Tuesday, February 17, 2026
Google search engine

Homeರಾಜಕೀಯಡಿಕೆ ಸುರೇಶ್‌ರಿಂದ ಮಹದೇವಪ್ಪಗೆ ಸೈಲೆಂಟ್ ಟಾಂಗ್ : ಕಟ್ಟಾ ಕಾಂಗ್ರೆಸ್ಸಿಗರು ಬೀದಿ ನಾಯಿಗಳಲ್ಲ ಎಂದ ಸುರೇಶ್

ಡಿಕೆ ಸುರೇಶ್‌ರಿಂದ ಮಹದೇವಪ್ಪಗೆ ಸೈಲೆಂಟ್ ಟಾಂಗ್ : ಕಟ್ಟಾ ಕಾಂಗ್ರೆಸ್ಸಿಗರು ಬೀದಿ ನಾಯಿಗಳಲ್ಲ ಎಂದ ಸುರೇಶ್

ಬೆಂಗಳೂರು : ಕಟ್ಟಾ ಕಾಂಗ್ರೆಸ್ಸಿಗರು ಯಾರೂ ಬೀದಿ ನಾಯಿಗಳಲ್ಲ, ಯಾವತ್ತಿದ್ರೂ ನಿಯತ್ತಿನ ನಾಯಿಗಳು ಎಂದು ಹೇಳುವ ಮೂಲಕ ಮಾಜಿ ಸಂಸದ ಡಿಕೆ ಸುರೇಶ್‌ ಸೈಲೆಂಟಾಗೆ ಸಚಿವ ಹೆಚ್‌.ಸಿ ಮಹದೇವಪ್ಪಗೆ ಟಾಂಗ್‌ ಕೊಟ್ಟರು.

ಮಾಧ್ಯಮಗಳೊಂದಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಯಕತ್ವ ಚರ್ಚೆಯನ್ನ ನಾಯಿಗೆ ಹೋಲಿಸಿದ ಹೆಚ್‌.ಸಿ ಮಹದೇವಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು. 

ಮಹದೇವಪ್ಪ ಅವರು ಯಾವುದೇ ನಾಯಿಗೆ ಹೋಲಿಕೆ ಮಾಡಿ ಮಾತನಾಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಆದ್ರೆ ಕಟ್ಟಾ ಕಾಂಗ್ರೆಸ್ಸಿಗರು ಯಾರು ಬೀದಿ ನಾಯಿಗಳಲ್ಲ. ಬೀದಿ ನಾಯಿಗೆ ಊಟ ಹಾಕೋದು ಯಾತಕ್ಕೆ? ಅವು ನಮ್ಮನ್ನ ಕಾಯುತ್ತವೆ ಅಂತಾ ತಾನೇ. ನಾಯಿಗಿರೋ ನಿಯತ್ತು ಮನುಷ್ಯರಿಗಿಲ್ಲ ಅಂತಾರೆ. ಹಲವಾರು ಸನ್ನಿವೇಶದಲ್ಲಿ ಆ ನಾಣ್ಣುಡಿ ಕೇಳಿದ್ದೇವೆ. ಕಟ್ಟಾ ಕಾಂಗ್ರೆಸ್ಸಿಗರು ಯಾವತ್ತಿದ್ರೂ ನಿಯತ್ತಿನ ನಾಯಿಗಳು. ಋಣ ತೀರಿಸೋ ವ್ಯಕ್ತಿತ್ವದ ನಾಯಿಗಳು, ಯಜಮಾನನ ಋಣ ತೀರಿಸೋ ನಾಯಿಗಳು ಎಂದು ಹೇಳಿದ್ರು. 

ʻಕಾಂಗ್ರೆಸ್ ಪಕ್ಷದಲ್ಲಿ ಹೊರಗಿನವರಿಗೆ ನಿಯತ್ತು ಇರಲ್ವಾ?ʼ ಎಂಬ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಂಸದರು, ನಾನು ಆ ರೀತಿ ಏನು ಹೇಳಿಲ್ಲ, ನಾನು ಹೇಳಿದ್ದು ಇಷ್ಟೇ. ನಾಯಿಗಳನ್ನ ಯಾರಿಗೆ ಹೋಲಿಸಿದ್ದಾರೆ ಗೊತ್ತಿಲ್ಲ. ಆದ್ರೆ ಕಟ್ಟಾ ಕಾಂಗ್ರೆಸ್ಸಿಗರು ನಿಯತ್ತಿನ ನಾಯಿಗಳು. ನಾಯಿಗಳು ಯಜಮಾನನ ಋಣ ತೀರಿಸುತ್ವೆ. ಬೇರೆ ಏನು ಮಾಡಲ್ಲ.. ಅದರ ಸ್ವಭಾವವೇ ಹಾಗೇ. ಬೀದಿ ನಾಯಿಯನ್ನೂ ಸಾಕ್ತಾರೆ, ಮನೆಲೂ ಸಾಕ್ತಾರೆ. ಎಲ್ಲರೂ ಕೂಡ ಸಾಕ್ತಾರೆ, ಏತಕ್ಕೆ ಸಾಕ್ತಾರೆ.. ನಿಯತ್ತಿಗೆ ಸಾಕ್ತಾರೆ. ಬೇರೆಯವರ ಋಣ ತೀರಿಸ್ತಾರೆ ಅಂತಲ್ಲ, ಆ ವಿಶ್ವಾಸ ಕಾಪಾಡುತ್ತೆ ಅಂತಾ ಅಷ್ಟೇ. ಬೀದಿ ನಾಯಿಗೂ ಹೋಗಿ ಊಟ ಹಾಕ್ತಾರೆ, ಯಾಕೆ ಅಂದ್ರೆ ಅದು ನಮ್ಮನ್ನ ಕಾಪಾಡುತ್ತೆ ಅಂತ ಎಂದು ವಿವರಿಸಿದ್ರು.

ಇನ್ನೂ ಶಾಸಕರ ಫಾರಿನ್ ಟೂರ್ ಬಗ್ಗೆ ಮಾತನಾಡಿ, ಅವರು ಶಾಸಕರು ಆಗಿದ್ದಾರೆ, ಹೋಗ್ತಿದ್ದಾರೆ. ವಿಶ್ವಾಸಕ್ಕೆ ಹೋಗ್ತಾರೆ, ದೇಶ ನೋಡಕ್ಕೆ ಹೋಗ್ತಾರೆ. ಅವರವರ ಇಷ್ಟಕ್ಕೆ ಹೋಗ್ತಾರೆ ಅಷ್ಟೇ. ಅದರಲ್ಲಿ ಬಹಳ ವಿಶೇಷ ಏನಿಲ್ಲ. ವಿದೇಶ ಪ್ರವಾಸ ಎಲ್ಲರಿಗೂ ಖುಷಿ ನೀಡುತ್ತೆ. ಗೊಂದಲ ಇರುತ್ತೆ, ಅದರ ನಡುವೆ ಟೂರ್ ಹೋಗ್ತಾರೆ. ಫ್ಯಾಮಿಲಿ ಜೊತೆ ಖುಷಿಯಲ್ಲಿ ಹೋಗ್ತಾರೆ ಎಂದು ಸಮರ್ಥಿಸಿಕೊಂಡರು. 

RELATED ARTICLES
- Advertisment -
Google search engine

Most Popular