Friday, February 6, 2026
Google search engine

Homeರಾಜ್ಯಸುದ್ದಿಜಾಲಶ್ರೀ ಹನುಮಾನ್ ಚಾಲೀಸ್ ಪಾರಾಯಣ ರಥಯಾತ್ರೆಗೆ ಶಾಸಕ ಟಿ.ಎಸ್ ಶ್ರೀವತ್ಸ ಚಾಲನೆ..!

ಶ್ರೀ ಹನುಮಾನ್ ಚಾಲೀಸ್ ಪಾರಾಯಣ ರಥಯಾತ್ರೆಗೆ ಶಾಸಕ ಟಿ.ಎಸ್ ಶ್ರೀವತ್ಸ ಚಾಲನೆ..!

ಮೈಸೂರು : ಶ್ರೀ ಹನುಮಾನ್ ಚಾಲೀಸ್ ಪಾರಾಯಣ ಮಹಾಯಜ್ಞ ಇದೇ ತಿಂಗಳು 14 ರಂದು ಮಹಾರಾಜ ಮೈದಾನದಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ಪ್ರಚಾರ ರಥಕ್ಕೆ ಕೃಷ್ಣಮೂರ್ತಿಪುರಂ ಶ್ರೀ ರಾಘವೇಂದ್ರ ಸ್ವಾಮಿ ಮಠದ ಮುಂದೆ ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್ ಶ್ರೀವತ್ಸ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ಆಶ್ರಮವು ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಹೆಸರುವಾಸಿಯಾಗಿದೆ, ಹಾಗೆ 14ರಂದು ನಡೆಯುವ ಶ್ರೀ ಹನುಮಾನ್ ಚಾಲೀಸ್ ಕಾರ್ಯಕ್ರಮ ಮೈಸೂರಿನಲ್ಲಿ ನಡೆಯುತ್ತಿರುವುದು ಒಂದು ಹೆಮ್ಮೆಯ ಸಂಗತಿ ಹಾಗೂ ಕೃಷ್ಣರಾಜ ಕ್ಷೇತ್ರದ
ನಾಗರಿಕರು ಎಲ್ಲರೂ ಪಾರಾಯಣದಲ್ಲಿ ಪಾಲ್ಗೊಂಡು ಹನುಮಂತನ ಕೃಪೆಗೆ ಪಾತ್ರರಾಗಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಉತ್ತರಾದಿ ಮಠದ ಅನಿರುದ್ಧ ಆಚಾರ್, ರಾಜ್ಯ ಬಿಜೆಪಿ ಪ್ರಾಕೋಷ್ಟದ ಸಹ ಸಂಯೋಜಕ ಪ್ರಾಣೇಶ್, ಕಾಂಗ್ರೆಸ್ ಮುಖಂಡ ನವೀನ್ ಕುಮಾರ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮೈಸೂರು ಪ್ರತಿನಿಧಿ ಡಾ.ಲಕ್ಷ್ಮಿ ದೇವಿ, ನಗರ ಸಂಚಾಲಕ ಸತ್ಯನಾರಾಯಣ
ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಕೆ.ಆರ್.ಸತ್ಯನಾರಾಯಣ, ಮಹಾಸಭಾ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ರಘುರಾಮ್ ವಾಜಪೇಯಿ, ಟಿ.ಎಸ್ ಅರುಣ್, ಅಜಯ್ ಶಾಸ್ತ್ರೀ, ವಾಸುದೇವಮೂರ್ತಿ, ಸುಚಿಂದ್ರ, ಚಕ್ರಪಾಣಿ ಆಶ್ರಮದ ರಮೇಶ್ ಬಾಬು, ರವಿ, ಸಂತೋಷ್ ಇನ್ನಿತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular