೆದ ಪಾತ್ರೆಗಳಲ್ಲಿ ಇಟ್ಟ ಪಾನೀಯಗಳನ್ನ ಸೇವಿಸಬಾರದು
  • ನಿಫಾ ಬಂದಿರುವ ವ್ಯಕ್ತಿಯ ಸಂಪರ್ಕ ಮಾಡಬಾರದು
  • ಖಾಯಿಲೆ ಬಂದ ಅಥ್ವಾ ಸತ್ತ ಪ್ರಾಣಿಗಳ ಹತ್ತಿರ ಹೋಗಬಾರದು
  • ಬಾವಲಿಗಳ ಸಂಪರ್ಕದಿಂದ ದೂರ ಇರಬೇಕು

ಇನ್ನು ನಿಫಾ ವೈರಸ್​​ನ ರೋಗ ಲಕ್ಷಣ ತಕ್ಷಣಕ್ಕೆ ಗೋಚರಿಸುವುದಿಲ್ಲ. ಸಾಮಾನ್ಯವಾಗಿ 4 ರಿಂದ 14 ದಿನಗಳಲ್ಲಿ ಇವು ಗಮನಕ್ಕೆ ಬರಲಿದ್ದು, ಆರೋಗ್ಯ ಇಲಾಖೆಯ ಸಲಹೆ ಮತ್ತು ಸೂಚನೆಗಳನ್ನು ಪಾಲಿಸುವಂತೆ ಸಾರ್ವಜನಿಕರಲ್ಲಿ ಕೋರಲಾಗಿದೆ. ಸೋಂಕಿತರು ಕಂಡುಬಂದಲ್ಲಿ ಅಂತವರ ಚಿಕಿತ್ಸೆಗೂ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

RELATED ARTICLES
- Advertisment -
Google search engine

Most Popular