Wednesday, February 11, 2026
Google search engine

Homeಕ್ರೀಡೆರಾಷ್ಟ್ರಮಟ್ಟದ ಸ್ಪೆಷಲ್ ಒಲಿಂಪಿಕ್ಸ್ ಕ್ರೀಡಾಕೂಟ: ಚಿನ್ನ ಗೆದ್ದ ಕುಪ್ಪೆಪದವಿನ ಸಹಳಾ ಅಮೋಘ ಸಾಧನೆ

ರಾಷ್ಟ್ರಮಟ್ಟದ ಸ್ಪೆಷಲ್ ಒಲಿಂಪಿಕ್ಸ್ ಕ್ರೀಡಾಕೂಟ: ಚಿನ್ನ ಗೆದ್ದ ಕುಪ್ಪೆಪದವಿನ ಸಹಳಾ ಅಮೋಘ ಸಾಧನೆ

ಹರಿಯಾಣದ ಮಹರ್ಷಿ ದಯಾನಂದ ವಿಶ್ವವಿದ್ಯಾನಿಲಯದಲ್ಲಿ ನಡೆದ ಸ್ಪೆಷಲ್ ಒಲಿಂಪಿಕ್ಸ್ ಭಾರತ್ ರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನ ಕ್ರೀಡಾಕೂಟದಲ್ಲಿ ಮೂಡಬಿದ್ರೆ ಬೆಳುವಾಯಿಯ ಸ್ಫೂರ್ತಿ ಭಿನ್ನ ಸಾಮರ್ಥ್ಯದ ಮಕ್ಕಳ ಶೆಲ್ ಮತ್ತು ತರಬೇತಿ ಕೇಂದ್ರದ ವಿದ್ಯಾರ್ಥಿನಿ ಸಹಳಾ ಚಿನ್ನ, ಕಂಚಿನ ಪದ ಗೆದ್ದು ಸಾಧನೆ ಮಾಡಿದ್ದಾಳೆ. ಜೂನಿಯರ್ ವಿಭಾಗದ ಶಾಟ್ ಪುಟ್ ಹಾಗೂ 4×100ಮೀ ಮಿಕ್ಸೆಡ್ ರಿಲೇ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಿಯಾಗಿ 2 ಚಿನ್ನದ ಪದಕ ಹಾಗೂ 200ಮೀ ಓಟದಲ್ಲಿ ತೃತೀಯ ಸ್ಥಾನಿಯಾಗಿ ಕಂಚಿನ ಪದಕವನ್ನು ಗೆದ್ದಿದ್ದಾಳೆ‌. ಜನವರಿ ತಿಂಗಳಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿಯೂ ಸಹಳಾಗೆ ಎರಡು ಚಿನ್ನದ ಪದಕ ಬಂದಿತ್ತು. ಈಕೆ ಕುಪ್ಪೆಪದವಿನ ಹುಸೈನಬ್ಬ ಮತ್ತು ನಬಿಸಾ ದಂಪತಿಯ ಪುತ್ರಿ.

ವರದಿ: ಶಂಶೀರ್ ಬುಡೋಳಿ

RELATED ARTICLES
- Advertisment -
Google search engine

Most Popular