ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಾವೂರು 18 ನೇ ವಾರ್ಡಿನ ಈಶ್ವರ ನಗರದಿಂದ ಚಂಡ ಚಾಮುಂಡೇಶ್ವರಿ ಭಜನಾ ಮಂದಿರಕ್ಕೆ ಹೋಗುವ ಕಾಂಕ್ರೀಟೀಕರಣಗೊಂಡ ರಸ್ತೆಯ ಉದ್ಘಾಟನೆಯನ್ನು ಮಾನ್ಯ ಶಾಸಕರು ಡಾ. ವೈ ಭರತ್ ಶೆಟ್ಟಿಯವರು ನೆರವೇರಿಸಿದರು.
ಈ ಸಂದರ್ಭದಲ್ಲಿ, ನಿಕಟ ಪೂರ್ವ ಮ. ನ. ಪಾ ಸದಸ್ಯ ಗಾಯತ್ರಿ ರಾವ್, ಜಿಲ್ಲಾ ಕಾರ್ಯಕಾರಿಣಿ ಸದಸ್ಯರು ಸುಚೇತನ್ ಪೂಜಾರಿ, ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷ ಬಬಿತಾ ರವೀಂದ್ರ, ಕಾವೂರು ಮಹಾಶಕ್ತಿ ಕೇಂದ್ರ-2ರ ಅಧ್ಯಕ್ಷರು ಕೆ.ಪ್ರಜ್ವಲ್.ಶೆಟ್ಟಿ, ಮಂಗಳೂರು ಉತ್ತರ ಮಂಡಲ ಯುವ ಮೋರ್ಚಾ ಅಧ್ಯಕ್ಷರಾದ ರಕ್ಷಿತ್ ಪೂಜಾರಿ, ವಾರ್ಡಿನ ಪ್ರಧಾನ ಕಾರ್ಯದರ್ಶಿಗಳಾದ ಜಗದೀಶ್, ಜಗದೀಶ್ ಅಂಚನ್, ಬೂತಿನ ಅಧ್ಯಕ್ಷರು ಪ್ರಿತೇಶ್ ದೇವಾಡಿಗ, ಕಾರ್ಯದರ್ಶಿ ರಾಜೇಶ್ ಕುಲಾಲ್, ಸ್ಥಳಿಯ ಪ್ರಮುಖರಾದ ಶೇಖರ್ ಪೂಜಾರಿ,ಬಿ ಚಂದ್ರಶೇಖರ,ನವೀನ್, ದಿಲೀಪ್, ವಸಂತ್, ಬಾಲಕೃಷ್ಣ ದಾಸ್, ಪಕ್ಷದ ಕಾರ್ಯಕರ್ತರು ಹಾಗೂ ಊರಿನ ನಾಗರಿಕರು ಉಪಸ್ಥಿತರಿದ್ದರು.
ವರದಿ: ಶಂಶೀರ್ ಬುಡೋಳಿ



