Wednesday, February 18, 2026
Google search engine

HomeUncategorizedರಾಷ್ಟ್ರೀಯ37 ರಾಜ್ಯಸಭಾ ಸ್ಥಾನಗಳಿಗೆ ಮಾರ್ಚ್ 16 ರಂದು ಚುನಾವಣೆ

37 ರಾಜ್ಯಸಭಾ ಸ್ಥಾನಗಳಿಗೆ ಮಾರ್ಚ್ 16 ರಂದು ಚುನಾವಣೆ

ನವದೆಹಲಿ: ದೇಶದ 10 ರಾಜ್ಯಗಳಲ್ಲಿ ಖಾಲಿ ಇರಲಿರುವ 37 ರಾಜ್ಯಸಭಾ ಸ್ಥಾನಗಳಿಗೆ ಮಾರ್ಚ್ 16 ರಂದು ಮತದಾನ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಬುಧವಾರ ಪ್ರಕಟಿಸಿದೆ. ಏಪ್ರಿಲ್ ತಿಂಗಳಲ್ಲಿ ಹಲವು ಸದಸ್ಯರ ಅವಧಿ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಈ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ.

ಚುನಾವಣೆ ನಡೆಯುವ ಪ್ರಮುಖ ರಾಜ್ಯಗಳು ಮತ್ತು ಸ್ಥಾನಗಳ ವಿವರ ಹೀಗಿವೆ:

ಮಹಾರಾಷ್ಟ್ರ (7 ಸ್ಥಾನಗಳು), ತಮಿಳುನಾಡು (6 ಸ್ಥಾನಗಳು), ಪಶ್ಚಿಮ ಬಂಗಾಳ ಮತ್ತು ಬಿಹಾರ (ತಲಾ 5 ಸ್ಥಾನಗಳು), ಒಡಿಶಾ (4 ಸ್ಥಾನಗಳು), ಅಸ್ಸಾಂ: (3 ಸ್ಥಾನಗಳು), ಹರಿಯಾಣ, ಛತ್ತೀಸ್‌ಗಢ ಮತ್ತು ತೆಲಂಗಾಣ: (ತಲಾ 2 ಸ್ಥಾನಗಳು) ಹಾಗೂ ಹಿಮಾಚಲ ಪ್ರದೇಶ (1 ಸ್ಥಾನಗಳು)

ಚುನಾವಣಾ ವೇಳಾಪಟ್ಟಿ

ಫೆಬ್ರವರಿ 26: ಅಧಿಕೃತ ಅಧಿಸೂಚನೆ ಬಿಡುಗಡೆ.

ಮಾರ್ಚ್ 5: ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ.

ಮಾರ್ಚ್ 6: ನಾಮಪತ್ರಗಳ ಪರಿಶೀಲನೆ.

ಮಾರ್ಚ್ 9: ಉಮೇದುವಾರಿಕೆ ಹಿಂಪಡೆಯಲು ಅಂತಿಮ ದಿನ.

ಮಾರ್ಚ್ 16: ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ; ಅಂದೇ ಸಂಜೆ 5 ಗಂಟೆಗೆ ಮತ ಎಣಿಕೆ.

ಈ ಬಾರಿ ನಿವೃತ್ತಿಯಾಗಲಿರುವ ಸದಸ್ಯರಲ್ಲಿ ಶರದ್ ಪವಾರ್, ಅಭಿಷೇಕ್ ಮನು ಸಿಂಘ್ವಿ, ಪ್ರಿಯಾಂಕಾ ಚತುರ್ವೇದಿ ಮತ್ತು ರಾಮದಾಸ್ ಅಠಾವಳೆ ಅವರಂತಹ ಪ್ರಮುಖ ನಾಯಕರಿದ್ದಾರೆ.

RELATED ARTICLES
- Advertisment -
Google search engine

Most Popular