ಹುಬ್ಬಳ್ಳಿ : ರಾಜ್ಯ ಸರ್ಕಾರ 2 ಲಕ್ಷ 84 ಸಾವಿರ ಸರ್ಕಾರಿ ಹುದ್ದೆ ತುಂಬಬೇಕಾಗಿತ್ತು. ಆದರೆ ಅದರ ಬಗ್ಗೆ ನಿರ್ಲಕ್ಷ್ಯವಹಿಸಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.
ಉದ್ಯೋಗಾಂಕ್ಷಿಗಳಿಗೆ ಉದ್ಯೋಗ ಬೇಕು, ಹೋರಾಟ ಮಾಡುತ್ತಿದ್ದಾರೆ. ಕಾಂಗ್ರೆಸ್‌ನವರು ಅಧಿಕಾರಕ್ಕೆ ಬರುವ ಮುನ್ನ ಭರವಸೆ ನೀಡಿದ್ದರು ಆದರೆ ಅದನ್ನು ಮರೆತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಆರಂಭದಲ್ಲಿ ಒಂದು ಲಕ್ಷ ನಂತರದಲ್ಲಿ ಉಳಿದ ಹುದ್ದೆಗಳ ಭರ್ತಿಗೆ ಭರವಸೆ ನೀಡಲಾಗಿತ್ತು. ಇದುವರೆಗೆ ಖಾಲಿ ಹುದ್ದೆಗಳನ್ನ ಭರ್ತಿ ಮಾಡಿಲ್ಲ. ನಿರುದ್ಯೋಗ ಅಭ್ಯರ್ಥಿಗಳಿಂದ ಹೋರಾಟ ನಡೆದಿದೆ. ಬಿಜೆಪಿ ಹಾಗೂ ನಮ್ಮ ನಾಯಕರು ನ್ಯಾಯಯುತ ಹೋರಾಟಕ್ಕೆ ಬೆಂಬಲ ಕೊಡುತ್ತಿದ್ದೇವೆ ಎಂದರು.
ರಾಜ್ಯ ಸರ್ಕಾರದಲ್ಲಿ ಹಣ ಇಲ್ಲ. ಖಜಾನೆ ಖಾಲಿಯಾಗಿದೆ.ಅದಕ್ಕೆ ಉದ್ಯೋಗ ಕೊಟ್ಟಿಲ್ಲಾ. ನಾವು ಖಂಡಿತವಾಗಿಯೂ ಅಭ್ಯರ್ಥಿಗಳ ಪರ ನಿಲ್ಲುತ್ತೇವೆ ಎಂದು ಸ್ಪಷ್ಟಪಡಿಸಿದರು.ದಲಿತರನ್ನು ಸಿಎಂ ಮಾಡುವ ಇತಿಹಾಸ ಕಾಂಗ್ರೆಸ್‌ಗಿದೆ ಎಂದು ಜಿ.ಪರಮೇಶ್ವರ್‌ಹೇಳಿಕೆ ಆದರೆ ಕಾಂಗ್ರೆಸ್‌ನವರು ಇದುವರೆಗೆ ಎಷ್ಟು ಮಂದಿ ದಲಿತರನ್ನು ಸಿಎಂ ಮಾಡಿದ್ದಾರೆ ಹೇಳಬೇಕು ಎಂದು ಪ್ರಶ್ನೆ ಮಾಡಿದರು.
ಗೃಹಸಚಿವ ಜಿ.ಪರಮೇಶ್ವರ್ ಅವರು, ನನಗೆ ಕಾಂಗ್ರೆಸ್‌ನಲ್ಲಿ ಅನ್ಯಾಯ ಆಗುತ್ತಿದೆ ಎಂದು ಹೇಳುತ್ತಿದ್ದಾರೆ. ಇದು ಸತ್ಯವಾದ ವಿಷಯವೇ ಎಂದು ಸಮರ್ಥಿಸಿಕೊಂಡರು. ಸಿಎಂ ಸಿದ್ದರಾಮಯ್ಯಾ ಯಾವ ಪಕ್ಷದಿಂದ ಬಂದವರು? ಮಲ್ಲಿಕಾರ್ಜುನ ಖರ್ಗೆದು ಏನಾಯಿತು ಗೊತ್ತಲ್ಲ? ಎಂದು ಅವರು ಪ್ರಶ್ನೆ ಮಾಡಿದರು.ಕಾಂಗ್ರೆಸ್‌ನಲ್ಲಿ ದಲಿತರಿಗೆ ಯಾವ ಕಾಲಕ್ಕೂ ನ್ಯಾಯ ಸಿಗಲ್ಲ. ಸರಿಯಾದ ಗೌರವ ಸಿಕ್ಕಿಲ್ಲ ಎಂದು ನಾನು ಸಹ ಪಕ್ಷ ಬಿಟ್ಟು ಬಿಜೆಪಿಗೆ ಬಂದೆ ಎಂದು ಹೇಳಿದರು.



