Sunday, March 8, 2026
Google search engine

Homeರಾಜ್ಯಗ್ಯಾರಂಟಿ ಯೋಜನೆಗಳ ಅನುಷ್ಟಾನದ ಪ್ರಗತಿ ಪರಿಶೀಲನೆ ಸಭೆ

ಗ್ಯಾರಂಟಿ ಯೋಜನೆಗಳ ಅನುಷ್ಟಾನದ ಪ್ರಗತಿ ಪರಿಶೀಲನೆ ಸಭೆ

ಮಂಗಳೂರು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನದ ಅಧ್ಯಕ್ಷ ಸುರೇಂದ್ರ ಕಂಬಳಿ ಅವರ ಅಧ್ಯಕ್ಷತೆಯಲ್ಲಿ ಮಂಗಳೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆ ನಡೆಯಿತು.
ಕಳೆದ ಹಲವಾರು ಸಭೆಗಳಲ್ಲಿ ಮಂಗಳೂರು ಮಾರ್ಗವಾಗಿ ಮೂಡುಜೆಪ್ಪು -ಉಳಾಯಿಬೆಟ್ಟು ಪ್ರದೇಶಕ್ಕೆ ತಾಲೂಕು ಮಟ್ಟದ ಗ್ಯಾರಂಟಿ ಅನುಷ್ಟಾನ ಸಮಿತಿಯ ಪ್ರಸ್ತಾವನೆಯಂತೆ ಹೊಸ ಕೆ.ಎಸ್.ಆರ್.ಟಿ.ಸಿ ಪ್ರಾರಂಭಿಸಿರುವುದಕ್ಕೆ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಕೆ.ಎಸ್.ಆರ್.ಟಿ.ಸಿ ವ್ಯವಸ್ಥಾಪಕಿ ನಿರ್ಮಲಾ ಅವರನ್ನು ಸಮಿತಿ ಸದಸ್ಯ ನವಾಜ್ ಉಳಾಯಿಬೆಟ್ಟು ಇವರು ಅಭಿನಂದಿಸಿದರು. ಮಂಗಳೂರು ಮಾರ್ಗವಾಗಿ ಮೂಡುಜೆಪ್ಪು -ಉಳಾಯಿಬೆಟ್ಟು ಪ್ರದೇಶಕ್ಕೆ ಹೊಸ ಬಸ್ಸು ಸಂಚಾರ ಪ್ರಾರಂಭಕ್ಕೆ ಸಂತಸ ವ್ಯಕ್ತಪಡಿಸಿದರು.
ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಕುಮಾರ್ ಹೊಳ್ಳ ಸ್ವಾಗತಿಸಿದರು. ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಟಾನದ ಸಮಿತಿ ಸದಸ್ಯರಾದ ಅಲ್ ಸ್ಟನ್ ಡಿ ಕುನ್ಹ, ತಾಲೂಕು ಗ್ಯಾರಂಟಿ ಯೋಜನೆ ಅನುಷ್ಟಾನದ ಸಮಿತಿ ಸದಸ್ಯರಾದ ಪ್ರಶಾಂತ್ ಎಸ್, ನವಾಜ್, ಶೈಲಾ ನೀತಾ ಡಿ ಸೋಜಾ, ರಿತೇಶ್ ಅಂಚನ್, ವಿದ್ಯಾ, ಶ್ರೀಧರ ಪಂಜ , ಹಾಗೂ ವಿವಿಧ ಇಲಾಖಾಧಿಕಾರಿಗಳು, ತಾಲೂಕು ಪಂಚಾಯತ್ ಯೋಜನಾಧಿಕಾರಿ ಸುಕನ್ಯ, ವ್ಯವಸ್ಥಾಪಕಿ ಸುವರ್ಣ ಜಿ ಹೆಗಡೆ, ವಿಷಯ ನಿರ್ವಾಹಕ ಆರೀಸ್ ಹಾಗೂ ತಾಲೂಕು ಐಇಸಿ ಸಂಯೋಜಕಿ ನಿಶ್ಮಿತ ಬಿ ಹಾಜರಿದ್ದರು.

ವರದಿ: ಶಂಶೀರ್ ಬುಡೋಳಿ

RELATED ARTICLES
- Advertisment -
Google search engine

Most Popular