Wednesday, February 18, 2026
Google search engine

Homeರಾಜ್ಯKMF ಬಗ್ಗೆ ಅಪಪ್ರಚಾರ : ತಪ್ಪು ಮಾಹಿತಿ ಹರಡುವವರ ಮೇಲೆ ಕಾನೂನು ಕ್ರಮ ಎಚ್ಚರಿಕೆ!

KMF ಬಗ್ಗೆ ಅಪಪ್ರಚಾರ : ತಪ್ಪು ಮಾಹಿತಿ ಹರಡುವವರ ಮೇಲೆ ಕಾನೂನು ಕ್ರಮ ಎಚ್ಚರಿಕೆ!

ಬೆಂಗಳೂರು : ಕರ್ನಾಟಕ ಹಾಲು ಒಕ್ಕೂಟದ ಉತ್ಪನ್ನಗಳು ದೇಶ ಮಾತ್ರವಲ್ಲದೆ ವಿಶ್ವದಾದ್ಯಂತ ಮನ್ನಣೆಯನ್ನು ಪಡೆದುಕೊಂಡಿದ್ದು, ಆದರೆ ಕೆಲ ಕಿಡಿಗೇಡಿಗಳು ಈ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ನಂದಿನಿ ಉತ್ಪನ್ನಗಳ ಸುರಕ್ಷತೆ ಕುರಿತು ತಪ್ಪು ಮಾಹಿತಿ ಹರಡಲಾಗುತ್ತಿದೆ. ಈ ಬೆನ್ನಲ್ಲೇ ಇದೀಗ KMF ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದು, ತಪ್ಪು ಮಾಹಿತಿ ಹರಡುತ್ತಿರುವವರಿಗೆ ಕೆಎಂಎಫ್ ಇದೀಗ ಎಚ್ಚರಿಕೆಯನ್ನು ನೀಡಿದೆ.

ಇನ್ನೂ ಈ ಸಾರ್ವಜನಿಕ ಪ್ರಕಟಣೆಯಲ್ಲಿ ಏನಿದೆ? ಎನ್ನವುದನ್ನು ನೋಡುವುದಾದರೇ, ನಂದಿನಿ ಉತ್ಪನ್ನಗಳು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ನಿಗದಿಪಡಿಸಿದ ಎಲ್ಲಾ ಗುಣಮಟ್ಟ ಮತ್ತು ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದೇವೆ.

ನಂದಿನಿ ಹಾಲು ಮತ್ತು ಹಾಲು ಉತ್ಪನ್ನಗಳು ಸಂಪೂರ್ಣ ಸುರಕ್ಷಿತವಾಗಿದ್ದು, ಸ್ವಚ್ಛ ಹಾಗೂ ಉತ್ತಮ ಗುಣಮಟ್ಟದ್ದಾಗಿದೆ ಎಂದು ನಮ್ಮ ಗ್ರಾಹಕರಿಗೆ ಭರವಸೆ ನೀಡುತ್ತೇವೆ ಎಂದು ಕರ್ನಾಟಕ ಹಾಲು ಒಕ್ಕೂಟ ಮಾಹಿತಿ ನೀಡಿದೆ.

ನಂದಿನಿ ಬ್ರಾಂಡ್‌ನ ಘನತೆಗೆ ಧಕ್ಕೆ ತರುವ ನಿಟ್ಟಿನಲ್ಲಿ ದುರುದ್ದೇಶಪೂರಿತವಾಗಿ ಸುಳ್ಳು ಸುದ್ದಿ ಹರಡುತ್ತಿರುವವರ ವಿರುದ್ಧ ಕೆಎಂಎಫ್ ಎಚ್ಚರಿಕೆ ನೀಡಿದ್ದು, ಆಧಾರರಹಿತ ಆರೋಪ ಮಾಡುವವರ ಮತ್ತು ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಈಗಾಗಲೇ ಸಂಬಂಧಪಟ್ಟ ವಿಭಾಗಗಳಿಗೆ ಸೂಚನೆ ನೀಡಲಾಗಿದೆ ಎಂದು ಮಹಾಮಂಡಳಿ ಎಚ್ಚರಿಕೆ ನೀಡಿದೆ.

ಈ ಕುರಿತು ಬಮುಲ್​​ ಅಧ್ಯಕ್ಷ ಡಿ.ಕೆ. ಸುರೇಶ್​ ಪ್ರತಿಕ್ರಿಯಿಸಿ, ನಂದಿನಿ ಗುಣಮಟ್ಟಕ್ಕೆ ಹೆಸರುವಾಸಿಯಾಗಿದ್ದು, ನಂದಿನಿ ಉತ್ಪಾದನೆಯಲ್ಲಿ ಗುಣಮಟ್ಟವಿದೆ, ಅಲ್ಲಿ ಕಲಬೆರಕೆ ಮಾಡೋದು ಅನ್ನೋದು ಇರಲ್ಲ, ಕೆಲವು ಕಿಡಿಗೇಡಿಗಳು ಅಪಪ್ರಚಾರ ಮಾಡುತ್ತಾರೆ, ಅದರಲ್ಲಿ ಕೆಲವು ಖಾಸಗಿ ಅವರು ಇರಬಹುದು, ನಂದಿನಿ ಗುಣಮಟ್ಟದಲ್ಲಿ ಹಿಂದೆ ಸರಿಯಲ್ಲ, ಮುಂದಕ್ಕೆ ಕೂಡ ಅದನ್ನ ಮುಂದುವರಿಸುತ್ತೇವೆ ಎಂದಿದ್ದಾರೆ.

ಮುಂದುವರೆದು ನಾವು ಖಾಸಗಿಯವರ ಜೊತೆ ಸ್ಪರ್ಧೆ ಮಾಡಬೇಕಾದಾಗ ಅಪಪ್ರಚಾರ ಮಾಡುವುದು ಸಹಜ. ನಂದಿನಿ ಯಾವತ್ತೂ ಗುಣಮಟ್ಟದ ಜೊತೆ ರಾಜಿಯಾಗಿಲ್ಲ. ನಂದಿನಿಗೆ ಎಷ್ಟೇ ನಷ್ಟವಾದರೂ ಎಂದಿಗೂ ಗ್ರಾಹಕರಿಗೆ ಹಾಗೂ ರೈತರಿಗೆ ಅನ್ಯಾಯ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ. ಗುಣಮಟ್ಟದ ಉತ್ಪನ್ನಗಳನ್ನು ಮುಂದೆಯೂ ನೀಡಲಿದೆ ಎಂದು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular