Thursday, February 19, 2026
Google search engine

Homeಅಪರಾಧಅಕ್ರಮ ಮರಳುಗಾರಿಕೆ; ಪೊಲೀಸರ ಮಿಂಚಿನ ದಾಳಿ

ಅಕ್ರಮ ಮರಳುಗಾರಿಕೆ; ಪೊಲೀಸರ ಮಿಂಚಿನ ದಾಳಿ

ಅಕ್ರಮವಾಗಿ ಮರಳು ತೆಗಿತಿದ್ದ ಸ್ಥಳಕ್ಕೆ ಪೊಲೀಸರು ದಾಳಿ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕು ಐನೆಕಿದು ಗ್ರಾಮದ ಕಲ್ಲಾಜೆ ಎಂಬಲ್ಲಿ ಹೊಳೆಯಲ್ಲಿ ನಡೆದಿದೆ. ಈ ಹೊಳೆಯಲ್ಲಿ ಅಕ್ರಮವಾಗಿ ಇಟಾಚಿ ವಾಹನದ ಮೂಲಕ ಮರಳು ತೆಗೆಯಲಾಗುತ್ತಿದೆ ಎಂಬ ಮಾಹಿತಿಯ ಮೇರೆಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಆಂಜನೇಯ ರೆಡ್ಡಿ ಜಿ.ವಿ ರವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿದಾಗ ಆರೋಪಿತರು ಸ್ಥಳದಿಂದ ಪರಾರಿಯಾಗಿದ್ದಾರೆ.TATA HITACHI ಮತ್ತು KA-21-B-3929 EICHER ಟಿಪ್ಪರ್ ಹಾಗೂ KA-20-D-7639 ಟಿಪ್ಪರ್ ಲಾರಿಗಳನ್ನು ಮಹಜರು ಮೂಲಕ ಸ್ವಾಧೀನಪಡಿಸಿಕೊಳ್ಳಲಾಗಿದೆ. ಸುಮಾರು 50 ಟನ್ ಮರಳು (ಅಂದಾಜು ಮೌಲ್ಯ ₹50,000) ಪತ್ತೆಯಾಗಿದೆ. ಸ್ವಾಧೀನಪಡಿಸಿದ ವಾಹನಗಳ ಒಟ್ಟು ಅಂದಾಜು ಮೌಲ್ಯ ₹20 ಲಕ್ಷ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 08/2026 ರಂತೆ ಕಲಂ 303(2) BNS-2023, 4(1), 21(1) MMRD Act ಹಾಗೂ 43, 44 KMMCR 1994 ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

  • ಮಂಗಳೂರಿನಿಂದ ಶಂಶೀರ್ ಬುಡೋಳಿ
RELATED ARTICLES
- Advertisment -
Google search engine

Most Popular