ಮೈಸೂರು: ಗ್ರಂಥಾಲಯ ಜ್ಞಾನ ಭಂಡಾರದ ಗಣಿ ಇದ್ದಂತೆ. ಒಂದು ಉತ್ತಮ ಪುಸ್ತಕ ನೂರು ಜನ ಸ್ನೇಹಿತರಿಗೆ ಸಮಾನವಾಗಿದ್ದು, ಸಂಪಾದಿಸಿದ ಹಣ, ಆಸ್ತಿ, ಐಶ್ವರ್ಯವನ್ನು ಯಾರು ಬೇಕಾದರೂ ಕಸಿದುಕೊಳ್ಳಬಹುದು, ಇಲ್ಲವೇ ಕಳೆದುಕೊಳ್ಳಬಹುದು. ಆದರೆ, ಪುಸ್ತಕದಿಂದ ಪಡೆದ ಜ್ಞಾನವನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಅರ್ಥ ಶಾಸ್ತ್ರದ ವಿಭಾಗದ ಪ್ರಾಧ್ಯಾಪಕ ಡಾ.ಆರ್.ಹೆಚ್ ಪವಿತ್ರ ಹೇಳಿದರು.
ವಿದ್ಯಾರಣ್ಯಪುರಂನಲ್ಲಿರುವ ವಿದ್ಯಾರಣ್ಯ ಟ್ರಸ್ಟ್ ಆಯೋಜಿಸಿದ್ದ ರಾಷ್ಟ್ರೀಯ ಗ್ರಂಥಪಾಲಕ ದಿನಾಚರಣೆ ಕಾರ್ಯಕ್ರಮದಲ್ಲಿ ಭಾರತ ಗ್ರಂಥಾಲಯ ವಿಜ್ಞಾನದ ಪಿತಾಮಹ ಡಾ.ಎಸ್.ಆರ್.ರಂಗನಾಥನ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಆನಂತರ ದೀಪ ಬೆಳಗಿಸಿ
ಮಕ್ಕಳನ್ನು ಉದ್ದೇಶಿಸಿ ಗ್ರಂಥಾಲಯದ ಪಿತಾಮಹ ಎಸ್.ಆರ್.ರಂಗನಾಥ್ ಜೀವನ ಸಾಧನೆ ಉಪನ್ಯಾಸ ನೀಡಿದರು.
ಗ್ರಂಥಾಲಯಗಳು ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕಾಗಿವೆ. ಸರ್ಕಾರಗಳು ಗ್ರಂಥಾಲಯಕ್ಕೆ ಹೆಚ್ಚಿನ ಪುಸ್ತಕಗಳನ್ನು ಒದಗಿಸುತ್ತಿದ್ದು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪುಸ್ತಕ, ಪತ್ರಿಕೆ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರಣ್ಯ ಟ್ರಸ್ಟ್ ಅಧ್ಯಕ್ಷ ಡಾ.ಜಿ.ವಿ.ರವಿಶಂಕರ್, ನಗರಪಾಲಿಕೆ ಸದಸ್ಯ ಮ.ವಿ.ರಾಮ್ ಪ್ರಸಾದ್, ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಅಧ್ಯಕ್ಷ ಚಂದ್ರಶೇಖರ್, ಸಾಮಾಜಿಕ ಹೋರಾಟಗಾರ ವಿಕ್ರಮ ಅಯ್ಯಂಗಾರ್, ಸುಚೇಂದ್ರ, ಚಕ್ರಪಾಣಿ, ವಿದ್ಯ, ನಾಗಶ್ರೀ, ಹಾಗೂ ಇನ್ನಿತರರು ಭಾಗವಹಿಸಿದ್ದರು.