Saturday, March 7, 2026
Google search engine

Homeರಾಜ್ಯಮದ್ಯ ದರ ಸ್ಲ್ಯಾಬ್‌ 16ರಿಂದ 8ಕ್ಕೆ ಇಳಿಕೆ: ಮದ್ಯ ಕಂಪನಿಗಳ ಷೇರುಗಳಲ್ಲಿ ಜಿಗಿತ

ಮದ್ಯ ದರ ಸ್ಲ್ಯಾಬ್‌ 16ರಿಂದ 8ಕ್ಕೆ ಇಳಿಕೆ: ಮದ್ಯ ಕಂಪನಿಗಳ ಷೇರುಗಳಲ್ಲಿ ಜಿಗಿತ

ಬೆಂಗಳೂರು : ಸಿಎಂ ಸಿದ್ದರಾಮಯ್ಯನವರ ಬಜೆಟ್‌ ಪ್ರಸ್ತಾಪದಿಂದ ಯುನೈಟೆಡ್ ಬ್ರಿವರೀಸ್ ಮತ್ತು ಯುನೈಟೆಡ್ ಸ್ಪಿರಿಟ್ಸ್ ಕಂಪನಿಯ ಷೇರುಗಳು ಇಂದು ದಿಢೀರ್‌ ಭಾರೀ ಏರಿಕೆ ಕಂಡಿದೆ.

ಮಧ್ಯಾಹ್ನ 12 ಗಂಟೆಯ ವೇಳೆಗೆ ಯುನೈಟೆಡ್‌ ಬ್ರಿವರೀಸ್‌ ಒಂದು ಷೇರು 1,660 ರೂ., ಯುನೈಟೆಡ್ ಸ್ಪಿರಿಟ್ಸ್‌ 1,330 ರೂ. ಅಸುಪಾಸಿನಲ್ಲಿ ವ್ಯವಹಾರ ನಡೆಸುತ್ತಿತ್ತು. ಯಾವಾಗ ಸಿದ್ದರಾಮಯ್ಯನವರು ದರ ನಿಗದಿ ಸ್ಲ್ಯಾಬ್‌ಗಳನ್ನು 16 ರಿಂದ 8ಕ್ಕೆ ಇಳಿಸಲಾಗುವುದು ಎಂದು ಪ್ರಕಟಿಸಿದರೋ ಮದ್ಯ ಕಂಪನಿಗಳ ಷೇರು ಬೆಲೆ ಮಧ್ಯಾಹ್ನ 1 ಗಂಟೆಯಿಂದ ದಿಢೀರ್‌ ಏರಿಕೆಯಾಗತೊಡಗಿತು.

ಇಂದು ಯುನೈಟೆಡ್‌ ಬ್ರಿವರೀಸ್‌ 109.90 ರೂ.(ಶೇ.6.66) ಏರಿಕೆಯಾಗಿ 1,760 ರೂ. ನಲ್ಲಿ ವ್ಯವಹಾರ ಮುಗಿಸಿದರೆ ಯುನೈಟೆಡ್‌ ಬ್ರಿವರೀಸ್‌ 65.10 ರೂ.(ಶೇ.4.91) ಏರಿಕೆಯಾಗಿ 1,390.90 ರೂ.ನಲ್ಲಿ ವ್ಯವಹಾರ ಕೊನೆಗೊಳಿಸಿತು.

ಬಜೆಟ್‌ ಪ್ರಸ್ತಾಪದಲ್ಲಿ  ಏನಿದೆ?

ಕರ್ನಾಟಕ ಅಬಕಾರಿ ಕಾಯ್ದೆಯು 60 ವರ್ಷಗಳ ಹಿಂದೆ ಜಾರಿಗೆ ತಂದಿದ್ದು, ಈ ಕಾಯ್ದೆಯ ಹಲವು ನಿಬಂಧನೆಗಳು ಪ್ರಸಕ್ತ ಕಾಲಮಾನಕ್ಕೆ ಹೊಂದಿಕೆಯಾಗುವುದಿಲ್ಲ. ಕಳೆದ ಎರಡು ವರ್ಷಗಳಲ್ಲಿ, ಇಲಾಖೆಯಲ್ಲಿ ಪಾರದರ್ಶಕತೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಮಹತ್ವದ ಕ್ರಮಗಳನ್ನು ನಾವು ಕೈಗೊಂಡಿದ್ದೇವೆ. ವಿವಿಧ ಸನ್ನದುಗಳ ಮಾನ್ಯತೆಯನ್ನು ಒಂದು ವರ್ಷದಿಂದ ಐದು ವರ್ಷಗಳಿಗೆ ವಿಸ್ತರಿಸಲಾಗಿದೆ. ಆನ್‌ಲೈನ್ ಅನುಮೋದನೆ ಪ್ರಕ್ರಿಯೆಯನ್ನು 16 ಹಂತಗಳಿಂದ 7 ಹಂತಗಳಿಗೆ ಸರಳೀಕರಿಸಲಾಗಿದ್ದು, ಎರಡು ದಿನಗಳೊಳಗೆ ಅನುಮೋದನೆ ನೀಡಲಾಗುತ್ತಿದೆ.

ಅಬಕಾರಿ ಸುಂಕವು ಏಕರೂಪವಾಗಿರಲಿದ್ದು, ಹೆಚ್ಚುವರಿ ಅಬಕಾರಿ ಸುಂಕವನ್ನು ನಿರ್ದಿಷ್ಟ ಮಿತಿಯೊಳಗೆ ಎಕ್ಸ್‌ ಫ್ಯಾಕ್ಟರಿ ದರ ಪಟ್ಟಿಗಳ ಆಧಾರದ ಮೇಲೆ ವಿಧಿಸಲಾಗುವುದು. ಇದರಿಂದ ಮದ್ಯ ಬೆಲೆಯಲ್ಲಿ ತೀವ್ರ ಬದಲಾವಣೆಯಾಗದೇ ಕ್ರಮೇಣವಾಗಿ ವ್ಯತ್ಯಾಸವಾಗುವಂತೆ ಖಚಿತ ಪಡಿಸಲಾಗುವುದು.

ಮುಂದಿನ ಮೂರರಿಂದ ನಾಲ್ಕು ವರ್ಷಗಳಲ್ಲಿ, ನಾವು ಎಲ್ಲಾ ಪಾನೀಯಗಳ ಮೇಲೆ ಏಕರೂಪವಾಗಿ ಅನ್ವಯಿಸುವಂತೆ ಪ್ರತಿ ಲೀಟರ್‌ನಲ್ಲಿ ಮದ್ಯದ ಅಂಶವನ್ನು ಆಧರಿಸಿ ಅಬಕಾರಿ ಸುಂಕ ವಿಧಿಸುವ ಪ್ರಕ್ರಿಯೆಗೆ ಹಂತ ಹಂತವಾಗಿ ಪರಿವರ್ತನೆಗೊಳ್ಳುತ್ತೇವೆ.

ಹೊಸ ನೀತಿಯಡಿ ಸರ್ಕಾರದಿಂದ ಮದ್ಯದ ಬೆಲೆ ನಿರ್ಧಾರವಾಗುವುದನ್ನು ಮುಕ್ತಗೊಳಿಸಲಾಗುವುದು. ಮಾರುಕಟ್ಟೆ ಪರಿಗಣನೆ ಆಧಾರದ ಮೇಲೆ ಮದ್ಯ ಉತ್ಪನ್ನಗಳನ್ನು ಸ್ಲ್ಯಾಬ್‌ಗಳಲ್ಲಿ ಇರಿಸುವ ಅಧಿಕಾರವನ್ನು ಸಂಪೂರ್ಣವಾಗಿ ಉತ್ಪಾದಕರಿಗೆ ನೀಡಲಾಗುವುದು. ದರ ನಿಗದಿ ಸ್ಲ್ಯಾಬ್‌ಗಳನ್ನು ತರ್ಕಬದ್ಧಗೊಳಿಸುವ ಸಲುವಾಗಿ ಪ್ರಸ್ತುತ ಇರುವ 16 ಸ್ಲ್ಯಾಬ್‌ಗಳನ್ನು 8 ಸ್ಲ್ಯಾಬ್‌ಗಳಿಗೆ ಇಳಿಸಲಾಗುವುದು.

ಮದ್ಯ ವಲಯದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಡಿಸ್ಟಿಲರಿಗಳು ಮತ್ತು ಬ್ರೂವರಿಗಳು ಪ್ರವಾಸಿಗರಿಗೆ ಮದ್ಯ ಸವಿಯಲು ಮತ್ತು ತಮ್ಮ ಆವರಣದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಪ್ರವಾಸಿಗರಿಗೆ ಮಾರಾಟ ಮಾಡಲು ಅವಕಾಶ ನೀಡಲಾಗುವುದು.

RELATED ARTICLES
- Advertisment -
Google search engine

Most Popular