ದೇರಳಕಟ್ಟೆಯ ಯೆನೆಪೋಯ ಪರಿಗಣಿತ ವಿ.ವಿ.ಯ ಯೆನೆಪೋಯ ನರ್ಸಿಂಗ್ ಕಾಲೇಜಿನ ನರ್ಸಿಂಗ್ ಶಿಕ್ಷಣ ವಿಭಾಗ ಮತ್ತು ಪ್ರಥಮ ವರ್ಷದ ಎಂ.ಎಸ್ಸಿ ನರ್ಸಿಂಗ್ ವಿಭಾಗದ ವತಿಯಿಂದ ಡಿಜಿಟಲ್ ಶಿಕ್ಷಣಶಾಸ್ತ್ರ ಬೋಧನ -ಕಲಿಕೆಯಲ್ಲಿ ಕಲೆ ವಿಷಯದ ಬಗ್ಗೆ ಸಂಸ್ಥೆಯ ಯೆಂಡೋರೆನ್ಸ್ ಸಭಾಂಗಣದಲ್ಲಿ ರಾಷ್ಟ್ರೀಯ ಸಮ್ಮೇಳನ ನಡೆಯಿತು.
ಸಮ್ಮೇಳನ ಉದ್ಘಾಟಿಸಿದ ಲಕ್ಷ್ಮೀ ಮೆಮೋರಿಯಲ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ. ಲರಿಸ್ಸಾ ಮಾರ್ಥಾ ಸ್ಯಾಮ್ಸ್ ಮಾತನಾಡಿ ವಿದ್ಯಾರ್ಥಿಗಳು ಮತ್ತು ಬೋಧಕರು ಕೃತಕ ಬುದ್ಧಿಮತ್ತೆ ಸಾಧನಗಳನ್ನು ಬುದ್ಧಿವಂತಿಕೆಯಿಂದ ಬಳಸಿಕೊಳ್ಳಬೇಕು . ಡಿಜಿಟಲ್ ನೈತಿಕತೆ ಮತ್ತು ಆಧುನಿಕ ಶಿಕ್ಷಣದಲ್ಲಿ ಲಭ್ಯವಿರುವ ತಾಂತ್ರಿಕ ಸೌಲಭ್ಯಗಳ ಬಗ್ಗೆ ಅರಿವು ಹೊಂದಿರುವುದು ಅತ್ಯಗತ್ಯ ಎಂದರು.



