Thursday, February 5, 2026
Google search engine

Homeರಾಜ್ಯಸುದ್ದಿಜಾಲಮಲೆ ಮಹದೇಶ್ವರಬೆಟ್ಟ ಹುಂಡಿ ಹಣ ಎಣಿಕೆ; 27 ದಿನಗಳಲ್ಲಿ 2.14 ಕೋಟಿ ರೂ. ಸಂಗ್ರಹ!

ಮಲೆ ಮಹದೇಶ್ವರಬೆಟ್ಟ ಹುಂಡಿ ಹಣ ಎಣಿಕೆ; 27 ದಿನಗಳಲ್ಲಿ 2.14 ಕೋಟಿ ರೂ. ಸಂಗ್ರಹ!

ಹನೂರು:  ತಾಲ್ಲೂಕಿನ ಪ್ರಸಿದ್ಧ ಪುಣ್ಯ ಶ್ರೀ ಕ್ಷೇತ್ರ ಮಲೆ ಮಹದೇಶ್ವರಬೆಟ್ಟ ದೇಗುಲ ಹುಂಡಿ ಹಣ ಎಣಿಕೆ ನಡೆದಿದ್ದು 27 ದಿನದಲ್ಲಿ 2.14 ಕೋಟಿ ರೂ. ಸಂಗ್ರಹವಾಗಿದೆ.

ಸಾಲೂರು ಬೃಹನ್ಮಠಾಧ್ಯಕ್ಷ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ರವರ ಉಪಸ್ಥಿತಿಯಲ್ಲಿ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು ಎಇ ರವರ ನೇತೃತ್ವದಲ್ಲಿ ಬೆಳಿಗ್ಗೆ 7 ಗಂಟೆಯಿಂದ ಹುಂಡಿ ಹಣ ಎಣಿಕೆ ಕಾರ್ಯ ನಡೆದಿದ್ದು 27 ದಿನದಲ್ಲಿ 2,14,40,939 ಕೋಟಿ ರೂ. ನಗದು ರೂಪದಲ್ಲಿ (ಹುಂಡಿ ಮತ್ತು ಇ-ಹುಂಡಿ ಸೇರಿ) ಚಿನ್ನ 45 ಗ್ರಾಂ, ಬೆಳ್ಳಿ 2 ಕೆ.ಜಿ 320 ಗ್ರಾಂ ಹಾಗೂ 9 ವಿದೇಶಿ ನೋಟುಗಳು 2 ಸಾವಿರ ರೂ ಮುಖ ಬೆಲೆ 3 ನೋಟುಗಳು ಸಹ ಹುಂಡಿಯಲ್ಲಿ ದೊರೆತಿದೆ.

ಭಕ್ತರಿಂದ ಹರಕೆ ರೂಪದಲ್ಲಿ ಇಷ್ಟೊಂದು ದೊಡ್ಡ ಮೊತ್ತದ ಕಾಣಿಕೆ ಸಂದಿರುವುದು ಅಮಾವಾಸ್ಯೆ, ಹುಣ್ಣಿಮೆ, ಸರ್ಕಾರಿ ರಜೆ ದಿನಗಳು ಹಾಗೂ ಶಕ್ತಿ ಯೋಜನೆಯಡಿ ಮಹಿಳೆಯರ ಉಚಿತ ಪ್ರಯಾಣ ಹೆಚ್ಚಿನ ಸಂಖ್ಯೆಯಲ್ಲಿ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದ್ದರಿಂದ ದೊಡ್ಡ ಮೊತ್ತದ ಹಣ ಸಂಗ್ರಹವಾಗಿದೆ.

ಮ.ಬೆಟ್ಟ ಬಸ್‌‍ ನಿಲ್ದಾಣದ ವಾಣಿಜ್ಯ ಕಟ್ಟಡದಲ್ಲಿ ಸಿಸಿ ಕ್ಯಾಮರ ಹಾಗೂ ಪೊಲೀಸರ ಕಣ್ಗಾವಲಿನಲ್ಲಿ ಪ್ರಾಧಿಕಾರದ ಸಿಬ್ಬಂದಿಗಳು ಹಾಗೂ ಕೊಳ್ಳೇಗಾಲ ಬ್ಯಾಂಕ್‌ ಆಫ್‌ ಬರೋಡ ಸ್ಥಳೀಯ ಶಾಖೆ ಸಿಬ್ಬಂದಿಗಳು ಹುಂಡಿ ಎಣಿಕೆ ಕಾರ್ಯದಲ್ಲಿ ತೊಡಗಿದ್ದರು.

ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರಶೇಖರ.ಜಿ.ಎಲ್‌ ಪ್ರಾಧಿಕಾರದ ಹಣಕಾಸು ಮತ್ತು ಲೆಕ್ಕಪತ್ರ ಸಲಹೆಗಾರ ಮಹದೇವು ಲೆಕ್ಕಧೀಕ್ಷಕ ಗುರುಮಲ್ಲಯ್ಯ ,ಸರಗೂರು ಮಹದೇವಸ್ವಾಮಿ ಹಾಗೂ ಚಾ.ನಗರ ಜಿಲ್ಲಾಡಳಿತ ಕಛೇರಿ ಭಾರತಿ ಪ್ರ.ದ.ಸ ಬೆರಳಚ್ಚುಗಾರರು ಹಾಗೂ ಪ್ರಾಧಿಕಾರದ ಸಿಬ್ಬಂದಿಗಳು, ಪೊಲೀಸ್‌‍ ಅಧಿಕಾರಿಗಳು ಹಾಗೂ ಕೊಳ್ಳೇಗಾಲದ ಬ್ಯಾಂಕ್‌ ಆಪ್‌ ಬರೋಡ ಮುಖ್ಯ ವ್ಯವಸ್ಥಾಪಕರು, ಸಿಬ್ಬಂದಿಗಳು, ಪ್ರಾಧಿಕಾರದ ನಾಮ ನಿರ್ದೇಶಿತ ಸದಸ್ಯರಾದ ಮರಿಸ್ವಾಮಿ ಕಾಗಲವಾಡಿ, ಮಹದೇವಪ್ಪ ಕೀಳನಪುರ, ವಿಜಯ್‌ ಕುಮಾರ್‌ ಹಾಜರಿದ್ದರು.

RELATED ARTICLES
- Advertisment -
Google search engine

Most Popular