ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಅರ್.ನಗರ : ಸಾಲಿಗ್ರಾಮ ತಾಲೂಕಿನ ಇತಿಹಾಸ ಪ್ರಸಿದ್ದ ಚುಂಚನಕಟ್ಟೆ ಶ್ರೀರಾಮ ದೇವಾಲಯದಲ್ಲಿ ಗೋಲಕದಲ್ಲಿ 5.68 ಲಕ್ಷರೂ ಕಾಣಿಕೆ ಹಣ ಸಂಗ್ರಹವಾಗಿದೆ.
ಗುರುವಾರ ಸಾಲಿಗ್ರಾಮ ತಹಸೀಲ್ದಾರ್ ರುಕೀಯಾ ಬೇಗಂ, ಚುಂಚನಕಟ್ಟೆ ನಾಡಕಚೇರಿಯ ಉಪತಹಸೀಲ್ದಾರ್ ಮಹೇಶ್ ಅವರ ನೇತೃತ್ವದಲ್ಲಿ ಶ್ರೀರಾಮ ದೇವಾಲಯದ ಗೋಲಕವನ್ನು ತೆರೆದು ಭಕ್ತರು ಹಾಕಿಲಾಗಿದ್ದ ಕಾಣಿಕೆ ಹಣವನ್ನು ಎಣಿಸಲಾಯಿತು.
ಎಣಿಕೆಯ ವೇಳೆ ಯಾವುದೇ ಬೆಳ್ಳಿ- ಚಿನ್ನಾಭರಣ ಸಂಗ್ರಹವಾಗಿಲ್ಲ ಸಂಗ್ರಹವಾದ ಕಾಣಿಕೆ ಹಣವನ್ನು ಹಳಿಯೂರು ಎಸ್.ಬಿ.ಐ ಶಾಖೆಯ ಕ್ಯಾಷಿಯರ್ ಸುರೇಶ್ ,ಸಿಬ್ಬಂದಿಗಳಾದ ಮಲ್ಲಿಕಾ, ಡಿ.ಎಸ್, ಚೈತನ್ಯ ಅವರ ಸಮ್ಮುಖದಲ್ಲಿ ಶಾಖೆಯ ದೇವಾಲಯದ ಖಾತೆಗೆ ಜಮ ಮಾಡಲಾಯಿತು.
ಎಣಿಕೆ ಕಾರ್ಯದಲ್ಲಿ ರಾಜಸ್ವ ನೀರಿಕ್ಷಕ ಚಿದನಂದಬಾಬು, ಗ್ರಾಮ ಅಧಿಕಾರಿಗಳಾದ ಮೇಘ, ಸುನೀಲ್, ಕಾವೇರಿ, ಪ್ರೀಯಾ, ಪಾರು ಪತ್ತೆದಾರ್ ವಿನಯ್, ಮುಜರಾಯಿ ಇಲಾಖೆಯ ನವ್ಯ, ಸಹಾಯಕರಾದ ವಸಂತ್ ಕುಮಾರ್, ತೇಜವ್ ಮೂರ್ತಿ, ರವಿಂದ್ರನಾಥ್, ಕೃಷ್ಣಮೂರ್ತಿ, ಮಹೇಶ್, ಸುಮಿತ್ರ, ನಾಡಕಚೇರಿಯ ಕೆಸ್ತೂರು ವಿಜಿ ಇದ್ದರು.
ಮುನ್ನಚ್ಚರಿಕೆಯ ಕ್ರಮವಾಗಿ ಚುಂಚನಕಟ್ಟೆ ಉಪಪೋಲೀಸ್ ಠಾಣೆಯ ಉಪ ಠಾಣಾಧಿಕಾರಿ ದೊರೆಸ್ವಾಮಿ ನೇತೃತ್ವದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು.



