Saturday, February 21, 2026
Google search engine

Homeರಾಜಕೀಯಕಮಿಷನ್ ಸಂಸ್ಕೃತಿ ಒಪ್ಪಿರುವುದು ಸರ್ಕಾರದ ಭ್ರಷ್ಟಾಚಾರ ಬಯಲಿಗೆ ತಂದಿದೆ : ಬಿವೈವಿ ವಾಗ್ದಾಳಿ

ಕಮಿಷನ್ ಸಂಸ್ಕೃತಿ ಒಪ್ಪಿರುವುದು ಸರ್ಕಾರದ ಭ್ರಷ್ಟಾಚಾರ ಬಯಲಿಗೆ ತಂದಿದೆ : ಬಿವೈವಿ ವಾಗ್ದಾಳಿ

ಬೆಂಗಳೂರು : ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸರ್ಕಾರದ ಆಡಳಿತದಲ್ಲಿ ‘ಕಮಿಷನ್ ಸಂಸ್ಕೃತಿ’ ಇರುವುದಾಗಿ ಒಪ್ಪಿಕೊಂಡಿರುವುದು ಕಾಂಗ್ರೆಸ್ ಸರ್ಕಾರದೊಳಗಿನ ಭ್ರಷ್ಟಾಚಾರವನ್ನು ಬಯಲಿಗೆ ತಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.

ಕಾಂಗ್ರೆಸ್‌ ನ ‘ಪಂಚ ಗ್ಯಾರಂಟಿ’ ಘೋಷಣೆಯನ್ನು ಟೀಕಿಸಿದ ವಿಜಯೇಂದ್ರ, ಕಾಂಗ್ರೆಸ್ ತನ್ನ ‘ಪಂಚ ಗ್ಯಾರಂಟಿ’ಯನ್ನು ಜೋರಾಗಿ ಪ್ರಚಾರ ಮಾಡುತ್ತಿದೆ. ಆದರೆ ಜನರಿಗೆ ಸಿಗುತ್ತಿರುವ ಏಕೈಕ ಗ್ಯಾರಂಟಿ ‘ಲಂಚ ಗ್ಯಾರಂಟಿ’ ಮಾತ್ರ ಎಂದರು.

ಸತೀಶ್ ಜಾರಕಿಹೊಳಿ ಅವರ ಹೇಳಿಕೆಗಳು ಜನರಲ್ಲಿ ಇರುವ ಗಂಭೀರ ಆತಂಕಗಳಿಗೆ ಮತ್ತಷ್ಟು ಸ್ಪಷ್ಟನೆ ನೀಡಿದೆ ಎಂದರು.ಕಾಂಗ್ರೆಸ್ ಇತಿಹಾಸದಿಂದಲೇ ಭ್ರಷ್ಟಾಚಾರಕ್ಕೆ ಹೆಸರಾಗಿದ್ದು, 1985ರಲ್ಲಿ ಆಗಿನ ಪ್ರಧಾನಿ ರಾಜೀವ್ ಗಾಂಧಿ, ದೆಹಲಿಯಿಂದ ಕಳುಹಿಸಲಾದ ಒಂದು ರೂಪಾಯಿಯಲ್ಲಿ ಕೇವಲ 15 ಪೈಸೆ ಮಾತ್ರ ಫಲಾನುಭವಿಗೆ ತಲುಪುತ್ತದೆ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದರು. ದಶಕಗಳು ಕಳೆದಿವೆ, ಸರ್ಕಾರಗಳು ಬದಲಾಗಿವೆ, ಘೋಷಣೆಗಳು ಬದಲಾಗಿವೆ. ಆದರೆ ಕಾಂಗ್ರೆಸ್ ಮತ್ತು ಭ್ರಷ್ಟಾಚಾರದ ನಡುವಿನ ಸಂಬಂಧ ಮುರಿದಂತಿಲ್ಲ ಎಂದು ಅವರು ಹೇಳಿದರು.

ಕಾಂಗ್ರೆಸ್ ಆಡಳಿತವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದೊಂದಿಗೆ ಹೋಲಿಕೆ ಮಾಡುತ್ತಾ, ನಮ್ಮ ಪ್ರಧಾನಿ ಸ್ಪಷ್ಟವಾಗಿ ಹೇಳಿದ್ದಾರೆ — ನಾ ಖಾವುಂಗಾ, ನಾ ಖಾನೆ ದೂಂಗಾ’ ಎಂದು ಹೇಳಿದರು.

ಸತೀಶ್ ಜಾರಕಿಹೊಳಿ ಅವರ ಹೇಳಿಕೆ ಸರ್ಕಾರದಲ್ಲಿ ವ್ಯವಸ್ಥಾತ್ಮಕ ಸಮಸ್ಯೆಯನ್ನು ಸೂಚಿಸುತ್ತದೆ. ಲೋಕೋಪಯೋಗಿ ಸಚಿವರೇ ‘ಕಮಿಷನ್ ರಾಜ್’ ಇದೆ ಎಂದು ಒಪ್ಪಿಕೊಂಡಾಗ ಸಾಮಾನ್ಯ ಜನರಿಗೆ ಯಾವ ಆಸೆ ಉಳಿಯುತ್ತದೆ, ವ್ಯಾಪಾರಿಗಳು ಅಥವಾ ತೆರಿಗೆದಾರರು ಈ ಸರ್ಕಾರದ ಮೇಲೆ ಹೇಗೆ ನಂಬಿಕೆ ಇಡುತ್ತಾರೆ ಎಂದು ಕೇಳಿದರು.

ಆಡಳಿತದಲ್ಲಿ ಹೊಣೆಗಾರಿಕೆ ಮತ್ತು ಪಾರದರ್ಶಕತೆ ಇರಬೇಕೆಂದು ಆಗ್ರಹಿಸಿದ ಅವರು, ಜನಹಿತದ ಭರವಸೆ ನೀಡುವ ಸರ್ಕಾರವೇ ಕಮಿಷನ್ ರಾಜ್‌ ಗೆ ತಲೆಬಾಗಿದರೆ, ಅದಕ್ಕೆ ಯಾವ ನೈತಿಕತೆ ಇದೆ ಎಂದರು.

RELATED ARTICLES
- Advertisment -
Google search engine

Most Popular